newsfirstkannada.com

ಬೆಕ್ಕು ರಕ್ಷಿಸಲು ಹೋಗಿ ಬಾವಿಗೆ ಬಿದ್ದ ಒಂದೇ ಮನೆಯ ಆರು ಸದಸ್ಯರು.. ಐವರು ಸಾವು, ಓರ್ವ ಬಚಾವ್​

Share :

Published April 10, 2024 at 1:53pm

Update April 10, 2024 at 2:50pm

    ಒಂದೇ ಮನೆಯ ಐವರು ಬಾವಿಗೆ ಬಿದ್ದು ಸಾವು

    ಬೆಕ್ಕು ರಕ್ಷಿಸಲು ಹೋಗಿ ಬಾವಿಗೆ ಧುಮುಕಿದ ಆರು ಜನರು

    ರಕ್ಷಣಾ ತಂಡ ನೆರವಿನಿಂದ ಓರ್ವ ಬಚಾವ್ ಐವರು ಸಾವು

ಮಹಾರಾಷ್ಟ್ರ: ಪಾಳು ಬಿದ್ದ ಬಾವಿಯಿಂದ ಬೆಕ್ಕನ್ನು ರಕ್ಷಿಸಲು ಹೋಗಿ ಒಂದೇ ಮನೆಯ ಆರು ಜನರು ಬಾವಿಗೆ ಬಿದ್ದ ಘಟನೆ ನೆವಾಸ ತಾಲೂಕಿನ ವಕಾಡಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಈ ದುರ್ಘಟನೆಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ.

ಪಾಳು ಬಿದ್ದ ಬಾವಿಯನ್ನು ಮುಚ್ಚಲಾಗಿತ್ತು. ಅದರಲ್ಲಿ ಕಸವನ್ನು ಶೇಖರಣೆ ಮಾಡಲಾಗಿತ್ತು. ಹೀಗಾಗಿ ಅದರಲ್ಲಿ ವಿಷ ಅನಿಲ ಸೇರಿತ್ತು ಎನ್ನಲಾಗುತ್ತಿದೆ. ಇದೇ ಬಾವಿಗೆ ಮನೆಯ ಬೆಕ್ಕು ಬಿದ್ದದ್ದನ್ನು ಗಮನಿಸಿದ ಮನೆ ಮಂದಿ ಅದನ್ನು ಕಾಪಾಡಲೆಂದು ಮುಂದಾಗುತ್ತಾರೆ. ಈ ವೇಳೆ ಒಬ್ಬರಂತೆ ಒಬ್ಬರು ಬಾವಿಗೆ ಇಳಿಯುತ್ತಾರೆ. ಒಟ್ಟು ಆರು ಜನರು ಬಾವಿಗೆ ಇಳಿದಿದ್ದು, ಅದರಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಒಬ್ಬರು ಬದುಕುಳಿದಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಹಾಸ್ಟೆಲ್​ನಲ್ಲಿ ವಾಸ್ತವ್ಯ.. PUCಯಲ್ಲಿ ರಾಜ್ಯಕ್ಕೆ Rank ಬಂದ ವಿದ್ಯಾರ್ಥಿನಿಯ ಯಶೋಗಾಥೆ ಕೇಳಿದ್ರಾ

ಬಾವಿಯಿಂದ ಶಬ್ಧ ಕೇಳಿ ಬಂದಾಗ ನೆರೆಹೊರೆಯವರು ನೋಡಿ ಹೋಗಿದ್ದಾರೆ. ಈ ವೇಳೆ ಆರು ಜನರು ಬಾವಿಯಲ್ಲಿ ಕಾಣಿಸಿಕೊಂಡಿದ್ದಾರೆ. ನೆರೆಹೊರೆಯವರ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದು, ಅವರ ಸಹಾಯದಿಂದ ಓರ್ವನನ್ನು ಬದುಕಿಸಿದ್ದಾರೆ. ಉಳಿದ ಐವರು ಪ್ರಾಣ ಕಳೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಕ್ಕು ರಕ್ಷಿಸಲು ಹೋಗಿ ಬಾವಿಗೆ ಬಿದ್ದ ಒಂದೇ ಮನೆಯ ಆರು ಸದಸ್ಯರು.. ಐವರು ಸಾವು, ಓರ್ವ ಬಚಾವ್​

https://newsfirstlive.com/wp-content/uploads/2024/04/Well.jpg

Load More