newsfirstkannada.com

BREAKING: ಕರ್ನಾಟಕಕ್ಕೆ ಬಂಪರ್‌.. ಮೋದಿ ಕ್ಯಾಬಿನೆಟ್‌ನಲ್ಲಿ ಐವರಿಗೆ ಮಂತ್ರಿ ಸ್ಥಾನ ಫಿಕ್ಸ್‌; ಯಾರ್ ಯಾರು?

Share :

Published June 9, 2024 at 1:46pm

  ನೂತನ ಕೇಂದ್ರ ಸಚಿವರಾಗುವವರಿಗೆ ನರೇಂದ್ರ ಮೋದಿ ಆಹ್ವಾನ

  ಪ್ರಧಾನಮಂತ್ರಿ ನಿವಾಸದ ಚಹಾಕೂಟದಲ್ಲಿ ಭಾಗಿಯಾದವರಿಗೆ ಮಂತ್ರಿ ಸ್ಥಾನ

  ಹೆಚ್‌.ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣಗೂ ಅವಕಾಶ

ಇಂದು ಸತತ 3ನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ. ನೂತನ NDA ಸರ್ಕಾರದ ಅಸ್ತಿತ್ವಕ್ಕೆ ಕ್ಷಣಗಣನೆ ಶುರುವಾಗಿದೆ. ನರೇಂದ್ರ ಮೋದಿ ಅವರ ಪದಗ್ರಹಣದ ಜೊತೆಗೆ ಕೇಂದ್ರ ಸಚಿವರಾಗಿ ಯಾರು ಅಧಿಕಾರ ಸ್ವೀಕಾರ ಮಾಡುತ್ತಾರೆ ಅನ್ನೋ ಕುತೂಹಲ ಕೆರಳಿಸಿದೆ. ಈಗಾಗಲೇ ಸಂಭಾವ್ಯ ಕೇಂದ್ರ ಸಚಿವರ ಪಟ್ಟಿ ಲಭ್ಯವಾಗಿದೆ.

ಇದನ್ನೂ ಓದಿ: ModiCabinet: ಮೋದಿ ಕ್ಯಾಬಿನೆಟ್‌ನಲ್ಲಿ NDA ಮಿತ್ರರಿಗೆ ಬಂಪರ್‌; ಯಾರಿಗೆಲ್ಲಾ ಸಚಿವ ಸ್ಥಾನ? ಪಟ್ಟಿ ಇಲ್ಲಿದೆ! 

ನೂತನ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡುವ ನಾಯಕರಿಗೆ ಇಂದು ಪ್ರಧಾನಿ ನಿವಾಸಕ್ಕೆ ಆಹ್ವಾನ ನೀಡಲಾಗಿತ್ತು. ಈ ಸಭೆಯಲ್ಲಿ ಕರ್ನಾಟಕದ ಮೂವರು ಸಂಸದರು ಭಾಗಿಯಾಗಿದ್ದರು. ಹೆಚ್‌.ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ ಅವರು ಮೋದಿ ಅವರ ಸಭೆಯಲ್ಲಿ ಹಾಜರಿದ್ದರು.

ಕರ್ನಾಟಕದಿಂದ ಈ ಮೂವರ ಜೊತೆಗೆ ಅಚ್ಚರಿ ಎಂಬಂತೆ ತುಮಕೂರು ಸಂಸದ ವಿ.ಸೋಮಣ್ಣ ಅವರು ಮೋದಿ ಮನೆಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು. ಪ್ರಧಾನಿ ನಿವಾಸದಲ್ಲಿ ನಡೆದ ಚಹಾಕೂಟದಲ್ಲಿ ಸೋಮಣ್ಣ ಅವರು ಭಾಗಿಯಾಗಿದ್ದು, ಕೇಂದ್ರ ಸಚಿವ ಸ್ಥಾನ ನೀಡುವುದು ಫಿಕ್ಸ್‌ ಆಗಿದೆ.

ಕೇಂದ್ರ ಹಣಕಾಸು ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಕೂಡ ಮೋದಿ ಮನೆಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಮತ್ತೊಮ್ಮೆ ಕೇಂದ್ರ ಸಚಿವರಾಗುವ ಸಾಧ್ಯತೆ ಇದೆ. ನಿರ್ಮಲಾ ಸೀತಾರಾಮನ್ ಸೇರಿದಂತೆ ಕರ್ನಾಟಕದ ಐವರಿಗೆ ನರೇಂದ್ರ ಮೋದಿ ಅವರ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ಖಾತ್ರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಕರ್ನಾಟಕಕ್ಕೆ ಬಂಪರ್‌.. ಮೋದಿ ಕ್ಯಾಬಿನೆಟ್‌ನಲ್ಲಿ ಐವರಿಗೆ ಮಂತ್ರಿ ಸ್ಥಾನ ಫಿಕ್ಸ್‌; ಯಾರ್ ಯಾರು?

https://newsfirstlive.com/wp-content/uploads/2024/06/HDK_SOMANNA_SHOBHA.jpg

Load More