newsfirstkannada.com

ಚಿತ್ರದುರ್ಗದಲ್ಲಿ ಅಚ್ಚರಿ..!! ಬರಗಾಲದ ನಡುವೆಯೂ ರೈತನ ಪ್ರಾರ್ಥನೆಗೆ ಒಲಿದ ಗಂಗಾ ಮಾತೆ..

Share :

Published May 9, 2024 at 3:15pm

  ಆಕಾಶದೆತ್ತರಕ್ಕೆ ಚಿಮ್ಮಿದ ನೀರಿನ ಬುಗ್ಗೆ ಕಂಡು ಫುಲ್ ಖುಷ್

  ಕಳೆದ ಒಂದು ವರ್ಷದಿಂದ ನೀರಿಲ್ಲದೇ ಪರದಾಟ ನಡೆಸಿದ್ದ ರೈತ

  ಎಷ್ಟೇ ಬೋರ್ವೆಲ್ ಕೊರೆಸಿದ್ದರೂ ನೀರು ಸಿಕ್ಕಿರಲಿಲ್ಲ

ಚಿತ್ರದುರ್ಗ: ಭೀಕರ ಬರಗಾಲದಿಂದ ರಾಜ್ಯದ ರೈತರು ಕಂಗಾಲಾಗಿ ಕೈಕಟ್ಟಿ ಕೂತಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಬೆಳೆಗಳಿಗೆ ನೀರನ್ನು ಹೇಗೆ ಸರಬರಾಜು ಮಾಡೋದು ಅಂತಾ ಆತಂಕದಲ್ಲಿದ್ದಾರೆ. ಇದಕ್ಕೆ ಕೋಟೆನಾಡು ಚಿತ್ರದುರ್ಗ ಕೂಡ ಹೊರತಾಗಿಲ್ಲ. ವಿಚಾರ ಹೀಗಿರುವಾಗಲೂ ಚಿತ್ರದುರ್ಗ ಜಿಲ್ಲೆಯ ರೈತ ಹರೀಶ್ ಅನ್ನೋರ ಮುಖದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ ಗಂಗಾಮಾತೆ!

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಚಿಕ್ಕಚೆಲ್ಲೂರು ಗ್ರಾಮದ ರೈತ ಹರೀಶ್ ಇವತ್ತು ಫುಲ್ ಖುಷ್ ಆಗಿದ್ದಾರೆ. ಅದಕ್ಕೆ ಕಾರಣ, ತಾವು ಕೊರೆಸಿದ್ದ ಬೋರ್ವೆಲ್​​ನಿಂದ ಬರೋಬ್ಬರಿ ಐದು ಇಂಚು ನೀರು ಗಗನಕ್ಕೆ ಚಿಮ್ಮಿದೆ.

ಇದನ್ನೂ ಓದಿ: ಚಿಕನ್ ಪ್ರಿಯರೇ ಹುಷಾರ್.. ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ

ಗಂಗೆ ಕಂಡು ಅನ್ನದಾತ ಖುಷಿಯಲ್ಲಿದ್ದಾನೆ. ಕಳೆದ ವರ್ಷದಿಂದ ನೀರು ಸಿಗದೇ ರೈತ ಕಂಗಾಲಾಗಿದ್ದ. ಈ ವರ್ಷ ನಡೆಸಿದ ಪ್ರಯತ್ನಕಾದರೂ ಜೀವ ಜಲ ಒಲಿಯಲಿ ಎಂದು ಪ್ರಾರ್ಥನೆಯಲ್ಲಿದ್ದ. ಕೊನೆಗೆ ಆತನ ಪ್ರಾರ್ಥನೆ ಫಲಿಸಿದ್ದು, ನೀರು ಭರ್ಜರಿಯಾಗಿ ಸಿಕ್ಕಿದೆ. ಇದು ಆ ಭಾಗದ ರೈತರ ಖುಷಿಗೂ ಕಾರಣವಾಗಿದೆ. ಜೊತೆಗೆ ಹೊಸ ಆಶಾಭಾವ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿತ್ರದುರ್ಗದಲ್ಲಿ ಅಚ್ಚರಿ..!! ಬರಗಾಲದ ನಡುವೆಯೂ ರೈತನ ಪ್ರಾರ್ಥನೆಗೆ ಒಲಿದ ಗಂಗಾ ಮಾತೆ..

https://newsfirstlive.com/wp-content/uploads/2024/05/CTR-BOREWELL-2.jpg

Load More