/newsfirstlive-kannada/media/post_attachments/wp-content/uploads/2024/05/WATER-TANK.jpg)
ಬೆಂಗಳೂರು: ಸಂಪ್​ಗೆ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕೆಆರ್​ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪ ನಗರದ ವಿಶಾಲ್ ಮಾರ್ಟ್ ಮುಂಭಾಗ ನಡೆದಿದೆ.
ನೇಪಾಳ ಮೂಲದ ಸುಬೀನ್ ಸಾವನ್ನಪ್ಪಿರುವ ಬಾಲಕ. ನೇಪಾಳ ಮೂಲದ ದಂಪತಿ ಇಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಕೆಲಸದಿಂದ ಬಂದು ಮಗು ಕಾಣದೇ ಇದ್ದಾಗ ತಂದೆ ತಾಯಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸಂಪಿನಲ್ಲಿ ಮಗು ಬಿದ್ದಿರೋದು ಪತ್ತೆಯಾಗಿದೆ. ಕೂಡಲೇ ಕೆಆರ್​ಪುರ ಸರ್ಕಾರಿ ಆಸ್ಪತ್ರೆ ದಾಖಲು ಮಾಡಲಾಗಿದೆ. ಆ ವೇಳೆಗೆ ಮಗು ಸಾವನ್ನಪ್ಪಿರೋದು ಗೊತ್ತಾಗಿದೆ. ಕೆಆರ್​ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us