Advertisment

ಪತ್ನಿ, ಇಬ್ಬರು ಮಕ್ಕಳು, ಹೆತ್ತ ಅಮ್ಮನನ್ನೂ ಕತ್ತು ಸೀಳಿ ಸಾಯಿಸಿದ.. ಪೊಲೀಸ್ ಕ್ವಾರ್ಟರ್ಸ್​​ನಲ್ಲಿ ಐವರ ಬಲಿ

author-image
Ganesh
Updated On
ಪತ್ನಿ, ಇಬ್ಬರು ಮಕ್ಕಳು, ಹೆತ್ತ ಅಮ್ಮನನ್ನೂ ಕತ್ತು ಸೀಳಿ ಸಾಯಿಸಿದ.. ಪೊಲೀಸ್ ಕ್ವಾರ್ಟರ್ಸ್​​ನಲ್ಲಿ ಐವರ ಬಲಿ
Advertisment
  • ಪೊಲೀಸ್ ಕ್ವಾರ್ಟರ್ಸ್​ ಸಂಖ್ಯೆ CB-38 ನಲ್ಲಿ ಆಗಿದ್ದೇನು?
  • ಪ್ರೀತಿಸಿ ಮದುವೆಯಾದ ಮೇಲೆ ಏನೆಲ್ಲಾ ಆಗೋಯ್ತು..?
  • ದುರಂತಕ್ಕೆ ಕಾರಣವಾದಳಾ ಮಹಿಳಾ ಪೊಲೀಸ್ ಅಧಿಕಾರಿ?

ಅದೊಂದು ಸುಂದರ ಸಂಸಾರ. ಆತನ ಹೆಸರು ಪಂಕಜ್, ಆಕೆ ನೀತು. ಮಾಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅವರಿಬ್ಬರಿಗೂ ಪರಿಚಯವಾಗಿತ್ತು. ಪರಿಚಯವಾದ ಸ್ನೇಹ ಪ್ರೀತಿಗೆ ತಿರುಗಲು ಹೆಚ್ಚು ಕಾಲ ಬೇಕಿರಲಿಲ್ಲ. ಆ ಹೊತ್ತಿಗಾಗಲೇ ಆಕೆ ಕಾನ್ಸ್​ಟೇಬಲ್ ಪರೀಕ್ಷೆಗೆ ತಯಾರಿ ನಡೆಸಿದ್ದಳು. 2015ರಲ್ಲಿ ಪರೀಕ್ಷೆ ಬರೆದು ಯಶಸ್ವಿಯೂ ಆದಳು.

Advertisment

ಕಾನ್ಸ್​ಟೇಬಲ್ ಆಗಿದ್ದ ನೀತು ಪ್ರೇಮ ಸಂಬಂಧ ಮರೆಯದೇ 2019ರಲ್ಲಿ ಪಂಕಜ್​ನನ್ನು ಮದುವೆಯಾದಳು. ಮುದ್ದಾದ ಹೆಂಡತಿ, ಇಬ್ಬರು ಮಕ್ಕಳು ತಾಯಿಯೊಂದಿಗೆ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಬದುಕುತ್ತಿದ್ದ ಪಂಕಜ್​. ಅಷ್ಟರಲ್ಲಿ ಈ ಕುಟುಂಬದ ಸಂತಸಕ್ಕೆ ಗ್ರಹಣ ಶುರುವಾಗಿದೆ. ಪ್ರೇಮವಿವಾಹದ ನಂತರ ಜೀವಮಾನವಿಡೀ ಜೊತೆಯಲ್ಲಿಯೇ ಇರುತ್ತೇವೆ ಎಂಬ ಭರವಸೆ ಇಟ್ಟುಕೊಂಡಿದ್ದ ಜೋಡಿಯ ಜೀವನ ದುರಂತದಲ್ಲಿ ಅಂತ್ಯವಾಗಿದೆ. ಬಿಹಾರದ ಬಾಗಲ್ಪುರದಲ್ಲಿ ದುರಂತ ಈ ನಡೆದಿದೆ.

ಇದನ್ನೂ ಓದಿ:ಕೊನೆಗೂ ತಲೆ ಬಾಗಿದ ಕಿಂಗ್, ನಡೆಯಲಿಲ್ಲ ಕೊಹ್ಲಿ ಆಟ.. ಕಾಲಚಕ್ರ ತಿರುಗುವುದು ಅಂದ್ರೆ ಇದೇ..!

publive-image

ಕಾನ್ಸ್‌ಟೇಬಲ್ ನೀತು ಬಾಗಲ್ಪುರ ಎಸ್​ಎಸ್​ಪಿ ಕಚೇರಿಗೆ ವರ್ಗಾಯಿಸಲಾಗಿತ್ತು. ಅಲ್ಲಿ ಪತಿ ಪಂಕಜ್, ಇಬ್ಬರು ಮಕ್ಕಳು ಮತ್ತು ತನ್ನ ವಯಸ್ಸಾದ ಅತ್ತೆಯೊಂದಿಗೆ ಸಂತೋಷದಿಂದ ಬದುಕಲು ಪ್ರಾರಂಭಿಸಿದರು. ಅದೇ ವೇಳೆ ನೀತು ಪತಿ ಪಂಕಜ್ ಕೂಡ ಶೂ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದ.

Advertisment

publive-image

ಸಂತೋಷದಿಂದಿರುವಾಗಲೇ ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ. ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಶಂಕಿಸಿದ ಪತಿ ಪಂಕಜ್ ಪತ್ನಿಯನ್ನು ಪ್ರಶ್ನಿಸಿದ್ದಾನೆ. ಸೋಮವಾರ ರಾತ್ರಿ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ಇಬ್ಬರ ನಡುವೆ ವಾಗ್ವಾದ ನಡದಿದೆ. ಕಲಹ ವಿಕೋಪಕ್ಕೆ ತಿರುಗಿ ಕಾನ್ಸ್​​ಟೇಬಲ್ ಪತ್ನಿ ನೀತು, ಇಬ್ಬರು ಮಕ್ಕಳು, ತನ್ನ ತಾಯಿಯ ಕತ್ತು ಸೀಳಿ ಪಂಕಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದ್ದು, ಘಟನೆಗೆ ತನ್ನ ಹೆಂಡತಿಯ ಅಕ್ರಮ ಸಂಬಂಧ ಕಾರಣ ಎಂದು ಬರೆದುಕೊಂಡಿದ್ದಾನೆ. ಸದ್ಯ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳಿಗೆ ಲಾಟರಿ! 50 ರೂಪಾಯಿಂದ ಟಿಕೆಟ್ ಆರಂಭ.. ಊಟ, ಚಹಾ ಎಲ್ಲಾ ಸಿಗುತ್ತೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment