newsfirstkannada.com

ಪ್ರವಾಸಕ್ಕೆ ಹೋಗಿದ್ದಾಗ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ವೈದ್ಯರು ಸ್ಥಳದಲ್ಲೇ ಸಾವು

Share :

Published February 17, 2024 at 8:59am

Update February 17, 2024 at 9:02am

    ದುರ್ಘಟನೆಯಲ್ಲಿ 18 ತಿಂಗಳದ ಒಂದು ಮಗು ಕೂಡ ಸಾವು

    ಜಮ್ಮು-ಕಾಶ್ಮೀರಕ್ಕೆ ಹೋಗಿದ್ದ ವೈದ್ಯರ ಕುಟುಂಬ

    ಅಪಘಾತದ ಬಗ್ಗೆ ಕುಟುಂಬಕ್ಕೆ ಮಾಹಿತಿ ಕೊಟ್ಟಿರುವ ಪೊಲೀಸರು

ರಾಜಸ್ಥಾನದ ಬಿಕೆನರ್​​ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ 18 ತಿಂಗಳ ಮಗು ಕೂಡ ಸಾವನ್ನಪ್ಪಿದೆ.

ಬಿಕೆನರ್​​ನ ಭರತ್ಮಲಾ ಹೈವೇನಲ್ಲಿ SUV ವಾಹನ ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದೆ. ಮೃತ ನಾಲ್ವರು ಕೂಡ ಡಾಕ್ಟರ್ ಆಗಿದ್ದರು. ಡಾಕ್ಟರ್ ಪ್ರತೀಕ್, ಇವರ ಪತ್ನಿ ಡಾಕ್ಟರ್ ಹೇಟಲ್, ಡಾಕ್ಟರ್ ಪೂಜಾ ಇವರ ಪತಿ ಡಾ. ಕರಣ್ ಮೃತ ದುರ್ದೈವಿಗಳು. ಪೂಜಾ ಮತ್ತು ಕರಣ್ ಮಗಳು ಕೂಡ ಸಾವನ್ನಪ್ಪಿದೆ.

ಇವರು ಗುಜರಾತ್​ನ ಕಚ್ ನಿವಾಸಿಗಳಾಗಿದ್ದರು. ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದರು, ವಾಪಸ್ ಆಗುವ ವೇಳೆ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕೆ ಒಳಗಾಗಿರುವ ವೈದ್ಯಾಧಿಕಾರಿಗಳ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರವಾಸಕ್ಕೆ ಹೋಗಿದ್ದಾಗ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ವೈದ್ಯರು ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/02/ACCIDENT-22.jpg

Load More