ತಾಯಿಗೆ ಗುಂಡಿಟ್ಟ.. ಹೆಂಡತಿಗೆ ಸುತ್ತಿಗೆಯಿಂದ ಹೊಡೆದ ಕೊಂದ.. ಮೂವರು ಮಕ್ಕಳ ಟೆರಸ್​ನಿಂದ ಎಸೆದು ಸಾಯಿಸಿದ..!

author-image
Ganesh
Updated On
ತಾಯಿಗೆ ಗುಂಡಿಟ್ಟ.. ಹೆಂಡತಿಗೆ ಸುತ್ತಿಗೆಯಿಂದ ಹೊಡೆದ ಕೊಂದ.. ಮೂವರು ಮಕ್ಕಳ ಟೆರಸ್​ನಿಂದ ಎಸೆದು ಸಾಯಿಸಿದ..!
Advertisment
  • ಐವರನ್ನು ಕೊಂದು ಆತ್ಮಹತ್ಯೆಗೆ ಶರಣಾದ ರಾಕ್ಷಸ
  • ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿರುವ ಮಾಹಿತಿ
  • ವಿಷಯ ತಿಳಿಯುತ್ತಿದ್ದಂತೆಯೇ ಬೆಚ್ಚಿಬಿದ್ದ ಸ್ಥಳೀಯರು

ಉತ್ತರ ಪ್ರದೇಶದ ಸೀತಾಪುರದಲ್ಲಿ ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದು ಭಾರೀ ಸಂಚಲನ ಮೂಡಿಸಿದೆ.

ವರದಿಗಳ ಪ್ರಕಾರ.. ವ್ಯಕ್ತಿಯೊಬ್ಬ ತಾಯಿ, ಹೆಂಡತಿ ಮತ್ತು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ತಾಯಿ ಮೇಲೆ ಗುಂಡು ಹಾರಿಸಿ ಕೊಲೆಗೈದರೆ, ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾನೆ ಎನ್ನಲಾಗಿದೆ. ಮಥುರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೃತ್ಯ ನಡೆದಿದೆ.

ಇದನ್ನೂ ಓದಿ:Rain Rain! ಬೆಂಗಳೂರಲ್ಲಿ ರಾತ್ರಿ ಸುರಿದ ಮಳೆಗೆ ಭಾರೀ ಅನಾಹುತ.. ಪೂರ್ವ ಮುಂಗಾರು ಆಘಾತ..!

ತಾಯಿ ಹಾಗೂ ಪತ್ನಿಯನ್ನು ಕೊಲೆ ಮಾಡಿದ ಬಳಿಕ ಮೂವರು ಮಕ್ಕಳನ್ನು ಟೆರಸ್​ನಿಂದ ಎಸೆದಿದ್ದಾನೆ. ಪರಿಣಾಮ ಅವರು ಕೂಡ ಗಂಭೀರವಾಗಿ ಗಾಯಗೊಂಡು ಪ್ರಾಣಬಿಟ್ಟಿದ್ದಾರೆ. ಬಳಿಕ ಆರೋಪ ತಾನೂ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸ್ ಅಧಿಕಾರಿಗಳ ಪ್ರಾಥಮಿಕ ವರದಿ ಪ್ರಕಾರ, ಆತ ಮದ್ಯ ವ್ಯಸನಿ ಹಾಗೂ ಮಾನಸಿಕ ಅಸ್ವಸ್ಥ ಕೂಡ ಆಗಿದ್ದ ಎಂದು ತಿಳಿದುಬಂದಿದೆ.

ಅನುರಾಗ್ ಸಿಂಗ್ ಕೊಲೆ ಮಾಡಿದ ಆರೋಪಿ. ತಾಯಿ ಸಾವಿತ್ರಿ ದೇವಿ (62), ಪತ್ನಿ ವೀರೇಂದ್ರ ಸಿಂಗ್ (40), ಪುತ್ರಿ ಅಶ್ವಿ (12), ಪುತ್ರಿ ಅರ್ನಿ (8), ಅದ್ವಿಕ್ (4) ಹತ್ಯೆಯಾದವರು. ಕೊಲೆ ಆರೋಪಿ ಅನುರಾಗ್​ ಸಿಂಗ್​ಗೆ 45 ವರ್ಷವಾಗಿತ್ತು.

ಇದನ್ನೂ ಓದಿ:ಜೆಡಿಎಸ್​ ಜೊತೆಗೆ ಮೈತ್ರಿ ಬೇಕೋ..? ಬೇಡವೋ..? ಕುತೂಹಲ ಮೂಡಿಸಿದ ಬಿಜೆಪಿಯ ಇವತ್ತಿನ ಸಭೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment