ಬಾಯಿಯ ಆರೋಗ್ಯಕ್ಕೆ ಈ 5 ಫುಡ್​ಗಳು ಸೂಪರ್; ಯಾವುವು ಅಂತ ಗೊತ್ತಾ?

author-image
Gopal Kulkarni
Updated On
ಬಾಯಿಯ ಆರೋಗ್ಯಕ್ಕೆ ಈ 5 ಫುಡ್​ಗಳು ಸೂಪರ್; ಯಾವುವು ಅಂತ ಗೊತ್ತಾ?
Advertisment
  • ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರ ಸೇವಿಸಿ
  • ಓರಲ್ ಹೆಲ್ತ್​ ಅಂದ್ರೆ ಕೇವಲ ಬ್ರಶ್ ಮತ್ತು ಫ್ಲಾಸ್ಸಿಂಗ್ ಮಾತ್ರ ಅಲ್ಲ
  • ಬಾಯಿಯ ಆರೋಗ್ಯ ಕಾಪಾಡಲು ನಮ್ಮ ಆಹಾರ ಕ್ರಮವೂ ಮುಖ್ಯ

ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ನಾವು ತುಂಬಾ ಪ್ರಾಮುಖ್ಯತೆಯನ್ನು ನೀಡಬೇಕು. ಕೇವಲ ತಾಜಾ ಉಸಿರಾಟಕ್ಕಾಗಿ ಮಾತ್ರ ನಾವು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವದಲ್ಲ. ಬಾಯಿ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವುದರಿಂದ ನಮಗೆ ಅನೇಕ ಲಾಭಗಳಿವೆ. ಹಾಗಂತ ಕೇವಲ ಹಲ್ಲುಜ್ಜುವುದು, ಪ್ಲಾಸ್ಸಿಂಗ್ ಮಾಡುವುದುರಿಂದ ಮಾತ್ರವಲ್ಲ. ಹಲವು ಆಹಾರಗಳು ಕೂಡ ಬಾಯಿಯ ಆರೋಗ್ಯವನ್ನು ರಕ್ಷಣೆ ಮಾಡುತ್ತವೆ ಅದರಲ್ಲಿ ಮೊದಲ ಸಾಲಿಗೆ ಬಂದು ನಿಲ್ಲುವುದು ಸೇಬು ಹಣ್ಣು

publive-image

ಸೇಬು ಹಣ್ಣು: ಸೇಬು ಹಣ್ಣುಗಳನ್ನು ಸಾಮಾನ್ಯವಾಗಿ ನಾವು ನೈಸರ್ಗಿಕ ಟೂತ್​ಬ್ರಶ್ ಎಂದೇ ಕರೆಯುತ್ತೇವೆ.ಈ ಒಂದು ಹಣ್ಣುನ್ನು ಸೇವಿಸುವುದರಿಂದ ಬಾಯಿಯಲ್ಲಿ ಲಾಲಾರಸ ಹೆಚ್ಚು ಉತ್ಪಾದನೆ ಆಗುತ್ತದೆ. ಇದು ಬಾಯಿಯಲ್ಲಿ ಉತ್ಪತ್ತಿಯಾಗುವ ಆಸಿಡ್ ಅಂಶವನ್ನು ನಿರ್ಮೂಲನೆ ಮಾಡುತ್ತದೆ ಮತ್ತು ಆಹಾರದ ಕಣಗಳನ್ನು ಸ್ವಚ್ಛಗೊಳಿಸುತ್ತದೆ.

publive-image

ಕ್ಯಾರೆಟ್ : ಕ್ಯಾರೆಟ್​ ಸೇವನೆಯಿಂದ ನಮ್ಮ ಹಲ್ಲುಗಳ ಮೇಲ್ಭಾಗವನ್ನು ಅದು ತಿಕ್ಕಿ ತೊಳೆಯುವ ರೀತಿಯಲ್ಲಿ ಕೆಲಸ ಮಾಡುತ್ತದೆ. ಮತ್ತು ಹಲ್ಲುಗಳ ಮೇಲ್ಭಾಗದ ಮೇಲೆ ಬೆಳೆಯುವ ಕಲೆಗಳನ್ನು ಇಲ್ಲದಂತೆ ಮಾಡುತ್ತದೆ. ಅದು ಅಲ್ಲದೇ ಇದರಲ್ಲಿ ವಿಟಮಿನ್ ಎ ಇರುವುದರಿಂದ ಇದು ಹಲ್ಲು ಹಾಗೂ ವಸಡುಗಳ ಆರೋಗ್ಯವನ್ನು ಕಾಪಾಡುತ್ತದೆ.

publive-image

ಗ್ರೀನ್ ಟೀ: ಗ್ರೀನ್ ಟೀಯಲ್ಲಿ ಕ್ಯಾಟೆಚಿನ್​ಗಳು ಇರುವುದರಿಂದ ಇದು ಬಾಯಿಯಲ್ಲಿ ಕೆಟ್ಟ ಬ್ಯಾಕ್ಟಿರಿಯಾಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ. ಇದರಿಂದ ಬಾಯಿಯಿಂದ ಬರುವ ಕೆಟ್ಟ ವಾಸನೆ ನಿರ್ಮೂಲನೆ ಆಗಿ. ವಸಡಿನ ಸಮಸ್ಯೆಗಳು ಉದ್ಭವಾಗದಂತೆ ನೋಡಿಕೊಳ್ಳುತ್ತದೆ.

publive-image

ಮೊಸರು: ಮೊಸರನ್ನು ಹೆಚ್ಚು ಸೇವಿಸುವುದರಿಂದ ಬಾಯಿಯಲ್ಲಿ ಆರೋಗ್ಯವಂತ ಬ್ಯಾಕ್ಟಿರಿಯಾಗಳು ಬೆಳೆಯುತ್ತವೆ. ಉಸಿರನ್ನು ಸದಾ ತಾಜಾವಾಗಿ ಕಾಪಾಡುವಲ್ಲಿ ಮೊಸರು ಪ್ರಮುಖ ಪಾತ್ರವಹಿಸುತ್ತದೆ. ಅನಾರೋಗ್ಯಕಾರಿ ಬ್ಯಾಕ್ಟಿರಿಯಾಗಳನ್ನು ನಾಶ ಮಾಡಿ ಬಾಯಿಯ ಆರೋಗ್ಯವನ್ನು ಕಾಪಾಡುತ್ತದೆ.

publive-image

ಪಾಲಕ್: ಪಾಲಕ್​ನಲ್ಲಿ ಹೆಚ್ಚು ಐರನ್ ಅಂದ್ರೆ ಕಬ್ಬಿಣಾಂಶ ಇರುವುದರಿಂದ ಇದು ತಾಜಾ ಉಸಿರಿಗೆ ಸಹಾಯಕವಾಗುತ್ತದೆ. ವಸಡಿನ ಆರೋಗ್ಯವನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ.ಹೀಗಾಗಿ ಈ ಐದು ಆಹಾರಗಳು ಬಾಯಿಯ ಆರೋಗ್ಯವನ್ನು ಕಾಪಾಡುವಲ್ಲಿ ತುಂಬಾನೇ ಪ್ರಯೋಜನಕಾರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment