newsfirstkannada.com

ಹಾಡಹಗಲೇ ಮನೆಗೆ ನುಗ್ಗಿ ಪುಂಡರಿಂದ ಗೂಂಡಾಗಿರಿ.. ಟಿವಿ, ಫ್ರಿಡ್ಜ್​​ ಎಲ್ಲವೂ ಪೀಸ್​ ಪೀಸ್​​

Share :

Published May 11, 2024 at 6:15pm

    ಏಕಾಏಕಿ ಬಂದು ಮನೆಯಲ್ಲಿ ವಸ್ತುಗಳನ್ನು ಧ್ವಂಸ ಮಾಡಿದ ಮಾಡಿದ ಕಿರಾತಕರು

    ಮನೆಯ ಯಜಮಾನ ಮನೆಯಲ್ಲಿ ಇಲ್ಲದಿದ್ದಾಗ 5 ಯುವಕರಿಂದ ಗೂಂಡಾಗಿರಿ

    ಹುಯಿಲಗೋಳ ಗ್ರಾಮ ಪಂಚಾಯಿತಿ ಸದಸ್ಯನ ವಿರುದ್ಧ ಕುಟುಂಬಸ್ಥರ ಆರೋಪ

ಗದಗ: ಹಾಡಹಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ‌ ಟಿವಿ, ಫ್ರಿಡ್ಜ್ ಪೀಸ್ ಪೀಸ್ ಮಾಡಿರೋ ಘಟನೆ ಪಂಚಾಕ್ಷರಿ ನಗರದಲ್ಲಿ ನಡದಿದೆ. ಏಕಾಏಕಿ 5 ದುಷ್ಕರ್ಮಿಗಳ ತಂಡವೊಂದು ಸಿನಿಮೀಯ ರೀತಿಯಲ್ಲಿ ಪ್ರಕಾಶ್ ನಿಡಗುಂದಿ ಎಂಬುವವರ ಮನೆಗೆ ನುಗ್ಗಿ ಟಿವಿ, ಫ್ರಿಡ್ಜ್ ಹೊಡೆದು ಅಟ್ಟಹಾಸ ಮೆರೆದಿದ್ದಾರೆ. ಜೊತೆಗೆ ಜೀಪ್​ಗೆ ಬೆಂಕಿ ಹಚ್ಚಿ ಹಚ್ಚಿದ್ದಾರೆ. ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಅಲ್ಲಿಂದ ಎಸ್ಕೇಪ್​ ಆಗಿದ್ದಾರೆ.

ಇದನ್ನೂ ಓದಿ: ಅಪ್ಪ, ಅಮ್ಮ.. ಬದುಕಿಸಿ ಬಿಡಿ.. ಕರುಳು ಹಿಂಡುತ್ತೆ ಪ್ರವಾಹದಲ್ಲಿ ಫ್ಯಾಮಿಲಿ ಕಳೆದುಕೊಂಡ ಪುಟಾಣಿಯ ಕಣ್ಣೀರ ಕತೆ

ಹೀಗೆ ಮಾಡಿದ ದುಷ್ಕರ್ಮಿಗಳಿಗೆ ಪ್ರಶ್ನೆ‌ ಮಾಡಿದ ಮಹಿಳೆಯ ಜೊತೆ ಅಸಭ್ಯ ವರ್ತನೆ ಮಾಡಿದ್ದಾರೆ. ಈ ಘಟನೆ ಸಂಬಂಧ ಹುಯಿಲಗೋಳ ಗ್ರಾಮ ಪಂಚಾಯತಿ ಸದಸ್ಯ ಮಿಲಿಂದ್ ಕಾಳೆ, ನಾಗರಾಜ್ ಕಾಳೆ ವಿರುದ್ಧ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇನ್ನು ಆರೋಪಿಗಳು ಬೈಕ್​ನಲ್ಲಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಡಹಗಲೇ ಮನೆಗೆ ನುಗ್ಗಿ ಪುಂಡರಿಂದ ಗೂಂಡಾಗಿರಿ.. ಟಿವಿ, ಫ್ರಿಡ್ಜ್​​ ಎಲ್ಲವೂ ಪೀಸ್​ ಪೀಸ್​​

https://newsfirstlive.com/wp-content/uploads/2024/05/gadag12.jpg

Load More