Bengaluru Rains: ಬೆಂಗಳೂರಲ್ಲಿ 5 ದಿನ ಭರ್ಜರಿ ಮಳೆ; ಈ ರಸ್ತೆಗಳಲ್ಲಿ ಓಡಾಡೋ ಮುನ್ನ ಎಚ್ಚರ!

author-image
Ganesh Nachikethu
Updated On
Rain Alert: ಇಂದು ಈ ಭಾಗಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ.. ಯೆಲ್ಲೋ ಅಲರ್ಟ್ ಘೋಷಣೆ
Advertisment
  • ಇಂದಿನಿಂದ ಮುಂದಿನ ಐದು ದಿನಗಳ ಕಾಲ ಬೆಂಗಳೂರಲ್ಲಿ ಭಾರೀ ಮಳೆ..!
  • ಬೆಂಗಳೂರಿನಾದ್ಯಂತ ಹವಾಮಾನ ಇಲಾಖೆಯಿಂದ ಹೈ ಅಲರ್ಟ್​ ಘೋಷಣೆ
  • ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಭಾರೀ ಟ್ರಾಫಿಕ್​ ಇರೋ ಕಾರಣ ರೆಡ್​ ಅಲರ್ಟ್​​

ಬೆಂಗಳೂರು: ಇಂದಿನಿಂದ ಐದು ದಿನಗಳ ಕಾಲ ಬೆಂಗಳೂರು ನಗರ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಭಾರೀ ಮಳೆ ಬರಲಿದೆ. ಆಗಸ್ಟ್ 14 ರಿಂದ 18 ರವರೆಗೆ ಭಾರೀ ಮಳೆ ಹಿನ್ನೆಲೆ ಯೆಲ್ಲೋ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ. ಭಾರೀ ಮಳೆಯಿಂದ ರಸ್ತೆಗಳಲ್ಲಿ ನೀರು ನಿಲ್ಲಲಿದೆ. ತಗ್ಗು ವಸತಿ ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೆ.ಆರ್​ ಮಾರ್ಕೆಟ್​, ಮೆಜೆಸ್ಟಿಕ್​, ಆರ್​.ಆರ್​ ನಗರ, ಮಲ್ಲೇಶ್ವರಂ, ರಾಜಾಜಿನಗರ, ಜಯನಗರ, ಲಾಲ್ ಬಾಗ್ ರಸ್ತೆ, ಕೆ.ಆರ್​ ಪುರಂ, ಎಂಜಿ ರೋಡ್​, ಹೆಬ್ಬಾಳ ರಸ್ತೆ, ಯಲಹಂಕ, ಮಹದೇವಪುರ, ಬಿಟಿಎಂ ಲೇಔಟ್, ಸಿಲ್ಕ್‌ ಬೋರ್ಡ್​ನಲ್ಲಿ ಭಾರೀ ಟ್ರಾಫಿಕ್​ ಇರಲಿದೆ. ಒಂದು ವೇಳೆ ಮಳೆ ಬಂದರೆ ನೀರಿನಿಂದ ಜಲಾವೃತವಾಗುವ ಸಾಧ್ಯತೆ ಇರುತ್ತದೆ. ವಾಹನಗಳು ಕೆಟ್ಟು ನಿಲ್ಲುವ ಸಾಧ್ಯತೆ ಹೆಚ್ಚಿದೆ. ಟ್ರಾಫಿಕ್ ಜಾಮ್​​ ಹೆಚ್ಚಾದರೆ ಸರಿಯಾದ ಸಮಯಕ್ಕೆ ನಿಗದಿತ ಸ್ಥಳಕ್ಕೆ ತಲುಪುವುದು ಅಸಾಧ್ಯ.

ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಭಾರೀ ಮಳೆ ಅಲರ್ಟ್ ಇದೆ. ಜತೆಗೆ ಆಗಸ್ಟ್ 15 ರಿಂದ 18 ರವರೆಗೂ ಸಾಲು ಸಾಲು ರಜೆ ಇದೆ. ಹಾಗಾಗಿ ಊರಿಗೆ ಹೋಗುವ ಬರುವ ವಾಹನಗಳು ಹೆಚ್ಚಾಗಿರೋ ಕಾರಣ ಇಡೀ ಬೆಂಗಳೂರಲ್ಲಿ ಭಾರೀ ಟ್ರಾಫಿಕ್​ ಇರಲಿದೆ ಎಂದು ಟ್ರಾಫಿಕ್ ಜಂಟಿ ಪೊಲೀಸ್ ಆಯುಕ್ತ ಎಮ್‌ ಎನ್‌ ಅನುಚೇತ್ ಹೇಳಿದ್ದಾರೆ.

ಇದನ್ನೂ ಓದಿ: ಇಂದಿನಿಂದ 5 ದಿನ ಭರ್ಜರಿ ಮಳೆ; ಬೆಂಗಳೂರಲ್ಲಿ ಭಾರೀ ಟ್ರಾಫಿಕ್​; ನೀವು ಓದಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment