/newsfirstlive-kannada/media/post_attachments/wp-content/uploads/2025/05/RCB_TEAM-3.jpg)
ಸೀಸನ್ 18ರ ಐಪಿಎಲ್ನಲ್ಲಿ ಪ್ಲೇ ಆಫ್ನತ್ತ ದಿಟ್ಟ ಹೆಜ್ಜೆ ಇಟ್ಟಿದೆ. ರೆಡ್ಆರ್ಮಿಯ ರಾಯಲ್ ಆಟ ನೋಡಿದವರೆಲ್ಲಾ ಕಪ್ ಗೆಲ್ಲೋದು ಪಕ್ಕಾ ಅಂತಿದ್ದಾರೆ. ಅಷ್ಟು ಪರ್ಫೆಕ್ಟ್ ಆಟವಾಡ್ತಿದೆ ಆರ್ಸಿಬಿ ತಂಡ. ಅಂದ್ಹಾಗೆ ಆರ್ಸಿಬಿಯ ಈ ಸಕ್ಸಸ್ಗೆ ಆಟಗಾರರ ಆಟ ಮಾತ್ರ ಕಾರಣವಲ್ಲ. ಈ ಮಾಸ್ಟರ್ ಮೈಂಡ್ಗಳ ಶ್ರಮವೂ ಇದೆ. ಆರ್ಸಿಬಿ ಸಕ್ಸಸ್ ಹಿಂದಿನ ಹೀರೋಗಳ ಕಥೆ ಇದು.
ಮಾಸ್ಟರ್ ಮೈಂಡ್ ನಂ.1: ಮೊ ಬೊಬಾಟ್
ಮೊ ಬೊಬಾಟ್ ಆರ್ಸಿಬಿ ಟೀಮ್ನ ಡೈರೆಕ್ಟರ್. 12 ವರ್ಷಗಳ ಕಾಲ ಇಂಗ್ಲೆಂಡ್ ತಂಡದಲ್ಲಿ ಹಲವು ಜವಾಬ್ದಾರಿ ನಿಭಾಯಿಸಿದ್ದ ಈ ಮೊ ಬೊಬಾಟ್ ಕಳೆದ ಸೀಸನ್ನಲ್ಲಿ ಆರ್ಸಿಬಿ ಸೇರಿದ್ರು. ಮೊದಲ ಸೀಸನ್ನಲ್ಲಿ ಎಲ್ಲ ಗಮನಿಸಿದ್ದ ಬೊಬಾಟ್ ಈ ಬಾರಿಯ ಮೆಗಾ ಆಕ್ಷನ್ಗೂ ಮುನ್ನ ಸಖತ್ ಹಾರ್ಡ್ವರ್ಕ್ ಮಾಡಿದ್ರು. ತಾವೇ ಖುದ್ದು ಟ್ಯಾಲೆಂಟ್ ಹಂಟ್ಗೆ ಇಳಿದು ತಂಡಕ್ಕೆ ಬೇಕಾದ ಆಟಗಾರರ ಲಿಸ್ಟ್ ರೆಡಿ ಮಾಡಿ ಹರಾಜಿನಲ್ಲಿ ಬಲಿಷ್ಟ ತಂಡ ಕಟ್ಟಿದ್ರು. ಈಗಲೂ ತಂಡದೊಂದಿಗಿದ್ದು ಆಟಗಾರರು, ಸಪೋರ್ಟ್ ಸ್ಟಾಫ್ಗೆ ಅಗತ್ಯ ಇನ್ಪುಟ್ಸ್ ನೀಡ್ತಿರೋ ಬೊಬಾಟ್ಗೂ ಸಕ್ಸಸ್ ಕ್ರೆಡಿಟ್ ಸಲ್ಲಲೇಬೇಕು.
ಇದನ್ನೂ ಓದಿ: ಕೂದಲು ಹಿಡಿದು ಹೊಡಿತೀನಿ.. ಸ್ಪಿನ್ನರ್ಗೆ ವಾರ್ನ್ ಮಾಡಿದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ..!
ಮಾಸ್ಟರ್ ಮೈಂಡ್ ನಂ.2: ಆ್ಯಂಡಿ ಫ್ಲವರ್
2023ರ ಸೀಸನ್ ಅಂತ್ಯದ ಬಳಿಕ ಸಪೋರ್ಟ್ ಸ್ಟಾಫ್ ವಿಭಾಗಕ್ಕೆ ಸರ್ಜರಿ ಮಾಡಿದ ಆರ್ಸಿಬಿ ಹೆಡ್ ಕೋಚ್ ಸ್ಥಾನಕ್ಕೆ ಆ್ಯಂಡಿ ಫ್ಲವರ್ಗೆ ಮಣೆ ಹಾಕಿತು. ಆರ್ಸಿಬಿ ಕ್ಯಾಂಪ್ ಸೇರಿದ ಬಳಿಕ ಆ್ಯಂಡಿ ಫ್ಲವರ್ ತಂಡದ ಕಿಚ್ಚನ್ನ ಹೆಚ್ಚಿಸಿದ್ದಾರೆ. ಮೆಗಾ ಆಕ್ಷನ್ ಬೊಬಾಟ್ ಜೊತೆ ಸೇರಿ ಬಲಿಷ್ಟ ತಂಡ ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ರು. ಇದೀಗ ಆಟಗಾರರ ಜೊತೆ ಒನ್ ಟು ಒನ್ ಮಾತುಕತೆ ನಡೆಸಿ, ಮಿಸ್ಟೇಕ್ಸ್ನ ತಿದ್ದಿ ಕಾನ್ಫಿಡೆನ್ಸ್ ತುಂಬ್ತಾರೆ. ಗೇಮ್ಪ್ಲಾನ್ ಮತ್ತು ಸ್ಟ್ರಾಟರ್ಜಿ ರೂಪಿಸೋ ವಿಚಾರದಲ್ಲಂತೂ ಫ್ಲವರ್ ನಿಜಕ್ಕೂ ಫೈರ್.!
ಮಾಸ್ಟರ್ ಮೈಂಡ್ ನಂ.3 ದಿನೇಶ್ ಕಾರ್ತಿಕ್
ಟಿ20 ಕ್ರಿಕೆಟ್ ಸದಾ ಬದಲಾಗೋ ಫಾರ್ಮೆಟ್. ಹೊಸ ಹೊಸ ಆವಿಷ್ಕಾರ ಅಗುತ್ತಲೇ ಇರುತ್ವೆ. ಸದಾ ಬದಲಾವಣೆಗೆ ತೆರೆದುಕೊಳ್ಳೋ ದಿನೇಶ್ ಕಾರ್ತಿಕ್ ತಂಡದ ಆಟಗಾರರ ಮೇಲೆ ಸಾಕಷ್ಟು ಇಂಪ್ಯಾಕ್ಟ್ ಮೂಡಿಸಿದ್ದಾರೆ. ಆಕ್ಷನ್ನಲ್ಲಿ ದಿನೇಶ್ ಕಾರ್ತಿಕ್ ಇಂಡಿಯನ್ ಯಂಗ್ಸ್ಟರ್ಗಳನ್ನ ತಂಡಕ್ಕೆ ಕರೆತಂದ್ರು. ಅಭ್ಯಾಸದ ವೇಳೆ ಆಟಗಾರರ ಜೊತೆಗೆ ಹೆಚ್ಚು ಸಮಯ ಕಳೆಯೋ ಕಾರ್ತಿಕ್, ಪಂದ್ಯದ ವೇಳೆ ಒಂದು ಡೈರಿ ಹಿಡಿದು ಬೌಂಡರಿ ಲೈನ್ನಲ್ಲಿ ಕಾಣಿಸಿಕೊಳ್ತಾರೆ. ಸದಾ ಆಟಗಾರರಿಗೆ ಇನ್ಪುಟ್ಸ್ ನೀಡೋ ಕಾರ್ತಿಕ್ ಡ್ರೆಸ್ಸಿಂಗ್ ರೂಮ್ಗೆ ವಿಶೇಷ ಕಳೆ ತಂದಿದ್ದಾರೆ.
ಮಾಸ್ಟರ್ ಮೈಂಡ್ ನಂ.4 ಒಂಕಾರ್ ಸಾಳ್ವಿ
ಹೊಸ ಬೌಲಿಂಗ್ ಒಂಕಾರ್ ಸಾಳ್ವಿ ಎಂಟ್ರಿ ಆರ್ಸಿಬಿಯ ಚರಿಷ್ಮಾವನ್ನೆ ಬದಲಿಸಿದೆ. ಈ ಹಿಂದಿನ 17 ಸೀಸನ್ಗಳಲ್ಲಿ ಆರ್ಸಿಬಿ ಬೌಲಿಂಗ್ ಅಟ್ಯಾಕ್ ಇನ್ಕನ್ಸಿಸ್ಟೆಂಟ್ ಅನಿಸಿತ್ತು. ಈ ಸೀಸನ್ನಲ್ಲಿ ಆರ್ಸಿಬಿಯ ಬೌಲಿಂಗ್ ಬೊಂಬಾಟ್ ಆಗಿದೆ. ಇದ್ರ ಕ್ರೆಡಿಟ್ ಬೌಲಿಂಗ್ ಗುರು ಒಂಕಾರ್ ಸಾಳ್ವಿಗೆ ಸೇರಬೇಕು. ತಂಡಕ್ಕೆ ಎಂಟ್ರಿ ಕೊಟ್ಟಾಗಲೇ ಬ್ಲ್ಯೂಪ್ರಿಂಟ್ನೊಂದಿಗೆ ಬಂದಿದ್ದ ಸಾಳ್ವಿ, ಅದನ್ನ ವರ್ಕೌಟ್ ಮಾಡುವಲ್ಲಿ ಸಕ್ಸಸ್ ಕಂಡಿದ್ದಾರೆ.
ಇದನ್ನೂ ಓದಿ: ಸ್ಪಿನ್ನರ್ ದಿಗ್ವೇಶ್ ರಾಥಿಗೆ ಬಿಗ್ ಶಾಕ್; ಅಭಿಷೇಕ್ ಜತೆ ವಾಗ್ವಾದ.. IPL ಮ್ಯಾಚ್ನಿಂದ ಅಮಾನತು
ಮಾಸ್ಟರ್ ಮೈಂಡ್ ನಂ.5: ಫ್ರೆಡ್ಡಿ ವಿಲ್ಡ್
ಫ್ರೆಡ್ಡಿ ವಿಲ್ಡ್.. ಆರ್ಸಿಬಿ ಟೀಮ್ನ ಅನಾಲಿಸ್ಟ್. ಈ ಬಾರಿ ಆರ್ಸಿಬಿ ಮೊದಲ ಸಕ್ಸಸ್ ಕಂಡಿದ್ದೇ ಹರಾಜಿನ ಟೇಬಲ್ನಲ್ಲಿ. ಈ ಹಿಂದೆ ಸ್ಟಾರ್ಗಳ ಮೇಲೆ ಹಣದ ಹೊಳೆ ಹರಿಸ್ತಿದ್ದ ಆರ್ಸಿಬಿ ಈ ಬಾರಿ ಪರ್ಫೆಕ್ಟ್ ಬಿಡ್ ಮಾಡ್ತು. ಅನಾಲಿಸ್ಟ್ ಫ್ರೆಡ್ಢಿ ವಿಲ್ಡ್ ತಯಾರಿದ್ದ ಬ್ಲ್ಯೂ ಪ್ರಿಂಟೇ ಆಕ್ಷನ್ ಸಕ್ಸಸ್ಗೆ ಕಾರಣ. ಪ್ರಮುಖ ವಿದೇಶಿ ಆಟಗಾರರ ಖರೀದಿ ವೇಳೆ ಈ ಅನಾಲಿಸ್ಟ್ ನೀಡಿ ಇನ್ಪುಟ್ಸ್ ತಂಡಕ್ಕೆ ಹೆಲ್ಪ್ ಮಾಡಿತು. ಪ್ರತಿ ಪಂದ್ಯಕ್ಕೂ ಮುನ್ನ ಎದುರಾಳಿ ಆಟಗಾರರ ಸ್ಟ್ರೆಂಥ್ ಅಂಡ್ ವೀಕ್ನೆಸ್ನ ಕಂಪ್ಲೀಟ್ ಫಿಕ್ಚರ್ನ ಮ್ಯಾನೇಜ್ಮೆಂಟ್ಗೆ ನಿಡೋದು ಇದೇ ಫ್ರೆಡ್ಡಿ ವಿಲ್ಡ್. ಇದಕ್ಕೆ ತಕ್ಕಂತೆ ಗೇಮ್ಪ್ಲಾನ್ & ಸ್ಟಾರ್ಟಜಿ ರೆಡಿಯಾಗುತ್ತೆ.
ಈ ಐವರು ಥಿಂಕ್ ಟ್ಯಾಂಕ್ಗಳು ನೀಡ್ತಾ ಇರೋ ಇನ್ಪುಟ್ಸ್, ಮಾಡ್ತಿರೋ ಗೇಮ್ಪ್ಲಾನ್ಸ್ ಆರ್ಸಿಬಿಯ ಸಕ್ಸಸ್ನಲ್ಲಿ ಮೇಜರ್ ರೋಲ್ ಪ್ಲೇ ಮಾಡ್ತಿವೆ. ಆನ್ಫೀಲ್ಡ್ನಲ್ಲಿ ಆಟಗಾರರು ಆಡೋ ಜಬರ್ದಸ್ತ್ ಆಟ ಎಲ್ಲರಿಗೂ ಕಾಣುತ್ತೆ. ಸಕ್ಸಸ್ ಕ್ರೆಡಿಟ್ಟು ಅವರಿಗೇ ಸಿಗುತ್ತೆ. ಅದರ ಹಿಂದೆ ತೆರೆಯ ಹಿಂದಿನ ಈ ಹೀರೋಗಳ ಶ್ರಮವೂ ಕಾಣಲ್ಲ. ಕ್ರೆಡಿಟ್ ಹೆಚ್ಚು ಸಿಗಲ್ಲ, ಆರ್ಸಿಬಿ ಈ ಮಾಸ್ಟರ್ಮೈಂಡ್ಗಳಿಗೆ ಒಂದು ಸಲಾಂ ಹೇಳಲೇಬೇಕು.
ಇದನ್ನೂ ಓದಿ: ಪ್ಲೇ-ಆಫ್ ಎಂಟ್ರಿ ಖುಷಿಯಲ್ಲಿ ಮೈಮರೆತರೆ ಕಷ್ಟ.. ಆರ್ಸಿಬಿ ಮುಂದಿನ ಪಂದ್ಯ ಯಾವಾಗ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್