Advertisment

SSLC ವಿದ್ಯಾರ್ಥಿಗಳ ಅಕ್ರಮ ಬಂಧನ ಆರೋಪ; ತಪ್ಪು ಮಾಡಿಬಿಟ್ರಾ ಪೊಲೀಸರು?

author-image
Ganesh
Updated On
SSLC ವಿದ್ಯಾರ್ಥಿಗಳ ಅಕ್ರಮ ಬಂಧನ ಆರೋಪ; ತಪ್ಪು ಮಾಡಿಬಿಟ್ರಾ ಪೊಲೀಸರು?
Advertisment
  • ಬಾಲಮಂದಿರದಲ್ಲಿ ಮಕ್ಕಳು, ಕಣ್ಣೀರಲ್ಲಿ ಕುಟುಂಬಸ್ಥರು‌
  • ಮಾಡದ‌ ತಪ್ಪಿಗೆ ಬಲಿಪಶುವಾದ್ರಾ ಈ ಐವರು ಮಕ್ಕಳು?
  • ಮಾಡದ‌ ತಪ್ಪಿಗೆ ಬಲಿಪಶುವಾದ್ರಾ ಈ ಐವರು ಮಕ್ಕಳು?

ಬೆಂಗಳೂರು: ಎಕ್ಸಾಂ ಹಾಲ್​ನಲ್ಲಿರಬೇಕಾದ ಮಕ್ಕಳನ್ನು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಜೆ‌.ಪಿ.ನಗರ ಪೊಲೀಸರ ವಿರುದ್ಧ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

Advertisment

ಏನಿದು ಪ್ರಕರಣ..?

ಇತ್ತೀಚೆಗೆ ನಡೆದ ಎಸ್​ಎಸ್​ಎಲ್​ಸಿ ಎಕ್ಸಾಂ ದಿನ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ. ಬ್ಯಾಗ್ ಇಡುವ ವಿಚಾರಕ್ಕೆ ಸಾರಕ್ಕಿ ಮತ್ತು ರಾಗಿಗುಡ್ಡ ವಿದ್ಯಾರ್ಥಿಗಳ ನಡುವೆ ಬಡಿದಾಟ ಶುರುವಾಗಿದೆ ಎನ್ನಲಾಗಿದೆ. ಈ ಗಲಾಟೆಯಲ್ಲಿ ಸಾರಕ್ಕಿ ಸ್ಕೂಲ್​ನ ವಿದ್ಯಾರ್ಥಿಗಳಿಗೆ ಗಾಯವಾಗಿದೆ. ತಲೆಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧ ರಾಗಿಗುಡ್ಡ ಸ್ಕೂಲ್​ನ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಅರೆಸ್ಟ್ ಮಾಡಿ ಬಾಲಮಂದಿರಕ್ಕೆ ಕಳುಹಿಸಿದ್ದಾರೆ.

ಇದನ್ನೂ ಓದಿ:ಮಾಂಸಕ್ಕಾಗಿ ಗುಂಡಿಟ್ಟು ಕಾಡೆಮ್ಮೆ ಕೊಂದ ಪಾಪಿಗಳು, ಮಾಂಸ ನೋಡಿ ಅಧಿಕಾರಿಗಳು ಶಾಕ್..!

ಪೋಷಕರ ಆರೋಪವೇನು?

ನಮ್ಮ ಮಕ್ಕಳಿಗೆ ಗಲಾಟೆಯಾಗಿರುವ ವಿಚಾರವೇ ಗೊತ್ತಿಲ್ಲ. ಎಕ್ಸಾಂ ಬರೆಯೋಕೆ ಹೋದವರನ್ನ ಅರೆಸ್ಟ್ ಮಾಡಿದ್ದಾರೆ. ಒತ್ತಡಕ್ಕೆ ಮಣಿದು ಅಮಾಯಕ ಮಕ್ಕಳನ್ನು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಮಾಡಿದ ಮೇಲೂ ಸರಿಯಾಗಿ ಮಾಹಿತಿಯನ್ನು‌ ಕೊಟ್ಟಿಲ್ಲ. ಮಕ್ಕಳ ಆಧಾರ್ ಕಾರ್ಡ್ ತಗೊಂಡು ಸ್ಟೇಷನ್ ಬನ್ನಿ ಎಂದಿದ್ದರು.

Advertisment

ಪೊಲೀಸರು ಯಾವುದೋ ಪೇಪರ್​ಗೆ ಸಹಿ ಹಾಕಿಸಿಕೊಂಡಿದ್ದಾರೆ. ಏನ್ ವಿಷ್ಯಾ ಎಂದು ‌ಪೊಲೀಸರು ನಮಗೆ ಸರಿಯಾಗಿ ಹೇಳಿಲ್ಲ. ಆಮೇಲೆ ನಮ್ಮ ಮಗನನ್ನ ಬಾಲಮಂದಿರಕ್ಕೆ ಶಿಫ್ಟ್ ಮಾಡಿದ್ದಾರೆ. ಬಾಲಮಂದಿರದಲ್ಲಿ‌ ಮಕ್ಕಳು ತುಂಬಾ ಭಯಭೀತರಾಗಿದ್ದಾರೆ. ಎಕ್ಸಾಂಗೆ ಸರಿಯಾಗಿ ತಯಾರಿ ನಡೆಸಲು ಮಕ್ಕಳಿಗೆ ಆಗ್ತಿಲ್ಲ ಎಂದು ಪೊಲೀಸರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಮೇಲೆ ಇರೋ ಮತ್ತೊಂದು ಆರೋಪ ಏನು?

ಘಟನೆ ನಡೆದು 1 ಗಂಟೆ ಕಳೆದ ಮೇಲೆ ಜೆಪಿ ನಗರ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ ಎನ್ನಲಾಗಿದೆ. ರಾಗಿ ಗುಡ್ಡ ಶಾಲಾ ‌ಮಕ್ಕಳದ್ದು ಬ್ಲೂ ಕಲರ್ ಯೂನಿಫಾರ್ಮ್. ಇದೇ ಬ್ಲೂ ಯೂನಿಫಾರ್ಮ್ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಿದ್ದಾರೆ. ಘಟನೆಗೆ ಸಂಬಂಧಪಟ್ಟಂತಹ ಯಾವುದೇ ದೃಶ್ಯ, ಸಾಕ್ಷಿ ಪೊಲೀಸರ ಬಳಿ ಇಲ್ಲ. ಸಿ.ಸಿ ಟಿವಿ / ಗಲಾಟೆಯ ವಿಡಿಯೋ ಪೊಲೀಸರ ಬಳಿ ಇಲ್ಲ. ರಾಗಿ ಗುಡ್ಡ ಸ್ಕೂಲ್‌ ಮಕ್ಕಳ ಯೂನಿಫಾರ್ಮ್ ಬ್ಲೂ ಕಲರ್. ಬ್ಲೂ ಯೂನಿಫಾರ್ಮ್ ಹಾಕಿದ್ದ ವಿದ್ಯಾರ್ಥಿಗಳನ್ನ ಅರೆಸ್ಟ್ ಮಾಡಿದ್ದಾರೆ ಎಂಬ ಆರೋಪ ಕೂಡ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment