IPL 2025ರಲ್ಲೂ ಫ್ಯಾನ್ಸ್​ಗೆ ಫುಲ್ ಮನರಂಜನೆ.. ಮಹೇಂದ್ರ ಸಿಂಗ್ ಧೋನಿ ಸಿದ್ಧತೆ ಹೇಗಿದೆ?

author-image
Bheemappa
Updated On
ಕೋಟಿ ಕೋಟಿ ಹಣ ಕಳೆದುಕೊಂಡ MS ಧೋನಿ.. ಮಾಜಿ ಕ್ಯಾಪ್ಟನ್ ಲಾಸ್ ಆಗಿದ್ದು ಹೇಗೆ?
Advertisment
  • ಪ್ರತಿ ಸೀಸನ್​​ಗೂ ಮುನ್ನ ಧೋನಿ ಏನೆಲ್ಲಾ ಮಾಡ್ತಾರೆ ಅನ್ನೋದು ಇಲ್ಲಿದೆ
  • IPL ಆರಂಭಕ್ಕೂ ಮೊದಲೇ ದೇವಿಯ ಆಶೀರ್ವಾದ ಪಡೆಯುವ​ ಧೋನಿ
  • ಎಂ.ಎಸ್​ ಧೋನಿ- ಸೀಸನ್​-18ರ ಐಪಿಎಲ್ ಅಖಾಡಕ್ಕೆ ಭರ್ಜರಿ ತಯಾರಿ

ಸೀಸನ್​-18ರ ಐಪಿಎಲ್​ ಹತ್ತಿರವಾಗ್ತಿದ್ದಂತೆ, ಮಹೇಂದ್ರ ಸಿಂಗ್​ ಧೋನಿಯ ಟ್ರೆಂಡ್​ ಶುರುವಾಗಿದೆ. ಅಭಿಮಾನಿಗಳ ಮನದಲ್ಲಿ ಮಾಹಿಯ ಐಪಿಎಲ್​ ಸಿದ್ಧತೆ ಹೇಗಿದೆ, ಏನ್ ಮಾಡ್ತಿದ್ದಾರೆ ಅನ್ನೋ ಪ್ರಶ್ನೆಗಳು ಕಾಡ್ತಿವೆ. ಪ್ರತಿ ಸೀಸನ್​ನಂತೆ ಈ ಸೀಸನ್​ನಲ್ಲೂ ಧೋನಿ ಐಪಿಎಲ್​ ಆರಂಭಕ್ಕೂ ಮುನ್ನ ಮಾಡ್ತಿದ್ದ ಕೆಲಸಗಳನ್ನ ಶುರು ಮಾಡಿದ್ದಾರೆ.

ಸೀಸನ್​-18ರ ಐಪಿಎಲ್​​​​​​​​​​​​​​​​​​​ ಟೂರ್ನಿಗೆ ಕೌಂಟ್​ಡೌನ್ ಶುರುವಾಗಿದೆ. ಸೀಸನ್​​ ಗೆಲ್ಲೋಕೆ ಆಯಾ ಫ್ರಾಂಚೈಸಿಗಳು ಭರದ ಸಿದ್ಧತೆಯಲ್ಲಿ ನಿರತವಾಗಿವೆ. ನಾಯಕನ ಆಯ್ಕೆ ಸೇರಿದಂತೆ ಇನ್ನಿತರ ಕೆಲಸಗಳಲ್ಲಿ ಫ್ರಾಂಚೈಸಿಗಳಲ್ಲಿ ಬ್ಯುಸಿಯಾಗಿವೆ. ಐಪಿಎಲ್​ ಕ್ರಿಕೆಟ್​ನ ಲೆಜೆಂಡ್​, ಹಾಲಿ ಪಾರ್ಟ್​ ಟೈಮ್ ಕ್ರಿಕೆಟರ್ ಎಂ​.ಎಸ್​ ಧೋನಿ ಕೂಡ ಸಿದ್ಧತೆ ಆರಂಭಿಸಿದ್ದಾರೆ.

publive-image

ವರ್ಷಾದ್ಯಾಂತ ಕ್ರಿಕೆಟ್​ನಿಂದ ದೂರ ಉಳಿಯೋ ಮಾಹಿ, ಐಪಿಎಲ್ ಅಖಾಡದಲ್ಲಿ ಮಾತ್ರವೇ ಅಂಗಳಕ್ಕಿಳಿಯುತ್ತಿದ್ದಾರೆ. ಹೀಗಾಗಿ ಐಪಿಎಲ್​ ಆರಂಭಕ್ಕೆ ಎರಡ್ಮೂರು ತಿಂಗಳು ಇರುವಂತೆ ಧೋನಿ, ಪ್ರಿಪರೇಷನ್ ಆರಂಭಿಸ್ತಾರೆ. ಧೋನಿಯ ಈ ಸಿದ್ಧತೆ ಭಾರೀ ಸದ್ದು ಮಾಡುತ್ತೆ. ಪ್ರ್ಯಾಕ್ಟೀಸ್ ಸೆಷನ್​​ನ ಒಂದೇ ಒಂದು ಫೋಟೋ ಹೊರ ಬಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಯಾಗುತ್ತೆ. ಈ ಬಾರಿಯೂ ಕೂಡ ಕ್ರೇಜ್​ ಕಾ ಬಾಪ್​ ಮಾಹಿಯ, ಕ್ರೇಜ್​ ಶುರುವಾಗಿದೆ.

ಪ್ರತಿ ದಿನ ಬೈಕ್, ಕಾರ್ ಓಡಿಸ್ತಾ ಧೋನಿ ಚಿಲ್​​..!

ದಿ ಗ್ರೇಟ್ ಲೀಡರ್ ಮಾಹಿ, ಬೈಕ್ ಲವರ್ ಅನ್ನೋದು ಓಪನ್ ಸಿಕ್ರೇಟ್​.. ಧೋನಿ ಗ್ಯಾರೇಜ್​ನಲ್ಲಿ ಇರೋ ವಿಂಟೇಜ್​​​​​ ಬೈಕ್​ಗಳಿಗೆ ಲೆಕ್ಕವೇ ಇಲ್ಲ. ಕಾರ್​ ಕ್ರೇಜ್​ ಕೂಡ ಅಷ್ಟೇ ಇದೆ. ಯಾವುದೇ ವೆಹಿಕಲ್ ಸಿಗಲಿ ಒಂದ್ ರೌಂಡ್​ ಹಾಕೋದು ಮಾಹಿಗೆ ಅಚ್ಚುಮೆಚ್ಚು. ಸದ್ಯ ರಾಂಚಿ ಫಾರ್ಮ್​ ಹೌಸ್​ನಲ್ಲಿ ಬೀಡು ಬಿಟ್ಟಿರೋ ಧೋನಿ, ತನ್ನ ನೆಚ್ಚಿನ ಯಮಹಾ ಆರ್​ಎಕ್ಸ್​ ಬೈಕ್​ನಲ್ಲಿ ದಿನ ಓಡಾಟ ನಡೆಸ್ತಿದ್ದಾರೆ.

ಯಮಹಾ ಆರ್​ಎಕ್ಸ್​ ಮಾತ್ರವೇ ಅಲ್ಲ, ತನ್ನ ಗ್ಯಾರೇಜ್​ನಲ್ಲಿರೋ ಇತರ ಬೈಕ್ ಅಥವಾ ಕಾರುಗಳನ್ನೂ ಆಗಾಗ ಹೊರಗೆ ತರುವ ಧೋನಿ, ರಾಂಚಿಯಲ್ಲಿ ಕ್ಯಾಮೆರಾ ಕಣ್ಣಿಗೆ ಬೀಳ್ತಿದ್ದಾರೆ. ಅಂದ್ಹಾಗೆ ವರ್ಷಪೂರ್ತಿ ಎಲ್ಲರಿಂದ ದೂರ ಉಳಿಯೋ ಧೋನಿ, ರಾಂಚಿಯಲ್ಲಿ ಹೀಗೆ ಕಾಣಿಸಿಕೊಳ್ಳೋಕೆ ಸ್ಟಾರ್ಟ್​ ಮಾಡಿದ್ರಂದ್ರೆ ಐಪಿಎಲ್​ಗೆ ಸಿದ್ಧತೆ ಆರಂಭಿಸಿದರು ಅಂತಲೇ ಅರ್ಥ.

ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಜಿಮ್​ನಲ್ಲಿ ವರ್ಕೌಟ್​.!

ವರ್ಷ ಪೂರ್ತಿ ಕ್ರಿಕೆಟ್​ನಿಂದ ದೂರ ಉಳಿಯುವ ಮಾಹಿ, ಐಪಿಎಲ್​ ಮುನ್ನ ಫಿಟ್​ನೆಸ್​ ಕಡೆಗೆ ಹೆಚ್ಚು ಗಮನವಹಿಸ್ತಾರೆ. ಫುಲ್ ಫಿಟ್​ ಆಗಿ ಐಪಿಎಲ್ ಅಖಾಡಕ್ಕಿಳಿಯಲು 3 ತಿಂಗಳು ಮುನ್ನವೇ ಮಾಹಿ, ಜಿಮ್​ನಲ್ಲಿ ಸಕತ್ ವರ್ಕೌಟ್ ನಡೆಸ್ತಾರೆ. ಈ ಬಾರಿ ಇದನ್ನೇ ಫಾಲೋ ಮಾಡುವ ಮಾಹಿ, ತವರಿನ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಜಿಮ್​​ನಲ್ಲಿ ಸಖತ್ ವರ್ಕೌಟ್ ನಡೆಸ್ತಿದ್ದಾರೆ. ಆ ಮೂಲಕ ಐಪಿಎಲ್​ ಸೀಸನ್​-18ಕ್ಕೆ ರೆಡಿ ಆಗ್ತಿದ್ದಾರೆ.

ಇದನ್ನೂ ಓದಿ:Bigg Boss ಗ್ರ್ಯಾಂಡ್ ಫಿನಾಲೆ ಗೆಲ್ಲೋದು ಹನುಮಂತು.. ಅದು ಹೇಗೆ?

publive-image

ಪ್ರತಿ ಸೀಸನ್​ ಆರಂಭಕ್ಕೂ ಕುಲ ದೇವತೆ ದರ್ಶನ.!

ಮಹೇಂದ್ರ ಸಿಂಗ್ ಧೋನಿಯ ಇಷ್ಟ ದೇವತೆ ಶ್ರೀ ದುರ್ಗಾ ಮಾತೆ. ಪ್ರತಿ ಟೂರ್ನಿ, ಪ್ರತಿ ಐಪಿಎಲ್​ ಸೀಸನ್​ಗೂ ಮುನ್ನ ಎಂ.ಎಸ್.ಧೋನಿ ಕುಲದೇವತೆ ದಿಯೋರಿ ಮಾ ಮಂದಿರಕ್ಕೆ ಭೇಟಿ ನೀಡ್ತಾರೆ. ತಾಯಿಯ ಆಶೀರ್ವಾದ ಪಡೆದ ಮೇಲೆಯೇ ಕ್ರಿಕೆಟ್​ ಅಂಗಳಕ್ಕೆ ಇಳಿಯಲು ಧೋನಿ ರೆಡಿಯಾಗೋದು. ಈಗಲ್ಲ, ಕರಿಯರ್​ನ ಆರಂಭಿಕ ದಿನಗಳಿಂದಲೂ ಇದೇ ಪದ್ಧತಿಯನ್ನ ಫಾಲೋ ಮಾಡಿಕೊಂಡಿ ಬಂದಿದ್ದಾರೆ. ಅದರಂತೆಯೇ ಸೀಸನ್​​-18ರ ಐಪಿಎಲ್ ಆರಂಭಕ್ಕೂ ಮುನ್ನ ಕೂಡ ರಾಂಚಿಯಲ್ಲಿರುವ ದಿಯೋರಿ ಮಾ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಮಾ ದಿಯೋರಿ ಮಂದಿರಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದ ಬಳಿಕ ಐಪಿಎಲ್​ಗೆ ತಯಾರಿಯನ್ನ ಮಾಹಿ ಆರಂಭಿಸಿದ್ದಾರೆ. ಬ್ಯಾಟ್​ ಹಿಡಿದು ನೆಟ್ಸ್​ನಲ್ಲಿ ಪ್ರಾಕ್ಟೀಸ್​ ಕೂಡ ಶುರು ಇಟ್ಟುಕೊಂಡಿದ್ದಾರೆ. ಆ ಮೂಲಕ ಸೀಸನ್​-18ರ ಐಪಿಎಲ್ ಅಖಾಡಕ್ಕೆ ಭರ್ಜರಿ ತಯಾರಿ ನಡೆಸ್ತಿರುವ ಮಾಹಿ, ಫ್ಯಾನ್ಸ್​ಗೆ ಫುಲ್ ಮನರಂಜನೆ ನೀಡೋ ಲೆಕ್ಕಾಚಾರದಲ್ಲಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment