/newsfirstlive-kannada/media/post_attachments/wp-content/uploads/2025/06/GILL.jpg)
ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಹೊಸ ಪರ್ವ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಹೊಸ ತಂಡ, ಹೊಸ ಆಟಗಾರರು, ಹೊಸ ಹುರುಪಿನೊಂದಿಗೆ ಮಹತ್ವದ ಸರಣಿಗೆ ಹೊಸ ನಾಯಕ ಸಜ್ಜಾಗಿದ್ದಾರೆ. ಸಿಂಹಾಸನ ಏರಿರುವ ನೂತನ ಸಾರಥಿ ಗಿಲ್ ಇಂಗ್ಲೆಂಡ್ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ತಂಡದ ನೂತನ ಟೆಸ್ಟ್ ಸಾರಥಿಗೆ ಮೊದಲ ಪ್ರವಾಸದಲ್ಲೇ ಕಠಿಣ ಸವಾಲು ಎದುರಾಗಲಿದೆ. ಅಗ್ನಿಪರೀಕ್ಷೆಯ ಕಣದಲ್ಲಿರೋ ಗಿಲ್ಗೆ ಪ್ರಮುಖವಾಗಿ 5 ಚಾಲೆಂಜ್ಗಳು ಎದುರಾಗಿವೆ.
ಚಾಲೆಂಜ್ ನಂ.1: ನಾಯಕತ್ವದ ನಿರ್ವಹಣೆ
ನಾಯಕನಾಗಿ ಗಿಲ್ ಐಪಿಎಲ್ನಲ್ಲಿ ತಂಡ ಮುನ್ನಡೆಸಿದ್ದಾರೆ. ಐಪಿಎಲ್ನ ಆಟವೇ ಬೇರೆ, ರಿಯಲ್ ಕ್ರಿಕೆಟ್ ಟೆಸ್ಟ್ನ ಆಟವೇ ಬೇರೆ. ಇದು 5 ದಿನಗಳ ಸುದೀರ್ಘ ಗೇಮ್. ಇಲ್ಲಿ ತಾಳ್ಮೆ ಸಿಕ್ಕಾಪಟ್ಟೆ ಮುಖ್ಯ. ನಾಯಕ ವಿಚಲಿತನಾದ್ರೆ ಇಡೀ ತಂಡಕ್ಕೆ ಏಟು ಬೀಳುತ್ತೆ. ರೆಡ್ ಬಾಲ್ ಫಾರ್ಮೆಟ್ಗೆ ಬಂದ್ರೆ ಒಂದು ರಣಜಿ ಪಂದ್ಯದಲ್ಲಿ ಮಾತ್ರ ಗಿಲ್ ನಾಯಕತ್ವ ನಿಭಾಯಿಸಿದ್ದಾರೆ. ಇದೀಗ ಒತ್ತಡದ ಸರಣಿಯಲ್ಲಿ ಮೊದಲ ಬಾರಿಗೆ ತಂಡದ ನಾಯಕತ್ವದ ಜವಾಬ್ದಾರಿ ಗಿಲ್ ಹೆಗಲೇರಿದೆ. ಒತ್ತಡಕ್ಕೆ ಒಳಗಾಗದೇ ಸಮರ್ಥವಾಗಿ ನಿರ್ವಹಿಸೋದೇ ಗಿಲ್ಗೆ ಬಿಗ್ ಚಾಲೆಂಜ್ ಆಗಲಿದೆ.
ಇದನ್ನೂ ಓದಿ: ವಿಜಯ್ ಮಲ್ಯಗೆ ತಪ್ಪದ ಸಂಕಷ್ಟಗಳು.. ಸಾಲ, ಬಡ್ಡಿ, ಚಕ್ರ ಬಡ್ಡಿಯ ಅಸಲಿ ಲೆಕ್ಕಾಚಾರ ಇಲ್ಲಿದೆ..!
ಚಾಲೆಂಜ್ ನಂ.2: ವಿದೇಶದಲ್ಲಿ ಬ್ಯಾಟಿಂಗ್ ವೈಫಲ್ಯ
ಗಿಲ್ ಭಾರತದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಸಾಲಿಡ್ ರೆಕಾರ್ಡ್ ಹೊಂದಿದ್ದಾರೆ. ವಿದೇಶಿ ಪಿಚ್ಗಳಲ್ಲಿ ಶುಭ್ಮನ್ ಸೈಲೆಂಟ್ ಆಗಿದ್ದಾರೆ. ವಿದೇಶದಲ್ಲಿ ಕೇವಲ 27.53ರ ಸರಾಸರಿ ಹೊಂದಿರೋ ಗಿಲ್, ಬಾಂಗ್ಲಾದೇಶ ವಿರುದ್ಧ ಒಂದು ಶತಕ ಸಿಡಿಸಿದ್ದಾರಷ್ಟೇ. ಇದೀಗ ನಾಯಕನ ಪಟ್ಟವೇರಿರುವ ಗಿಲ್, ವಿದೇಶದಲ್ಲಿ ಬ್ಯಾಟಿಂಗ್ ಸಾಮರ್ಥ್ಯವನ್ನ ಪ್ರೂವ್ ಮಾಡಬೇಕಿದೆ. ಗಿಲ್ ಟೀಕಾಕಾರರಿಗೆ ಆಹಾರ ಆಗೋದು ಪಕ್ಕಾ.
ಚಾಲೆಂಜ್ ನಂ.3: ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಗೆಲುವು
18 ವರ್ಷ.. ಬರೋಬ್ಬರಿ 18 ವರ್ಷಗಳಿಂದ ಆಂಗ್ಲರ ನೆಲದಲ್ಲಿ ಟೆಸ್ಟ್ ಸರಣಿ ಗೆಲುವಿಗೆ ಟೀಮ್ ಇಂಡಿಯಾ ಹರಸಾಹಸ ಪಡ್ತಿದೆ. 2011, 2014, 2018, 2022ರ ಪ್ರವಾಸದಲ್ಲಿ ಸೋಲುಂಡಿದೆ. ಇಂಗ್ಲೆಂಡ್ ನೆಲದ ಸತತ ಸೋಲಿನ ಇತಿಹಾಸವನ್ನ ಈ ಬಾರಿಯ ಪ್ರವಾಸದಲ್ಲಿ ಟೀಮ್ ಇಂಡಿಯಾ ಬದಲಾಯಿಸಬೇಕಿದೆ. 18 ವರ್ಷಗಳ ಇಂಗ್ಲೆಂಡ್ನಲ್ಲಿ ಬಳಿಕ ಟೆಸ್ಟ್ ಸರಣಿ ಗೆಲ್ಲೋ ಬಿಗ್ ಟಾಸ್ಕ್ ಗಿಲ್ ಮುಂದಿದೆ.
ಇದನ್ನೂ ಓದಿ: BCCI ಮೇಲೆ ಅಭಿಮಾನಿಗಳು ಕೋಪ.. ಕೊಹ್ಲಿ, ರೋಹಿತ್ ಅಂದ್ರೆ ಯಾಕಿಷ್ಟು ನಿರ್ಲಕ್ಷ್ಯ..?
ಚಾಲೆಂಜ್ ನಂ.4: ಯುವ ತಂಡದ ಮ್ಯಾನೇಜ್ಮೆಂಟ್
ಕೊಹ್ಲಿ, ರೋಹಿತ್, ಅಶ್ವಿನ್ರಂತ ಅನುಭವಿಗಳು ಟೆಸ್ಟ್ ತಂಡದಲ್ಲಿಲ್ಲ. ಟೆಸ್ಟ್ ತಂಡದಲ್ಲಿರೋ ಬಹುತೇಕರು ಯುವ ಆಟಗಾರರೇ ಇದ್ದಾರೆ. ಅದ್ರಲ್ಲಿ ಕೆಲವರರಿಗೆ ಇದು ಮೊದಲ ಇಂಗ್ಲೆಂಡ್ ಟೂರ್. ಇಂತಹ ಸಮಯದಲ್ಲಿ ಯುವ ನಾಯಕ ಗಿಲ್ಗೆ ನೆರವಾಗಲು ಕೊಹ್ಲಿ, ರೋಹಿತ್ರಂತ ಮಾಜಿ ನಾಯಕರು ತಂಡದಲ್ಲಿಲ್ಲ. ಹೀಗಾಗಿ ಯುವ ತಂಡವನ್ನ ಆನ್ಫೀಲ್ಡ್ ಹಾಗೂ ಆಫ್ ದ ಫೀಲ್ಡ್ನಲ್ಲಿ ಮ್ಯಾನೇಜ್ ಮಾಡೋ ದೊಡ್ಡ ಸವಾಲು ಗಿಲ್ಗೆ ಎದುರಾಗಲಿದೆ.
ಚಾಲೆಂಜ್ ನಂ.5: ಟೆಸ್ಟ್ ಪ್ರದರ್ಶನ ಸುಧಾರಣೆ ಮತ್ತು WTC ಫೈನಲ್
ಕೊಹ್ಲಿ ನಾಯಕತ್ವದಲ್ಲಿ ಮೊದಲ 2 ಆವೃತ್ತಿಗಳಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪೈನಲ್ಗೆ ಎಂಟ್ರಿ ಕೊಟ್ಟಿದ್ದ ಟೀಮ್ ಇಂಡಿಯಾ ಈ ಬಾರಿ ಮುಗ್ಗರಿಸಿದೆ. ಕಳೆದ 2 ಟೆಸ್ಟ್ ಸರಣಿಗಳಲ್ಲಂತೂ ಹೀನಾಯ ಪ್ರದರ್ಶನ ನೀಡಿದೆ. ತವರಿನಲ್ಲಿ 3-0 ಅಂತರದಲ್ಲಿ ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದ ಟೀಮ್ ಇಂಡಿಯಾ, ಆಸ್ಟ್ರೇಲಿಯಾದಲ್ಲಿ 1-3 ಅಂತರದಲ್ಲಿ ಸರಣಿ ಸೋತಿದೆ. ಱಂಕಿಂಗ್ನಲ್ಲಿ 4ನೇ ಸ್ಥಾನಕ್ಕೆ ಕುಸಿದಿದೆ. ತಂಡದ ಪ್ರದರ್ಶನದಲ್ಲಿ ಸುಧಾರಣೆ ಕಾಣಬೇಕಿದೆ. ಜೊತೆಗೆ 2027ರ WTC ಫೈನಲ್ಗೆ ತಂಡವನ್ನು ಕ್ವಾಲಿಫೈ ಮಾಡಬೇಕಿದೆ.
ಒಟ್ಟಿನಲ್ಲಿ ಮೊದಲ ಟೆಸ್ಟ್ ಸರಣಿಯಲ್ಲೇ ಯುವ ನಾಯಕ ಗಿಲ್ಗೆ ಕಠಿಣ ಸವಾಲುಗಳು ಎದುರಾಗಲಿವೆ. ಆರಂಭದಲ್ಲೇ ಎದುರಾಗಿರೋ ಅಗ್ನಿಪರೀಕ್ಷೆಗಳನ್ನ ಗಿಲ್ ಗೆಲ್ತಾರಾ? ಕಿಂಗ್ ಕೊಹ್ಲಿಯಂತೆ, ಪ್ರಿನ್ಸ್ ಟೆಸ್ಟ್ನಲ್ಲಿ ಸಕ್ಸಸ್ಫುಲ್ ಕ್ಯಾಪ್ಟನ್ ಎನಿಸಿಕೊಳ್ತಾರಾ? ಕಾದು ನೋಡೋಣ.
ಇದನ್ನೂ ಓದಿ: ಗಾಯಕಿ ಮಂಗ್ಲಿಗೆ ಬಿಗ್ ಶಾಕ್.. ಬರ್ತ್ ಡೇ ಪಾರ್ಟಿಗೆ ಬಂದವರು ಯಾರು? ಪೊಲೀಸರಿಗೆ ಸಿಕ್ಕಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ