/newsfirstlive-kannada/media/post_attachments/wp-content/uploads/2025/06/SMart-TV.jpg)
ಮನೆಗೆ ಹೊಸ ಸ್ಮಾರ್ಟ್ ಟಿವಿ ಖರೀದಿಸಲು ಬಯಸಿದ್ದರೆ, ನಿಮ್ಮ ಬಜೆಟ್ 20,000 ರೂಪಾಯಿ ಆಗಿದ್ದರೆ.. ಈಗ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಆಯ್ಕೆಗಳಿವೆ. ಈ ಟಿವಿಗಳು ಸ್ಪಷ್ಟ ಚಿತ್ರ, ಉತ್ತಮ ಗುಣಮಟ್ಟ ಮತ್ತು ಅದ್ಭುತ ಸೌಂಡ್ ಸಿಸ್ಟಮ್ ಹೊಂದಿವೆ. ಮಾತ್ರವಲ್ಲದೇ ನೆಟ್‌ಫ್ಲಿಕ್ಸ್, ಯೂಟ್ಯೂಬ್ ಮತ್ತು ಪ್ರೈಮ್ ವಿಡಿಯೋದಂಥ OTT ಅಪ್ಲಿಕೇಶನ್‌ಗಳನ್ನೂ ಬಳಸಬಹುದಾಗಿದೆ.
ಟಾಪ್ 5 ಸ್ಮಾರ್ಟ್ ಟಿವಿಗಳು
ಹೈಯರ್ 32 ಇಂಚಿನ HD ರೆಡಿ ಸ್ಮಾರ್ಟ್ ಗೂಗಲ್ ಟಿವಿ (LE32W400G-N)
ಈ ಟಿವಿಯ ಬೆಲೆ 13,490 ರೂಪಾಯಿ. ಇದು ಗೂಗಲ್ ಟಿವಿಯನ್ನು ಸಪೋರ್ಟ್ ಮಾಡುತ್ತದೆ. ನೀವು ನೆಟ್‌ಫ್ಲಿಕ್ಸ್, ಯೂಟ್ಯೂಬ್‌ನಂತಹ ಅಪ್ಲಿಕೇಶನ್‌ಗಳನ್ನು ಸುಲಭವಾಗಿ ಬಳಸಬಹುದು. ಡಾಲ್ಬಿ ಆಡಿಯೋ (dolby audio) ಮತ್ತು MEMC ತಂತ್ರಜ್ಞಾನದಿಂದ ಧ್ವನಿ ಮತ್ತು ವೀಡಿಯೊ ಸ್ಪಷ್ಟತೆ ಅತ್ಯತ್ಭುತವಾಗಿದೆ. ಈ ಟಿವಿ ಸಣ್ಣ ಕೋಣೆ ಅಥವಾ ಮಲಗುವ ಕೋಣೆಗೆ ಸೂಕ್ತ.
ಸ್ಯಾಮ್‌ಸಂಗ್ 32 ಇಂಚಿನ HD ರೆಡಿ ಸ್ಮಾರ್ಟ್ LED ಟಿವಿ (UA32T4380AKXXL)
ಈ ಟಿವಿಗೆ ಕೇವಲ 12,490 ರೂಪಾಯಿ. ಇದು ಟೈಜೆನ್ ಓಎಸ್‌ನಲ್ಲಿ ವರ್ಕ್ ಆಗಲಿದೆ. ಈ ಟಿವಿಯಲ್ಲಿ ಸುಲಭವಾಗಿ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಗುಣಮಟ್ಟದ ಟಿವಿ ಇದಾಗಿದ್ದು, ಎಲ್ಲವೂ ಸ್ಪಷ್ಟವಾಗಿದೆ. ಸಣ್ಣ ಕೋಣೆಗೆ ಇದು ಅತ್ಯುತ್ತಮ ಆಯ್ಕೆ.
Mi Xiaomi 32 ಇಂಚಿನ HD ರೆಡಿ ಗೂಗಲ್ ಸ್ಮಾರ್ಟ್ ಟಿವಿ (L32MA-AIN)
ಇದರ ಬೆಲೆ 11,990 ರೂಪಾಯಿ. Xiaomiಯ ಈ ಸ್ಮಾರ್ಟ್ ಟಿವಿ Google Assistant ನೊಂದಿಗೆ ಲಭ್ಯವಿದೆ. ನೀವು ಧ್ವನಿಯ ಮೂಲಕ ಟಿವಿಯನ್ನು ಕಂಟ್ರೋಲ್ಗೆ ತೆಗೆದುಕೊಳ್ಳಬಹುದು. ಚಿತ್ರದ ಗುಣಮಟ್ಟ ಸ್ಪಷ್ಟ ಮತ್ತು ವರ್ಣಮಯವಾಗಿದೆ.
ಇದನ್ನೂ ಓದಿ: ಬೆಡ್, ಟಾಯ್ಲೆಟ್, ಮಿನಿ ಫ್ರಿಡ್ಜ್.. ಅಮೆರಿಕ B-2 ಯುದ್ಧ ವಿಮಾನದೊಳಗೆ ಏನೇನಿದೆ..?
ತೋಷಿಬಾ 43 ಇಂಚಿನ ಪೂರ್ಣ HD ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (43V35MP)
ನೀವು ದೊಡ್ಡ ಪರದೆಯ ಟಿವಿ ಹುಡುಕುತ್ತಿದ್ದರೆ ತೋಷಿಬಾದ 43 ಇಂಚಿನ ಟಿವಿ ಆಯ್ಕೆ ಒಳ್ಳೆಯದು. ಪೂರ್ಣ HD ಡಿಸ್ಪ್ಲೇ ಪ್ರತಿಯೊಂದು ದೃಶ್ಯವನ್ನು ಅದ್ಭುತ ಮತ್ತು ಸಿನಿಮೀಯವಾಗಿ ಕಾಣುವಂತೆ ಮಾಡುತ್ತದೆ. ಆಂಡ್ರಾಯ್ಡ್ ಟಿವಿಯಾಗಿರುವುದರಿಂದ ಎಲ್ಲಾ ಅಪ್ಲಿಕೇಶನ್‌ಗಳನ್ನು ಸುಲಭವಾಗಿ ಬಳಸಬಹುದು. ಇದರ ಬೆಲೆ 19,999 ರೂಪಾಯಿ ಆಗಿದೆ.
ಏಸರ್ 40 ಇಂಚಿನ HD ಸ್ಮಾರ್ಟ್ ಗೂಗಲ್ ಟಿವಿ (AR40FDIGU2841AT)
ಈ ಏಸರ್ ಟಿವಿ 40 ಇಂಚಿನ ದೊಡ್ಡ ಪರದೆ ಮತ್ತು ಪೂರ್ಣ HD ಗುಣಮಟ್ಟ ಹೊಂದಿದೆ. ಗೂಗಲ್ ಟಿವಿಯಿಂದಾಗಿ OTT ಅಪ್ಲಿಕೇಶನ್ ಬಳಸುವುದು ತುಂಬಾ ಸುಲಭ. ಮನೆಯಲ್ಲಿ ಥಿಯೇಟರ್‌ನಂತಹ ಅನುಭವ ಬಯಸಿದರೆ, ಇದರ ಆಯ್ಕೆ ಒಳ್ಳೆಯದು. 20,000 ರೂಪಾಯಿ ಬಜೆಟ್‌ನಲ್ಲಿ ಒಳ್ಳೆ ಬ್ರ್ಯಾಂಡ್ನ ಟಿವಿ ಪಡೆಯಬಹುದು. ಈ ಟಿವಿಗಳು ಚೆನ್ನಾಗಿ ಕಾಣುವುದಲ್ಲೇ ಸ್ಮಾರ್ಟ್ ಫಿಚರ್ಸ್ ಹೊಂದಿದ್ದು, ನೋಡುವಾಗ ಹೆಚ್ಚು ಎಂಟರ್ಟೈನ್ಮೆಂಟ್ ನೀಡುತ್ತವೆ.
ಇದನ್ನೂ ಓದಿ: ಭಾರತದ ಪರವಾಗಿ ಶುಕ್ಲಾ 7 ಪ್ರಯೋಗ.. ಖುಷಿ ವಿಚಾರ ಅಂದ್ರೆ ಅದರಲ್ಲಿ ಕರ್ನಾಟಕದ್ದೇ 4 ಟೆಸ್ಟ್ಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ