Advertisment

ವಿರಾಟ್​​ ಬದುಕು ಬದಲಾಯಿಸಿದ ಐದು ಸ್ಟ್ರಾಟಜಿಗಳು! ಇದುವೇ ವಿಶ್ವವಿಕ್ರಮ ಕೊಹ್ಲಿ ವೈಫಲ್ಯ ಮೆಟ್ಟಿನಿಂತ ಕಹಾನಿ!

author-image
AS Harshith
Updated On
ವಿರಾಟ್​​ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣವೇನು.. ಕೊಹ್ಲಿ ಬಗ್ಗೆ ಮಾಜಿ ಕ್ರಿಕೆಟರ್​ ಶಾಕಿಂಗ್ ಹೇಳಿಕೆ!
Advertisment
  • 2014 ರಲ್ಲಿ ಅಟ್ಟರ್​ ಫ್ಲಾಪ್ ಶೋ..ತಂಡದಿಂದ ಡ್ರಾಪ್​​​..!
  • ಬಿಗ್​​ ಸೆಟ್​​ಬ್ಯಾಕ್​​ನಿಂದ ವಿಶ್ವವಿಕ್ರಮನಾಗಿದ್ದೆ ರೋಚಕ..!
  • ಮಾನಸಿಕವಾಗಿ ಕುಗ್ಗಿಹೋಗಿದ್ದ ಸೆಂಚುರಿ ಸಾಮ್ರಾಟ

ಕಿಂಗ್ ಕೊಹ್ಲಿ ಅಂದ್ರೆ ಗೆಲುವುಗಳ ರಾಜ. ಯಶಸ್ಸಿನ ಶಿಖರವೇರಿದ ಕ್ರಿಕೆಟ್ ದಂತಕಥೆ. ಇಂತಹ ಮಹಾನ್​ ಆಟಗಾರ ದಶಕದ ಹಿಂದೆ ರನ್ ಬರದಿಂದ ಕ್ರಿಕೆಟ್ ಲೋಕಕ್ಕೆ ವಿಲನ್ ಆಗಿದ್ರು. ಅನುಭವಿಸಿದ ಯಾತನೆಗೆ ಲೆಕ್ಕವಿಲ್ಲ. ಸಂಪೂರ್ಣ ಕುಗ್ಗಿಹೋಗಿದ್ದ ಕೊಹ್ಲಿ ಬದುಕು ಬದಲಿಸಿದ್ದು ಐದು ಸ್ಟ್ರಾಟಜಿಸ್​​​. ಇದರಿಂದ ವಿರಾಟ್​ ಜಗತ್ತಿನಾದ್ಯಂತ ವಿರಾಜಿಸಿದ್ರು. ಕ್ರಿಕೆಟ್ ಲೋಕವನ್ನ ಸಂಪೂರ್ಣವಾಗಿ ಕಬ್ಜಾ ಮಾಡಿಕೊಂಡ್ರು.

Advertisment

ಆ 5 ಕೋರ್​ ಸ್ಟ್ರಾಟಜಿಸ್​​ ಕೊಹ್ಲಿ ಕರಿಯರ್ ಬದಲಿಸಿದ್ದೇಗೆ..?

ವಿರಾಟ್ ಕೊಹ್ಲಿ..! ಜಂಟಲ್​ಮೆನ್ ಗೇಮ್​ನ ರಿಯಲ್ ವಾರಿಯರ್​​​. ವಿಶ್ವ ಮೆಚ್ಚಿದ ವಿಕ್ರಮ. ಮನೋಜ್ಞ ಆಟದ ಮಾಯಾವಿ. ಕ್ರಿಕೆಟ್​ ರಣರಂಗದ ರಣಚತುರ. ಬೌಲರ್ಸ್​ ಪಾಲಿಗೆ ದುಸ್ವಪ್ನಕಾರ. ಬ್ಯಾಟ್ ಇರೋದು ಘರ್ಜಿಸೋಕೆ, ಸೆಂಚುರಿಗಳ ಸರಮಾಲೆ ಕಟ್ಟೋಕೆ ಅನ್ನೋದನ್ನ ತೋರಿಸಿಕೊಟ್ಟ ತ್ರಿವಿಕ್ರಮ. ಇಂತಹ ಅಗ್ರಗಣ್ಯ ಬ್ಯಾಟರ್​ 2014 ರಲ್ಲಿ ದಯನೀಯ ವೈಫಲ್ಯದ ಸುಳಿಗೆ ಸಿಲುಕಿದ್ರು. ಇಂಗ್ಲೆಂಡ್​ ಪ್ರವಾಸದಲ್ಲಿ ಕೊಹ್ಲಿ ಬ್ಯಾಟ್​​​​ ಫುಲ್ ಸೈಲೆಂಟಾಗಿತ್ತು. ಇದಕ್ಕಾಗಿ ಇನ್ನಿಲ್ಲದ ಟೀಕೆ, ಅಪಮಾನ ಎದುರಿಸಿದ್ರು. ತಂಡದಿಂದ ಹೊರಬಿದ್ದು ಮಾನಸಿಕವಾಗಿ ಕುಗ್ಗಿ ಹೋಗ್ತಾರೆ.

publive-image

ಇದನ್ನೂ ಓದಿ: ನಾಯಕತ್ವ ವಿಚಾರದಲ್ಲಿ ರಾಹುಲ್​ಗೆ ಅನ್ಯಾಯ.. ಹೀಗಾದ್ರೆ ಈ ಕನ್ನಡಿಗ ತಂಡದಲ್ಲೂ ಇರಲ್ವಾ?​​

ಸತತ ಫೇಲ್ಯೂರ್​ ಬೆನ್ನಲ್ಲೆ ಕೊಹ್ಲಿ ಕರಿಯರ್​ ಕ್ಲೋಸ್​ ಅನ್ನೋ ಟಾಕ್ಸ್ ಕೇಳಿ ಬರುತ್ತೆ. ಬಳಿಕವೇ ನೋಡಿ ಅಸಲಿ ಕೊಹ್ಲಿ ಖದರ್​​​​ ಅನ್ನ ಕ್ರಿಕೆಟ್ ಜಗತ್ತು ನೋಡಿದ್ದು. ಅದ್ಯಾವ ಮಟ್ಟಿಗೆ ಅಂದ್ರೆ ಯಾವ ಜನ ಕೊಹ್ಲಿಯನ್ನ ಟೀಕಿಸಿತ್ತೋ, ಅದೇ ಜನ ತಲೆ ಮೇಲೆ ಹೊತ್ತು ಮೆರೆದಾಡಿದ್ರು. ವಿಶ್ವದ ನಂ.1 ಬ್ಯಾಟ್ಸ್​​ಮನ್​​​, ಗ್ಲೋಬಲ್ ಐಕಾನ್ ಆದ್ರು. ಬಿಗ್​​ ಸೆಟ್​ಬ್ಯಾಕ್​​ನಿಂದ ಹೊರಬಂದು ಕ್ರಿಕೆಟ್ ಲೋಕವನ್ನ ಆಳಲು ಕಾರಣವಾಗಿದ್ದು ಆ ಐದು ಕೋರ್​ ಸ್ಟ್ರಾಟಜಿಸ್​​. ಆ ಐದು ತಂತ್ರಗಳನ್ನ ಅನುಸರಿಸಿ ಕ್ರಿಕೆಟ್​ ಸಾಮ್ರಾಜ್ಯದ ಚಕ್ರಾಧಿಪತಿಯಾಗಿ ವಿರಾಜಿಸಿದ್ರು. ಆ ಐದು ತಂತ್ರಗಳನ್ನ ಒನ್​​ ಬೈ ಒನ್ ತೋರಿಸ್ತೀವಿ ನೋಡಿ.

Advertisment

ಸ್ಟ್ರಾಟಜಿ ನಂ1: ಆತ್ಮ ವಿಶ್ವಾಸ & ಮಾನಸಿಕವಾಗಿ ಸದೃಢ

ತಂಡದಿಂದ ಡ್ರಾಪ್ ಆಗಿ ಟೀಕೆ ಎದುರಿಸಿದ ಕೊಹ್ಲಿ ಕಮ್​ಬ್ಯಾಕ್ ಮಾಡಲು ಆತ್ಮ ವಿಶ್ವಾಸ ವೃದ್ಧಿಸಿಕೊಂಡ್ರು. ತಮ್ಮ ಕೆಪಾಸಿಟಿ ಏನು ಅನ್ನೋದನ್ನ ತಿಳಿದ್ರು. ಅದರ ಮೇಲೆ ಹೆಚ್ಚು ವರ್ಕ್​ ಮಾಡಿದ್ರು. ಅಲ್ಲದೇ ಮಾನಸಿಕವಾಗಿ ಸಾಕಷ್ಟು ಸದೃಢರಾದ್ರು. ಪರಿಣಾಮವೇ 2018ರ ಇಂಗ್ಲೆಂಡ್ ಪ್ರವಾಸದಲ್ಲಿ ರನ್ ಹೊಳೆ ಹರಿಸಿ ಗ್ರ್ಯಾಂಡ್ ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ರು. 59 ರ ಎವರೇಜ್​​​ನಲ್ಲಿ ಬ್ಯಾಟ್ ಬೀಸಿ, ರನ್​ ಬರಕ್ಕೆ ಫುಲ್ ಸ್ಟಾಪ್ ಹಾಕಿದ್ರು.

publive-image

ಸ್ಟ್ರಾಟಜಿ ನಂ2: ಕಂಡಿಷನ್​ಗೆ ತಕ್ಕಂತೆ ಬ್ಯಾಟಿಂಗ್​​​​​

ಕಿಂಗ್ ಕೊಹ್ಲಿ ಟೆಕ್ನಿಕಲಿ ಸ್ಟ್ರಾಂಗ್ ಬ್ಯಾಟ್ಸ್​​​​ಮನ್​​. ಇಂತಹ ಕೌಶಲ್ಯವುಳ್ಳ ವಿರಾಟ್​ ಕಂಡಿಷನ್ಸ್​ಗೆ ತಕ್ಕಂಗೆ ಬ್ಯಾಟ್ ಬೀಸೋದನ್ನ ಕಲಿದ್ರು. ಸ್ಪಿನ್ನರ್ಸ್​ ಹಾಗೂ ವೇಗಿಗಳಿಗೆ ಅಪ್ರೋಚ್​​ ಬದಲಿಸಿ, ಸಂದರ್ಭಕ್ಕೆ ಬೇಕಾದ ರೀತಿಯಲ್ಲಿ ಹೊಂದಿಕೊಂಡ್ರು. ಆ ಮೂಲಕ ಎದುರಾಳಿ ಮೇಲೆ ಒತ್ತಡ ಹೇರಿದ್ರು. ಆ ಮೂಲಕ ಲೀಲಜಾಲವಾಗಿ ರನ್​​ ಗಳಿಸೋದನ್ನ ಅಭ್ಯಾಸ ಮಾಡಿಕೊಂಡ್ರು.

ಇದನ್ನೂ ಓದಿ: ಪ್ರಾಂಕ್​ ಮಾಡ್ತಾರೆ ಈ ಕೊಹ್ಲಿ! ಯುಟ್ಯೂಬ್​ಗೆ ವಿಡಿಯೋ ಅಪ್​ಲೋಡ್​ ಮಾಡಿ ಹಣ ಮಾಡ್ತಾರೆ!

Advertisment

ಸ್ಟ್ರಾಟಜಿ ನಂ3: ತಪ್ಪುಗಳಿಂದ ಬೇಗನೆ ಪಾಠ

ಈ ತಂತ್ರ ಕೂಡ ಇಂದು ವಿರಾಟ್​ ರನ್​ ವೈಭವಕ್ಕೆ ಕಾರಣವಾಗಿದೆ. ಆನ್​​​ ಫೀಲ್ಡ್​​ನಲ್ಲಿ ಮಾಡ್ತಿದ್ದ ತಪ್ಪುಗಳ ಬಗ್ಗೆ ಎಚ್ಚರಿಕೆ ವಹಿಸಿದ್ರು. ಮುಂದಿನ ಪಂದ್ಯಗಳಲ್ಲಿ ಆ ಮಿಸ್ಟೇಕ್ಸ್​​ ರಿಪೀಟ್ ಆಗದಂತೆ ನೋಡಿಕೊಂಡ್ರು. ಹಿರಿಯ ಕ್ರಿಕೆಟಿಗರ ಸಲಹೆ ಪಡೆದ್ರು. ಇದು ಕಮ್​​ಬ್ಯಾಕ್​​​ಗೆ ನೆರವಾಯ್ತು.

publive-image

​ ಸ್ಟ್ರಾಟಜಿ ನಂ4: ಫಿಟ್ನೆಸ್​ಗೆ ಹೆಚ್ಚು ಆದ್ಯತೆ

ರನ್​ ಬರ ಎದುರಿಸಿದ್ದ ಕೊಹ್ಲಿ ಫಿಜಿಕಲ್​​​​ ಫಿಟ್ನೆಸ್​​ ಕಡೆ ಹೆಚ್ಚು ಗಮನ ಹರಿಸಿದ್ರು. ಬರೀ ಬಾಡಿ ಸೇಪ್​ಗಾಗಿ ಮಾತ್ರ ಫಿಟ್ನೆಸ್​ ಹಿಂದೆ ಬೀಳಲಿಲ್ಲ. ಬದಲಿಗೆ ಫಿಟ್ನೆಸ್​​ನಿಂದ ಕ್ರಿಕೆಟಿಂಗ್ ಸ್ಕಿಲ್ಸ್​​ ವೃದ್ಧಿಸಿಕೊಂಡ್ರು. ಆನ್​​ಫೀಲ್ಡ್​​​​​ ಸುದೀರ್ಘ ದಣಿವರಿಯದೇ ಆಡಲು ಸಹಾಯ ಮಾಡ್ತು. ವಿಕೆಟ್ ಮಧ್ಯೆ​​ ಚುರುಕಾಗಿ ಓಡಲು ಕಲಿತ ಕೊಹ್ಲಿ ಫಾರ್ಮ್​ ಜೊತೆ ಫಿಟ್ನೆಸ್​ ಕಾಂತ್ರಿಯನ್ನೇ ಮಾಡಿದ್ರು.

ಸ್ಟ್ರಾಟಜಿ ನಂ5: ಸಿದ್ಧತೆ ಕಡೆ ಗಮನ

ವಿರಾಟ್ ಇಂದು ಮನಬಂದಂತೆ ಬೌಲರ್​ಗಳನ್ನ ದಂಡಿಸ್ತಾರೆ ಅಂದ್ರೆ ಅದಕ್ಕೆ ಅವರ ಸಿದ್ಧತೆನೇ ಕಾರಣ. ಹೌದು, ಪ್ರತಿ ಪಂದ್ಯಕ್ಕೂ ಮುನ್ನ ಕೊಹ್ಲಿ ನೆಟ್ಸ್​ನಲ್ಲಿ ಗಂಭೀರವಾಗಿ ಪ್ರಾಕ್ಟೀಸ್​ ಮಾಡ್ತಾರೆ. ಗಂಟೆಗಟ್ಟಲೆ ಕ್ರಿಸ್​​​ನಲ್ಲಿ ನಿಂತು ಬೆವರು ಹರಿಸ್ತಾರೆ. ಅದೆಂಥಾ ಸಂದರ್ಭವೇ ಇರಲಿ. ಸಿದ್ಧತೆ ಮಾತ್ರ ನಿಲ್ಲಿಸಲ್ಲ. ವಿರಾಟ್​ ನೆಟ್ಸ್​​ನಲ್ಲಿ ಹೆಚ್ಚು ಬೆವರು ಹರಿಸಿದ ಪರಿಣಾಮವೇ ರನ್​​​ ಘರ್ಜನೆ ಸುಲಭವಾಯ್ತು.

Advertisment

ಇದನ್ನೂ ಓದಿ: ಮುಂಬೈ ರೋಡಲ್ಲಿ.. ಲ್ಯಾಂಬೋರ್ಗಿನಿ ಕಾರಲ್ಲಿ.. ರೋಹಿತ್​​ ಸುತ್ತೋ ಕಾರಿಗಿಂತ ನಂಬರ್​ ಪ್ಲೇಟ್​ ಮೇಲಿದೆ ಎಲ್ಲರ ಕಣ್ಣು!

ಕ್ರಿಕೆಟರ್ಸ್​ ಲೈಫಲ್ಲಿ ಏರಿಳಿತ ಸಹಜ. ಫೇಲ್ಯೂರ್​ ಆದಾಗ ಕುಗ್ಗಬಾರದು. ದಿಟ್ಟವಾಗಿ ಎದುರಿಸಿ, ಹಾರ್ಡ್​ ವರ್ಕ್​ ಮಾಡ್ಬೇಕು. ಆಗ ಎಂತಹ ಸೆಟ್​ಬ್ಯಾಕ್​ನಿಂದ ಬೇಕಾದ್ರೂ ಹೊರಬಂದು ಹ್ಯೂಜ್​ ಸಕ್ಸಸ್ ಕಾಣಬಹುದು ಅನ್ನೋದನ್ನ ಕಿಂಗ್ ಕೊಹ್ಲಿ ತೋರಿಸಿಕೊಟ್ಟಿದ್ದಾರೆ. ಅದಕ್ಕೆ ಅಲ್ಲವೇ ವಿರಾಟ್ ಕೊಹ್ಲಿಯನ್ನ ಮಾಡ್ರನ್ ಕ್ರಿಕೆಟ್​​​​ ದೊರೆ ಅಂತ ಕರೆಯೋದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment