ಇವು ವಿಶ್ವದ ಅತ್ಯಂತ ಪುರಾತನ 5 ಮರಗಳು.. ಒಂದೊಂದು ವೃಕ್ಷದ ಆಯಸ್ಸು ಕೇಳಿದ್ರೆ ಶಾಕ್ ಆಗ್ತೀರಿ!

author-image
Gopal Kulkarni
Updated On
ಇವು ವಿಶ್ವದ ಅತ್ಯಂತ ಪುರಾತನ 5 ಮರಗಳು.. ಒಂದೊಂದು ವೃಕ್ಷದ ಆಯಸ್ಸು ಕೇಳಿದ್ರೆ ಶಾಕ್ ಆಗ್ತೀರಿ!
Advertisment
  • ಈ ವೃಕ್ಷಗಳು ಎಷ್ಟು ಸಾವಿರ ವರ್ಷಗಳಿಂದ ಅಲುಗಾಡದೇ ನಿಂತಿವೆ ಗೊತ್ತಾ?
  • ಒಂದೊಂದು ವೃಕ್ಷಕ್ಕೂ ಇದೆ ಸಾವಿರ ಸಾವಿರ ವರ್ಷಗಳ ಇತಿಹಾಸ, ಆಯಸ್ಸು!
  • ವಿಶ್ವದಲ್ಲಿಯೇ ಅತ್ಯಂತ ಪುರಾತನವಾದ ಐದು ಪ್ರಮುಖ ಮರಗಳು ಇವು

ಪ್ರಕೃತಿ ಅಂದ್ರೆನೇ ಅದೊಂದು ವಿಸ್ಮಯಗಳ ಆಗರ. ಪ್ರಕೃತಿ ತನ್ನ ಒಡಲಲ್ಲಿ ನೂರಾರು ರಹಸ್ಯಗಳನ್ನು ಅಡಗಿಸಿಕೊಂಡು ಕೂತಿದೆ. ಕೆಲವೊಮ್ಮೆ ಮಾನವ ಜಗತ್ತಿನ ತರ್ಕಕ್ಕೆ ನಿಲುಕದ ಮಟ್ಟಕ್ಕೆ ಇರುತ್ತವೆ. ಅಂತಹ ಅನೇಕ ರಹಸ್ಯಗಳು ನಿಗೂಢತೆಗಳೂ ಇಂದಿಗೂ ಕೂಡ ಮಾನವ ಜಗತ್ತಿಗೆ ಸವಾಲಾಗಿ ನಿಂತಿವೆ. ಅಂತಹ ವಿಸ್ಮಯಗಳಲ್ಲಿ ಜಗತ್ತಿನಲ್ಲರುವ ಈ ಐದು ವೃಕ್ಷಗಳು. ಇವು ಶತಮಾನಗಳಿಂದ ಅಲ್ಲ. ಸಹಸ್ರಮಾನಗಳಿಂದಲೂ ಇಂದಿಗೂ ಕೂಡ ಸಾಸಿವೆ ಕಾಳಷ್ಟು ಮುಕ್ಕಾಗದೇ ಅಂದಿಗೆ ಹೇಗೆ ಇದ್ದವೋ ಇಂದಿಗೂ ಕೂಡ ಹಾಗೆ ಇವೆ. ಅಂತಹ ಪ್ರಕೃತಿಯ ವಿಸ್ಮಯಕಾರಿ ವೃಕ್ಷಗಳ ಬಗ್ಗೆ ಇಂದು ನಾವು ನಿಮಗೆ ಪರಿಚಯಿಸಲಿದ್ದೇವೆ.

publive-image

ಮೆಥುಸೆಲಾ ಮರ: ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಮೆಥುಸೆಲಾ ಎಂಬ ಗಿಡವು ವಿಶ್ವದ ಅತ್ಯಂತ ಪುರಾತನ ಮರವೆಂದು ಹೇಳಲಾಗುತ್ತದೆ. ಇದರ ಆಯಸ್ಸು ಸುಮಾರು 4856 ವರ್ಷವಂತೆ. ಈ ಸಹಸ್ರಾರು ವರ್ಷಗಳಿಂದಲೂ ವೈಟ್ ಮೌಂಟೇನ್ಸ್​ನಲ್ಲಿ ಅಲ್ಲಾಡದೆ ಅಚಲವಾಗಿ ನಿಂತಿರುವ ವೃಕ್ಷವಿದು.1957ರಲ್ಲಿ ಎಡ್ಮಂಡ್ ಶುಲ್ಮನ್ ಮತ್ತು ಟಾಮ್ ಹಾರ್ಲನ್ ಈ ಮರದ ಸ್ಯಾಂಪಲ್​ನ್ನು ತೆಗೆದುಕೊಂಡು ಪರೀಕ್ಷಿಸಿದಾಗ ಇದು ಕ್ರಿಸ್ತಪೂರ್ವ 2833 ರಿಂದಲೂ ಇಲ್ಲಿ ನೆಲೆಸಿದೆ ಎಂದು ತಿಳಿದು ಬಂದಿದೆ

publive-image

ಒಲ್ಡ್ ಟಿಕೊ: ಸ್ವಿಡನ್​ನಲ್ಲಿರುವ ಒಲ್ಡ್​ ಟಿಕೋ ಎಂಬ ಹೆಸರಿನ ಮರವು ಅತ್ಯಂತ ಪುರಾತನ ಮರಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಇದರ ಆಯಸ್ಸು ಸುಮಾರು 9500 ವರ್ಷ ಎಂದು ಗುರುತಿಸಲಾಗಿದೆ ಫುಲುಫ್ಜಾಲೆಟ್ ನ್ಯಾಷನಲ್ ಪಾರ್ಕ್​​ನಲ್ಲಿ ಇಂದಿಗೂ ಇರುವ ಈ ವೃಕ್ಷ 16 ಅಡಿ ಎತ್ತರವನ್ನು ಹೊಂದಿದೆ.

publive-image

ಅಲರ್ಸ್ ಮಿಲೇನಾರಿಯೊ: ಇನ್ನು ಚೀಲಿ ದೇಶದಲ್ಲಿರುವ ಅಲರ್ಸ್ ಮಿಲೇನಾರಿಯೊ ಎಂಬ ಪ್ರಬೇಧದ ಮರವು ಕೂಡ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಆಯಸ್ಸನ್ನು ಹೊಂದಿರುವ ಮರಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಇದು ಸುಮಾರು 5,400 ವರ್ಷಗಳಿಂದಲೂ ಚೀಲಿಯ ಕೊಸ್ಟೋರೊ ನ್ಯಾಷನಲ್ ಪಾರ್ಕ್​ನಲ್ಲಿದೆ. ವಿಶ್ವದ ಅತ್ಯಂತ ಹಿರಿಯದಾದ ಮರ ಎಂದು ಈ ವೃಕ್ಷವನ್ನು ಕರೆಯುತ್ತಾರೆ.

publive-image

ಸರ್ವ್ ಇ ಅಬರ್ಕುಹ್: ಇರಾನ್​ನಲ್ಲಿರುವ ಸರ್ವ್ ಇ ಅಬರ್ಕುಹ್ ಎಂಬ ಮರವು ಜಗತ್ತಿನ ಅಂತ್ಯಯ ಹಳೆಯ ವೃಕ್ಷಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಸುಮಾರು 4 ಸಾವಿರ ವರ್ಷಗಳ ಆಯಸ್ಸನ್ನು ಕಳೆದಿರುವ ಈ ಮರ ಇಂದಿಗೂ ಕೂಡ ನಳನಳಿಸುತ್ತ ಹಾಗೆಯೇ ಇದೆ. ಇದನ್ನು ಇರಾನ್​ನ ರಾಷ್ಟ್ರೀಯ ಪರಂಪರೆಯ ಗುರುತು ಎಂದೇ ಗುರುತಿಸುತ್ತಾರೆ.

publive-image

ಜೋಮನ್ ಸುಗಿ: ಈ ಒಂದು ಮರ ಜಪಾನ್​ನಲ್ಲಿದೆ. ಜಪಾನ್​ನ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾದ ಯುಕೋಶಿಮಾ ದ್ವೀಪದಲ್ಲಿ ಈ ಮರವಿದ್ದು ಇದು ಸುಮಾರು 2,170 ವರ್ಷಗಳಿಂದ 7,200 ವರ್ಷಗಳವರೆಗೆ ಇತಿಹಾಸವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅಂದ್ರೆ ಇದರ ಹುಟ್ಟಿನ ವರ್ಷ ಸ್ಪಷ್ಟವಾಗಿ ಇನ್ನೂ ತಿಳಿದಲ್ಲ. ಆದ್ರೆ ಒಂದು ಅಂದಾಜಿನ ಪ್ರಕಾರ 2,170 ರಿಂದ 7,200 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment