/newsfirstlive-kannada/media/post_attachments/wp-content/uploads/2024/09/Smartphone-1.jpg)
ಹೊಸ ಸ್ಮಾರ್ಟ್‌ಫೋನ್ ಖರೀದಿಸೋ ಆಲೋಚನೆಯಲ್ಲಿರೋರಿಗೆ ಒಳ್ಳೆಯ ನ್ಯೂಸ್ ಇದು. 20 ಸಾವಿರ ರೂಪಾಯಿ ಒಳಗೆ ಈ ಐದು ಮೊಬೈಲ್ಗಳನ್ನು ನೀವು ಕೊಂಡುಕೊಳ್ಳಬಹುದಾಗಿದೆ.
Redmi Note 14
ಈ ಸ್ಮಾರ್ಟ್‌ಫೋನ್ ತುಂಬಾನೇ ಜನಪ್ರಿಯಗೊಂಡಿದೆ. ಇದು 6.67-ಇಂಚಿನ AMOLED ಡಿಸ್ಪ್ಲೆ ಹೊಂದಿದೆ. 120Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡಲಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ ಪ್ರೊಸೆಸರ್ ಮತ್ತು 256GB ಇಂಟರನಲ್ ಸ್ಟೋರೇಜ್ ವ್ಯವಸ್ಥೆ ಇದೆ. 50MP ಬ್ಯಾಕ್ಸೈಡ್ ಕ್ಯಾಮೆರಾ ಮತ್ತು 5110mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಇದರ ಬೆಲೆ 17,999 ರೂಪಾಯಿಯಿಂದ ಇದೆ.
OPPO K13 5G
20 ಸಾವಿರ ರೂಪಾಯಿ ಒಳಗೆ ಸಿಗುವ ಅತ್ಯುತ್ತಮ ಫೋನ್ಗಳಲ್ಲಿ ಇದೂ ಒಂದು. ಇತ್ತೀಚೆಗಷ್ಟೇ ಇದು ಮಾರುಕಟ್ಟೆಗೆ ಬಂದಿದೆ. ಇದು 6.67 ಇಂಚಿನ 120Hz OLED ಡಿಸ್ಪ್ಲೇ ಹೊಂದಿದೆ. ಸ್ನಾಪ್‌ಡ್ರಾಗನ್ 6 ಜೆನ್ 4 ಪ್ರೊಸೆಸರ್, 8 ಜಿಬಿ RAM ಮತ್ತು 128 ಜಿಬಿ ಸ್ಟೋರೇಜ್ ನೀಡಲಿದೆ. 50MP ಡ್ಯುಯಲ್ ಬ್ಯಾಕ್ಸೈಡ್ ಕ್ಯಾಮೆರಾ ಹಾಗೂ 16MP ಫ್ರಂಟ್ ಕ್ಯಾಮೆರಾ ವ್ಯವಸ್ಥೆ ಇದೆ. 7000mAh ಬ್ಯಾಟರಿ ಸಾಮರ್ಥ್ಯ ಹಾಗೂ 80W ವೇಗದ ಚಾರ್ಜಿಂಗ್ ಸಪೋರ್ಟಿಂಗ್ ಇದೆ. ವಿಶೇಷ ಅಂದರೆ ಈ ಫೋನ್ನಲ್ಲಿ AI ಫೀಚರ್ಸ್ ಕೂಡ ಒಳಗೊಂಡಿದೆ. ಇದರ ಬೆಲೆ ಕೂಡ 17,999 ರೂಪಾಯಿ.
ಇದನ್ನೂ ಓದಿ: ಕಮ್ಮಿ ಬೆಲೆಗೆ Oppo ಹೊಸ ಸ್ಮಾರ್ಟ್‌ಫೋನ್.. ಫೀಚರ್ಸ್ ಮಾತ್ರ ಅದ್ಭುತ..!
POCO X7
ಇದು ಕೂಡ ಉತ್ತಮ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್. 6.67-ಇಂಚಿನ HD ಡಿಸ್ಪ್ಲೆ ಹೊಂದಿದೆ. ಡೈಮೆನ್ಸಿಟಿ 7300 ಅಲ್ಟ್ರಾ ಚಿಪ್‌ಸೆಟ್, 8GB RAM ಮತ್ತು 128GB ಸ್ಟೋರೇಜ್ ಸಿಗಲಿದೆ. 50MP ಕ್ಯಾಮೆರಾ ಹಾಗೂ 5500mAh ಬ್ಯಾಟರಿ ಪವರ್ ಹೊಂದಿದೆ. ಇದರ ಆರಂಭಿಕ ಬೆಲೆ 17,999 ರೂಪಾಯಿ.
Realme P3 Pro
- ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7s Gen 3 ಪ್ರೊಸೆಸರ್
- 50MP ಕ್ಯಾಮೆರಾ
- 256GB ಸ್ಟೋರೇಜ್
- CPWD ಕವರ್ಡ್ ಎಡ್ಜ್ ಫ್ಲೋ ಡಿಸ್ಪ್ಲೇ
- 6000mAh ಬ್ಯಾಟರಿ ಪವರ್
- 80W ವೇಗದ ಚಾರ್ಜಿಂಗ್
- ಆರಂಭಿಕ ಬೆಲೆ 19,999 ರೂಪಾಯಿ
CMF ಫೋನ್ 2 ಪ್ರೊ
- 6.77-ಇಂಚಿನ AMOLED ಡಿಸ್ಪ್ಲೇ
- 120Hz ರಿಫ್ರೆಶ್ ರೇಟ್
- ಡೈಮೆನ್ಸಿಟಿ 7300 ಪ್ರೊ ಪ್ರೊಸೆಸರ್
- 8GB RAM ಮತ್ತು 128GB ಸ್ಟೋರೇಜ್
- 50MP ಬ್ಯಾಕ್ಸೈಡ್ ಕ್ಯಾಮೆರಾ
- 16MP ಸೆಲ್ಫಿ ಕ್ಯಾಮೆರಾ
- 5000mAh ಬ್ಯಾಟರಿ ಪವರ್
- ಆರಂಭಿಕ ಬೆಲೆ 18,999 ರೂಪಾಯಿ ಆಗಿದೆ.
ಇದನ್ನೂ ಓದಿ: VIDEO: ಆಪರೇಷನ್ ಸಿಂಧೂರ್ಗೆ ಬೆಂಗಳೂರು ಕನೆಕ್ಷನ್.. ಉಗ್ರರ ನೆಲೆ ಧ್ವಂಸ ಮಾಡಿದ್ದು ಕರ್ನಾಟಕದ ಡ್ರೋಣ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ