ಫೈನಲ್ ಮ್ಯಾಚ್​ನಲ್ಲಿ 5 ಸ್ಟಾರ್​ ವಾರ್.. ಇದು ಕೇವಲ ಆಟಗಾರರ ನಡುವಿನ ಬ್ಯಾಟಲ್ ಅಲ್ಲವೇ ಅಲ್ಲ..!

author-image
Ganesh
Updated On
ಫೈನಲ್ ಮ್ಯಾಚ್​ನಲ್ಲಿ 5 ಸ್ಟಾರ್​ ವಾರ್.. ಇದು ಕೇವಲ ಆಟಗಾರರ ನಡುವಿನ ಬ್ಯಾಟಲ್ ಅಲ್ಲವೇ ಅಲ್ಲ..!
Advertisment
  • ನಮೋ ಮೈದಾನದಲ್ಲಿ ಐಪಿಎಲ್​ ಫೈನಲ್​ ಪಂದ್ಯ
  • IPL ಫೈನಲ್​ ಹಣಾಹಣಿಯಲ್ಲಿ ಪ್ರತಿಷ್ಠೆಯ ಫೈಟ್​​
  • ರಣಕಣದಲ್ಲಿ ಸ್ಟಾರ್​​ಗಳ ನಡುವೆ ಸೈಲೆಂಟ್​​ ವಾರ್​

ಅಹ್ಮದಾಬಾದ್​​ನ ನಮೋ ಮೈದಾನದಲ್ಲಿಂದು ಸ್ಟಾರ್​ ವಾರ್​ ಜೋರಾಗಿದೆ. ಕಪ್​​ಗಾಗಿ ಹೋರಾಟ ಒಂದೆಡೆಯಾದ್ರೆ, ಪ್ರತಿಷ್ಠೆಯ ಫೈಟ್​​ ಇನ್ನೊಂದೆಡೆ. ಎರಡೂ ತಂಡಗಳ ನಡುವಿನ ಹಣಾಹಣಿಗಿಂತ, ಸ್ಟಾರ್​​ಗಳ ನಡುವಿನ ಬ್ಯಾಟಲ್​​ ಕ್ರಿಕೆಟ್​​ ಲೋಕದಲ್ಲಿ ವಿಶೇಷವಾದ ಕುತೂಹಲ ಹುಟ್ಟು ಹಾಕಿದೆ.

ಸ್ಟಾರ್​ವಾರ್​ 1: ಪಾಟೀದಾರ್ vs ಅಯ್ಯರ್​

ಈ ಸೀಸನ್​ ಐಪಿಎಲ್​ನ ಬೆಸ್ಟ್​ ಕ್ಯಾಪ್ಟನ್​ ಇಂದು ತೊಡೆತಟ್ಟಿದ್ದಾರೆ. ನಾಯಕತ್ವದ ಜವಾಬ್ದಾರಿ ಹೊತ್ತ ಮೊದಲ ಸೀಸನ್​ನಲ್ಲೇ ರಜತ್​ ಪಾಟೀದಾರ್​ ಆರ್​​ಸಿಬಿಯನ್ನ ಫೈನಲ್​ಗೆ ಕೊಂಡೊಯ್ದಿದ್ದಾರೆ. ಶ್ರೇಯಸ್​​ ಅಯ್ಯರ್​​ 3ನೇ ಬಾರಿ 3ನೇ ತಂಡವನ್ನ ಐಪಿಎಲ್​ ಫೈನಲ್​ಗೆ ತಂದು ನಿಲ್ಲಿಸಿದ್ದಾರೆ. ಸೀಸನ್​ನ ಯಶಸ್ವಿ ಕ್ಯಾಪ್ಟನ್​ ಪಟ್ಟ ಕಪ್​ ಗೆದ್ದವರ ಪಾಲಾಗಲಿದ್ದು, ಶ್ರೇಯಸ್ಸಿಗಾಗಿ ಇಬ್ಬರು ನಾಯಕರ ನಡುವೆ ಪೈಪೋಟಿಯಿದೆ.

ಇದನ್ನೂ ಓದಿ: ಆರ್​ಸಿಬಿಗೆ ಗುಡ್​ನ್ಯೂಸ್​.. ತವರಿಗೆ ಹೋಗಿದ್ದ ಸ್ಫೋಟಕ ಬ್ಯಾಟರ್​ ತಂಡಕ್ಕೆ ಕಂಬ್ಯಾಕ್..!

ಸ್ಟಾರ್​ವಾರ್​ 2: ಕೊಹ್ಲಿ​​ vs ಅಯ್ಯರ್​

ಆರ್​​​ಸಿಬಿಯ ಸ್ಟಾರ್​​ ಕೊಹ್ಲಿ ಐಪಿಎಲ್​ ಲೋಕದ ಸುಲ್ತಾನನ ಸಿಂಹಾಸನದಲ್ಲಿ ವಿರಾಜಮಾನನಾಗಿದ್ದಾರೆ. ಕಿಂಗ್​ ಮುಕುಟಕ್ಕೆ ಐಪಿಎಲ್​ ಕಿರೀಟ ಇನ್ನೂ ದಕ್ಕಿಲ್ಲ. 3 ಬಾರಿ ಹಾರ್ಟ್​​ಬ್ರೇಕ್​ ಅನುಭವಿಸಿರೋ ಕೊಹ್ಲಿ, ಚೊಚ್ಚಲ ಟ್ರೋಫಿ ಕನವರಿಕೆಯಲ್ಲಿದ್ದಾರೆ. ಪಂಜಾಬ್​ನ ಶ್ರೇಯಸ್​ ಅಯ್ಯರ್​ ಸತತ 2ನೇ ಗೆದ್ದ ಸಾಧನೆ ಮಾಡೋ ಕನಸು ಕಾಣ್ತಿದ್ದಾರೆ. ಯಾರ ಕನಸು ನನಸಾಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

ಸ್ಟಾರ್​ವಾರ್​ 3: ಫ್ಲವರ್​​ vs ಪಾಂಟಿಂಗ್​

ಆ್ಯಂಡಿ ಫ್ಲವರ್​​ ಹಾಗೂ ರಿಕಿ ಪಾಂಟಿಂಗ್​ ಎರಡೂ ತಂಡಗಳ ಹಣೆಬರಹ ಬದಲಿಸಿದ ಗುರುಗಳು. ಸತತ ಹಿನ್ನಡೆ ಅನುಭವಿಸಿದ್ದ ಆರ್​​ಸಿಬಿ ಆ್ಯಂಡಿ ಫ್ಲವರ್​​​ ಎಂಟ್ರಿಯಾದ ಬಳಿಕ ಫೈಯರ್​ನಂತೆ ಧಗಧಗಿಸ್ತಿದೆ. ಫೈರಿ ಫ್ಲವರ್​ ಮಾರ್ಗದರ್ಶನದಲ್ಲಿ ಫೈನಲ್​ಗೆ ರಾಯಲ್​ ಆಗಿ ಆರ್​​ಸಿಬಿ ಬಂದಿದೆ. ಅತ್ತ ಹೆಡ್​ಕೋಚ್​ ಪಟ್ಟವೇರಿದ ಮೊದಲ ಸೀಸನ್​ನಲ್ಲೇ ಪಂಟರ್​ ಪಾಂಟಿಂಗ್​ ಪಂಜಾಬ್​ ಪಡೆಯನ್ನ ಫೈನಲ್​ ತಲುಪಿಸಿದ್ದಾರೆ. 18 ವರ್ಷಗಳಿಂದ ಕಪ್​ ಗೆಲ್ಲದ ತಂಡಕ್ಕೆ ಕಿರೀಟ ಗೆಲ್ಲಿಸಿಕೊಟ್ಟು ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳೋದು ಇಬ್ಬರ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ: ಬಂದೇ ಬಿಟ್ಟ ಮಳೆರಾಯ.. ಅಹ್ಮದಾಬಾದ್​ನಲ್ಲಿ ಇವತ್ತು ಮಳೆ ಬೀಳುವ ಸಾಧ್ಯತೆ ಎಷ್ಟಿದೆ..?

ಸ್ಟಾರ್​ವಾರ್​ 4: ಶರ್ಮಾ vs ಜಿಂಟಾ

ಬಾಲಿವುಡ್​​ನ ಸ್ಟಾರ್​​ ನಟಿಮಣಿಯರು ಇಂದಿನ ಫೈನಲ್​​ ಕದನಕ್ಕೆ ಸಾಕ್ಷಿಯಾಗಲಿದ್ದಾರೆ. ಆರ್​​ಸಿಬಿ ಬೆಂಬಲಿಸಿ ಅನುಷ್ಕಾ ಶರ್ಮಾ ಸ್ಟ್ಯಾಂಡ್​ನಲ್ಲಿ ಕಾಣಿಸಿಕೊಳ್ಳಲಿದ್ರೆ, ಪಂಜಾಬ್​ ಪಡೆಗೆ ಒಡತಿ ಪ್ರೀತಿ ಜಿಂಟಾ ಚಿಯರ್​ ಮಾಡಲಿದ್ದಾರೆ. ಇಬ್ಬರೂ ನಟಿಮಣಿಯರು ಚೊಚ್ಚಲ ಟ್ರೋಫಿ ಗೆಲುವನ್ನ ಎದುರು ನೋಡ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಯಾರು ಸಂಭ್ರಮಿಸ್ತಾರೆ? ಯಾರು ಹತಾಶರಾಗಿ ಹಿಂದಿರುಗ್ತಾರೆ ಅನ್ನೋದೂ ಕ್ಯೂರಿಯಾಸಿಟಿ ಹೆಚ್ಚಿಸಿದೆ.

ಸ್ಟಾರ್​ವಾರ್ 5: ಹೇಜಲ್​ವುಡ್​ vs ಆರ್ಷ್​​ದೀಪ್​ ಸಿಂಗ್

Last but not the least.. ನಮೋ ಅಂಗಳದಲ್ಲಿ ಪೇಸರ್​​ಗಳ ಕದನವನ್ನ ಕಡೆಗಣಿಸುವಂತೆ ಇಲ್ಲ. ಅನುಭವಿ ಜೋಷ್​ ಹೇಜಲ್​ವುಡ್​ ಆರ್​​ಸಿಬಿ ತಂಡದ ಬೌಲಿಂಗ್​ ಅಟ್ಯಾಕ್​ನ ಜೋಷ್​ ಆಗಿದ್ದಾರೆ. ಅತ್ತ ಯುವ ಆರ್ಷ್​​ದೀಪ್​ ಸಿಂಗ್ ಪಂಜಾಬ್​ ಪವರ್​ ಅನಿಸಿದ್ದಾರೆ. ಜೂನಿಯರ್​​ vs ಸೀನಿಯರ್​​ ನಡುವೆ ಯಾರು ಬೆಸ್ಟ್​ ಅನ್ನೋದು ಪ್ರಶ್ನೆಗೂ ಇಂದಿನ ಬ್ಯಾಟಲ್​ ಆನ್ಸರ್​ ಕೊಡಲಿದೆ.
ಇಂದಿನ ಐಪಿಎಲ್​ ಫೈನಲ್​ ರಣಕಣದಲ್ಲಿ ಸ್ಟಾರ್​ಗಳ ನಡುವೆ ಹೈವೋಲ್ಟೆಜ್​ ವಾರ್​ ನಡೆಯಲಿದೆ. ಪ್ರತಿಷ್ಟೆಯ ಫೈಟ್​ನಲ್ಲಿ ಗೆದ್ದು ಬೀಗೋದ್ಯಾರು? ಸೋತು ನಿರಾಶರಾಗೋದ್ಯಾರು ಅನ್ನೋದಕ್ಕೆ ಇಂದು ರಾತ್ರಿ ಆನ್ಸರ್​ ಸಿಗಲಿದೆ.

ಇದನ್ನೂ ಓದಿ: ಇವತ್ತು ಶಾಕಿಂಗ್ ನ್ಯೂಸ್ ಕೊಡ್ತಾರಾ ಕೊಹ್ಲಿ.. ವಿರಾಟ್ ಅಭಿಮಾನಿಗಳಿಗೆ ಢವಢವ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment