ಹವಾಮಾನ ಇಲಾಖೆಯಿಂದ ಮತ್ತೆ ಎಚ್ಚರಿಕೆ.. ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಮಳೆ..?

author-image
Ganesh
Updated On
ಹವಾಮಾನ ಇಲಾಖೆಯಿಂದ ಮತ್ತೆ ಎಚ್ಚರಿಕೆ.. ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಮಳೆ..?
Advertisment
  • ಒಂದೇ ಒಂದು ಮಳೆಗೆ ಬೆಂಗಳೂರು ತತ್ತರಿಸಿದೆ
  • ಕಡಲ ತೀರ ನಿವಾಸಿಗಳಿಗೆ ಕಡಲ್ಕೊರೆತ ಭೀತಿ
  • ಹವಾಮಾನ ಇಲಾಖೆ ಯಾರಿಗೆಲ್ಲ ಎಚ್ಚರಿಕೆ ನೀಡಿದೆ..?

ಒಂದೇ ಒಂದು ಮಳೆಗೆ ಬೆಂಗಳೂರು ತತ್ತರಿಸಿದೆ. ಸದ್ಯ ಮಳೆ ನಿಂತ್ರೂ ಸಮಸ್ಯೆಗಳು ಜನಪ್ರತಿನಿಧಿಗಳ ಕೃಪಾಕಟಾಕ್ಷದಿಂದ ಹಾಗೇ ಇವೆ. ಈ ನಡುವೆ ವರುಣನ ಅಬ್ಬರಕ್ಕೆ ಕರಾವಳಿ ತತ್ತರಿಸಿದೆ. ಮಳೆ ಜೋರಾಗುವ ಮುನ್ಸೂಚನೆ ಹಿನ್ನೆಲೆ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಇತ್ತ ಕಡಲತಡಿಯ ಮಕ್ಕಳಿಗೆ ಕಡಲ್ಕೊರೆತದ ಭೀತಿ ಶುರುವಾಗಿದೆ.

ರಾಜ್ಯಾದ್ಯಂತ ಮಳೆಯಬ್ಬರಕ್ಕೆ ಜನ ತತ್ತರಿಸಿದ್ದಾರೆ. ಬೆಂಗಳೂರಿನಲ್ಲಿ ಮಳೆ ನಿಂತ್ರೂ ಸಮಸ್ಯೆ ಮುಗಿದಿಲ್ಲ. ಇತ್ತ ಕರಾವಳಿಯಲ್ಲಿ ವರುಣನ ಆರ್ಭಟಕ್ಕೆ ಜನಜೀವನವೇ ಅಸ್ತವ್ಯಸ್ತವಾಗಿದೆ. ಈ ನಡುವೆ ಹವಾಮಾನ ಇಲಾಖೆ ಮತ್ತೊಂದು ಎಚ್ಚರಿಕೆ ಕೊಟ್ಟಿದೆ.

ಇದನ್ನೂ ಓದಿ: ಅರಮನೆ ಮೈದಾನ ಭೂ-ಸ್ವಾಧೀನ ವಿವಾದ; ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ

publive-image

5 ದಿನ ಕಾಲ ಮಳೆಯ ಮುನ್ಸೂಚನೆ

ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಮೇ 27ರ ತನಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಮೇತ ಮಳೆಯಾಗಲಿದೆಯಂತೆ. ಬೆಂಗಳೂರಿನಲ್ಲಿ‌ ಮಳೆ ಪ್ರಮಾಣ ಕಡಿಮೆಯಾಗಲಿದ್ದು ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ಮಲೆನಾಡಿನಲ್ಲಿ ಭಾರಿ ಮಳೆಯಾಗೋ ಸಾಧ್ಯತೆ ಇದೆ. ಹೀಗಾಗಿ ಈ ಜಿಲ್ಲೆಗಳಿಗೆ ಇಂದಿನಿಂದ ಮೆ.26ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮೀನುಗಾರಿಕೆ ಸಂಪೂರ್ಣ ನಿಷೇಧ

ಭಾರೀ ಮಳೆಗೆ ಉಡುಪಿ ಜಿಲ್ಲೆ ತತ್ತರಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಇಂದು ಕೂಡ ರೆಡ್ ಅಲರ್ಟ್ ಘೋಷಣೆಯಾಗಿದೆ. ಧಾರಾಕಾರ ಮಳೆ ಹಿನ್ನೆಲೆ ಜಿಲ್ಲಾಡಳಿತ ಮೀನುಗಾರಿಕೆಯನ್ನ ಸಂಪೂರ್ಣ ನಿಷೇಧಿಸಿದೆ. ಆಳಸಮುದ್ರಕ್ಕೆ ಹೋಗಿದ್ದ ಭಾರಿ ಗಾತ್ರದ ಬೋಟುಗಳು ವಾಪಸು ಬರುತ್ತಿವೆ. ಈಗಾಗಲೇ ಕೆಲವು ದಡದಲ್ಲಿ ಲಂಗರು ಹಾಕಿವೆ. ಮೀನುಗಾರಿಕಾ ಋತು ತಿಂಗಳ ಅಂತ್ಯದವರೆಗೂ ಇತ್ತು ಆದ್ರೀಗ ಮಳೆಯಿಂದಾಗಿ ಅವಧಿಗೂ ಮುನ್ನ ಮೀನುಗಾರಿಕಾ ಋತು ಅಂತ್ಯಗೊಂಡಿದ್ದು, ಮೀನುಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ.

ಇದನ್ನೂ ಓದಿ: ಕೈಕೊಟ್ಟ ಜಕೊಬ್ ಬೆಥಲ್.. ಆರ್​ಸಿಬಿಗೆ ಮತ್ತೊಬ್ಬ ಸ್ಫೋಟಕ ಬ್ಯಾಟರ್​ ಎಂಟ್ರಿ..!

publive-image

ಇನ್ನು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನಲೆ ಮಂಗಳೂರಿನ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಸಮುದ್ರ ತೀರಕ್ಕೆ ಬೃಹತ್​ ಅಲೆಗಳು ಅಪ್ಪಳಿಸುತ್ತಿವೆ. ಸಮುದ್ರ ತೀರದುದ್ದಕ್ಕೂ ಗಾಳಿ ವೇಗ ಹೆಚ್ಚಾಗ್ತಿದೆ. ಈ ಬಾರಿಯೂ ಮುಂಗಾರು ಆರಂಭಕ್ಕೆ ಮೊದಲೇ ಕಡಲಬ್ಬರ ಹೆಚ್ಚಾಗಿದ್ದು, ಮಂಗಳೂರಿನ ಬಟ್ಟಪ್ಪಾಡಿ ಕಡಲ ತೀರ ನಿವಾಸಿಗಳು ಕಡಲ್ಕೊರೆತ ಭೀತಿಯಲ್ಲಿದ್ದಾರೆ.

ಒಟ್ಟಾರೆ ಮುಂಗಾರು ಪೂರ್ವ ಮಳೆಯಬ್ಬರಕ್ಕೆ ಕರಾವಳಿ ತತ್ತರಿಸಿದೆ. ಒಂದ್ಕಡೆ ಮೀನುಗಾರರು ತೀವ್ರ ನಷ್ಟ ಅನುಭವಿಸುವಂತಾದ್ರೆ ಮತ್ತೊಂದೆಡೆ ಕಡಲತಡಿಯ ಜನರಿಗೆ ಕಡಲ್ಕೊರೆತ ಭೀತಿ ಶುರುವಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಎಚ್ಚೆತ್ತು ಕಡಲಮಕ್ಕಳ ನೆರವಿಗೆ ಧಾವಿಸಬೇಕಿದೆ.

ಇದನ್ನೂ ಓದಿ: U-19 ಟೀಂ ಇಂಡಿಯಾ ಪ್ರಕಟ.. ಇಬ್ಬರು ಐಪಿಎಲ್ ಸ್ಟಾರ್​ಗಳಿಗೆ ಒಲಿದ ಲಕ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment