/newsfirstlive-kannada/media/post_attachments/wp-content/uploads/2025/06/CHM-TIGER-2.jpg)
ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಕಳೆಬರ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಡಿಸಿಎಫ್ ಚಕ್ರಪಾಣಿ ಮಾಹಿತಿ ನೀಡಿದ್ದಾರೆ.
ಯಾಕೆ ಅಸಹಜ ಸಾವು..?
ಮಾಧ್ಯಮಗಳ ಜೊತೆ ಮಾತನಾಡಿರುವ ಚಕ್ರಪಾಣಿ.. ನಮ್ಮ ಸಿಬ್ಬಂದಿ ನಿನ್ನೆ ಬೆಳಗ್ಗೆ 10 ಗಂಟೆ ಸುಮಾರಿಗೆ ಗಸ್ತು ತಿರುಗುತ್ತಿದ್ದರು. ಈ ವೇಳೆ ಹುಲಿ ಬಿದ್ದಿರೋದು ಕಂಡು ಬಂದಿದೆ. ಮತ್ತೆ ಪರಿಶೀಲನೆ ಮಾಡಿದಾಗ ಅಲ್ಲೇ ಪಕ್ಕದಲ್ಲೇ ಒಂದು ಹಸುವಿನ ಕಳೆಬರ ನಮಗೆ ಕಂಡಿದೆ. ಎರಡೂ ಅಕ್ಕ-ಪಕ್ಕದಲ್ಲೇ ಕಂಡಿರೋದ್ರಿಂದ ನಮಗೆ ಸಂಶಯ ಬಂದಿದೆ. ಹಾಗಾಗಿ ನಾವು ಅದೊಂದು ಅಸಹಜ ದುರ್ಮರಣ ಅಂತಾ ಶಂಕೆ ವ್ಯಕ್ತಪಡಿಸಿದ್ದೇವೆ.
ಇದನ್ನೂ ಓದಿ: ದೇವರಿಗೂ ಜಲದಿಗ್ಬಂಧನ, ಅಂತ್ಯಕ್ರಿಯೆಗೂ ಬಿಡದ ಮಳೆರಾಯ.. ಮಳೆ ರಗಳೆ..! Photos
ಕೊನೆಗೆ ನಮ್ಮ ಸಿಬ್ಬಂದಿ ಮತ್ತಷ್ಟು ತಪಾಸಣೆ ನಡೆಸಿದ್ದಾರೆ. ಮೊದಲು ಪತ್ತೆಯಾಗಿರೋದು ಹೆಣ್ಣು ಹುಲಿ ಎಂದು ತಿಳಿದುಬಂತು. ಸುಮಾರು 100 ರಿಂದ 200 ಮೀಟರ್ ರೇಡಿಯಸ್ನಲ್ಲಿ ಹುಡುಕಾಡಿದಾಗ ಮತ್ತೆ ನಾಲ್ಕು ಹುಲಿಗಳ ಕಳೆಬರ ಪತ್ತೆಯಾಗಿದೆ. ಅದು ಆ ಹೆಣ್ಣು ಹುಲಿಯ ಮರಿಗಳು ಅನ್ನೋದು ತಿಳಿದುಬಂತು ಎಂದಿದ್ದಾರೆ.
ಇದರಿಂದ ನಾವು ಇದೊಂದು ಅಸಹಜ ಸಾವು ಅಂತಾ ಪರಿಗಣಿಸಿದ್ದೇವೆ. ಮೇಲ್ನೋಟಕ್ಕೆ ಅಲ್ಲಿ ಹಸುವೊಂದು ತೀರಿಹೋಗಿದೆ. ಹೀಗಾಗಿ ನಮಗೆ ಅನುಮಾನ ಬಂದಿದೆ. ಮೃತಪಟ್ಟಿರುವ ಹಸುಗಳ ಮರಣೋತ್ತರ ಪರೀಕ್ಷೆಕಾರ್ಯ ನಡೆಯಬೇಕಿದೆ. ಈ ಪ್ರಕರಣದ ಕುರಿತು ತನಿಖೆಯನ್ನ ನಮ್ಮ ಎಸಿಎಫ್ ನೇತೃತ್ವದಲ್ಲಿ ನಡೆಸಲು ಸೂಚಿಸಿದ್ದೇನೆ.
ವೈಜ್ಞಾನಿಕ ಪ್ರಯೋಗಾಲಯದ ಪರೀಕ್ಷೆಯಲ್ಲಿ ಸತ್ಯ ಗೊತ್ತಾಗಲಿದೆ. ನಂತರ ಮುಂದಿನ ಕ್ರಮವನ್ನು ನಾವು ತೆಗೆದುಕೊಳ್ಳುತ್ತೇವೆ. NTCA ಗೈಡ್ಲೆನ್ಸ್ ಪ್ರಕಾರ ಎಲ್ಲ ಹುಲಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ. ಎಲ್ಲವು ಚಿಕ್ಕ ಮರಿಗಳಾದ ಕಾರಣ ಬೇಟೆಗೆ ತಾಯಿಯನ್ನೇ ಅವಲಂಬಿಸಿದ್ದವು. ಇದು ಟೆರಿಟರಿಗಾಗಿ ನಡೆದಿರುವ ಘಟನೆ ಅಲ್ಲ ಎಂದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಈ ಹಿಂದೆ ಹುಲಿದಾಳಿಯಂತಹ ಯಾವುದೇ ಪ್ರಕರಣಗಳು ಇಲ್ಲಿ ದಾಖಲಾಗಿಲ್ಲ. ಇದೇ ಮೊದಲ ಬಾರಿಗೆ ಘಟನೆ ನಡೆದಿದೆ.
ಇದನ್ನೂ ಓದಿ: 5 ಹುಲಿ ಕಳೆಬರ ಸಿಕ್ಕ ಕೇಸ್ಗೆ ಟ್ವಿಸ್ಟ್.. ಶಂಕಿತ ನಾಲ್ವರ ವಶಕ್ಕೆ ಪಡೆದ ತನಿಖಾಧಿಕಾರಿಗಳು
ಇನ್ನು ಮೃತಪಟ್ಟ ಹಸುವಿನ ಮಾಲೀಕ ಯಾರು ಅನ್ನೋದ್ರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಜಿಲ್ಲಾ ಮಟ್ಟದಲ್ಲಿ ಎಸಿಎಫ್ ನೇತೃತ್ವದಲ್ಲಿ ತನಿಖಾ ತಂಡ ಇರಲಿದೆ. ಪೊಲೀಸ್ ಇಲಾಖೆಯೂ ತನಿಖೆಗೆ ಸಹಕಾರ ನೀಡಲಿದೆ. ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ತನಿಖೆ ನಡೆಸಲಿವೆ. ಬಂಡೀಪುರದಿಂದ ಸ್ನಿಫರ್ಸ್ ಡಾಗ್ಸ್ ಕರೆಸಲಾಗಿದೆ. ಅವು ಸ್ಥಳ ಪರಿಶೀಲನೆ ನಡೆಸಲಿವೆ. ಮೆಟಲ್ ಡಿಟೆಕ್ಟರ್ನಿಂದ ಪರಿಶೀಲನೆ ನಡೆಸಲಾಗುವುದು, ಎಲ್ಲಿಯಾದರು ಗುಂಡು ಬಿದ್ದಿದ್ಯಾ ಅಂತಲೂ ತನಿಖೆ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: 5 ಹುಲಿಗಳ ದುರಂತ ಅಂತ್ಯ ಕೇಸ್ಗೆ ಟ್ವಿಸ್ಟ್; ಪಕ್ಕದಲ್ಲೇ ಬಿದ್ದಿದೆ ಹಸುವಿನ ಕಳೆಬರ ಎಂದ ಅರಣ್ಯಾಧಿಕಾರಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ