/newsfirstlive-kannada/media/post_attachments/wp-content/uploads/2024/12/ROHIT_SHARMA-7.jpg)
ರೋಹಿತ್ ಶರ್ಮಾ.. ವಿಶ್ವ ಕ್ರಿಕೆಟ್ನ ಡೇಂಜರಸ್ ಓಪನರ್ಗಳಲ್ಲಿ ಒಬ್ಬರು.. ರೋಹಿತ್ ಕ್ರೀಸ್ನಲ್ಲಿದ್ರೆ ಎದುರಾಳಿ ಬೌಲರ್ಗಳ ಗೇಮ್ ಪ್ಲಾನ್ ಉಲ್ಟಾ ಆಗಿರುತ್ತದೆ. ರೋಹಿತ್, ಫುಲ್ ಸೈಲೆಂಟ್ ಆಗಿದ್ದಾರೆ. ರನ್ಗಳಿಸೋಕೆ ಪರದಾಡ್ತಿದ್ದಾರೆ. ಟೆಸ್ಟ್ ಕ್ರಿಕೆಟ್ಗೂ ಅನ್ಫಿಟ್ ಎನಿಸಿಕೊಂಡಿರೋ ರೋಹಿತ್, ಫ್ಲಾಟ್ ಟ್ರ್ಯಾಕ್ ಬುಲ್ಲಿ (Flat Track Bully) ಅಂತ ಕರೆಸಿಕೊಂಡಿದ್ದಾರೆ.
ಹಿಟ್ಮ್ಯಾನ್ ರೋಹಿತ್ ಶರ್ಮಾರ ಪವರ್ ಫುಲ್ ಬ್ಯಾಟಿಂಗ್ ಪರ್ಫಾಮೆನ್ಸ್ನ ಕಥೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ 12 ಇನ್ನಿಂಗ್ಸ್.. ತವರಿನಲ್ಲಿ ಹತ್ತು..! ಆಸ್ಟ್ರೇಲಿಯಾದಲ್ಲಿ ಎರಡು..! ಈ 12 ಇನ್ನಿಂಗ್ಸ್ಗಳಿಂದ ಹಿಟ್ಮ್ಯಾನ್ ಗಳಿಸಿರುವ ರನ್ ಜಸ್ಟ್ 142. ರೋಹಿತ್ ಬ್ಯಾಟಿಂಗ್
ಇದನ್ನೂ ಓದಿ:10 ಲಕ್ಷ ಬೇಸ್ ಪ್ರೈಸ್.. 1.20 ಕೋಟಿ ರೂ ಕೊಟ್ಟು ಖರೀದಿಸಿದ RCB; ಯಾರು ಈ ಗುಳಿಕೆನ್ನೆ ಹುಡುಗಿ..?
ಸರಾಸರಿ ಕೇವಲ 11.82
ಈ 12 ಇನ್ನಿಂಗ್ಸ್ಗಳಲ್ಲಿ ರೋಹಿತ್, 20ರ ಗಡಿದಾಟಿದ್ದು ಜಸ್ಟ್ ಎರಡೇ ಎರಡು ಬಾರಿ. ಇದು ರೋಹಿತ್ ಬ್ಯಾಟಿಂಗ್ ಬಗ್ಗೆ ಪ್ರಶ್ನೆ ಹುಟ್ಟಿಹಾಕಿದ್ದಷ್ಟೇ ಅಲ್ಲ! ಟೀಮ್ ಇಂಡಿಯಾಗೆ ರೋಹಿತ್ ಬೇಕಿದ್ದಾರಾ ಎಂಬ ಚರ್ಚೆಗೂ ನಾಂದಿಯಾಡಿದೆ. ರೋಹಿತ್, ಟೆಸ್ಟ್ ಕ್ರಿಕೆಟ್ಗೆ ಫಿಟ್ ಆಗ್ತಾರಾ ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿದೆ.
ವಿದೇಶದಲ್ಲಿ ಜೀರೋ
ರೋಹಿತ್ ಡೇಂಜರಸ್ ಬ್ಯಾಟರ್ ಅನ್ನೋದ್ರಲ್ಲಿ ನೋ ಡೌಟ್. ರೋಹಿತ್ ಪೌರುಷ ಬ್ಯಾಟಿಂಗ್ ಫ್ರೆಂಡ್ಲಿ ಫ್ಲಾಟ್ ಟ್ರ್ಯಾಕ್ ಪಿಚ್ಗಳಿಗೆ ಮಾತ್ರವೇ ಸಿಮೀತವಾಗಿದೆ. ಇದು ಜಸ್ಟ್ ಮೂರು ಟೆಸ್ಟ್ ಸರಣಿಗಳ ಪ್ರದರ್ಶನ ನೋಡಿ ಹೇಳ್ತಿರೋ ಮಾತಲ್ಲ. ರೋಹಿತ್ ಶರ್ಮಾರ ಅಂಕಿ-ಅಂಶಗಳೇ ನುಡಿಯುತ್ತಿರುವ ಸಾಕ್ಷಿ.
ಇದನ್ನೂ ಓದಿ:iPhone 17 Air ಬೆಲೆ ಈಗಲೇ ಲೀಕ್.. 2025ಕ್ಕೆ ಐಫೋನ್ 17ನಲ್ಲಿ 4 ಸಿರೀಸ್ಗಳು..!
ವಿದೇಶದಲ್ಲಿ ರೋಹಿತ್..
ಭಾರತದಲ್ಲಿ 55 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ರೋಹಿತ್ 51.73ರ ಬ್ಯಾಟಿಂಗ್ ಌವರೇಜ್ನಲ್ಲಿ 2535 ರನ್ ಗಳಿಸಿದ್ದಾರೆ. 10 ಶತಕ, 8 ಅರ್ಧಶತಕ ದಾಖಲಿಸಿರುವ ರೋಹಿತ್, ವಿದೇಶಗಳಲ್ಲಿ ರನ್ ಗಳಿಸಲು ಪರದಾಡಿದ್ದಾರೆ. 31 ಟೆಸ್ಟ್ ಪಂದ್ಯಗಳ 58 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ರೋಹಿತ್, 32.29ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. 2 ಶತಕ, 10 ಅರ್ಧಶತಕ ಮಾತ್ರ ದಾಖಲಿಸಿದ್ದಾರೆ.
ವಿದೇಶಗಳಲ್ಲಿ ರೋಹಿತ್ ಶರ್ಮಾರ ಬ್ಯಾಟಿಂಗ್ ಕಳಪೆಯಾಟವನ್ನೇ ಪ್ರತಿಬಿಂಬಿಸುತ್ತಿದೆ. ಸೌತ್ ಆಫ್ರಿಕಾ ತಂಡದ ಮಾಜಿ ವೇಗಿ ಡ್ಯಾರೆಲ್ ಕಲೀನನ್ ಕೂಡ ಇದೇ ವಿಚಾರವನ್ನೇ ರಿವೀಲ್ ಮಾಡಿದ್ದಾರೆ.
ರೋಹಿತ್ ಜೀರೋ..!
ರೋಹಿತ್ ಶರ್ಮಾ ಫ್ಲಾಟ್ ಟ್ರ್ಯಾಕ್ಗಳಲ್ಲಿ ಮಾತ್ರವೇ ಆಡಬಲ್ಲರು. ಅದಕ್ಕಾಗಿಯೇ ಅವರು ಸ್ವದೇಶದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ವಿದೇಶಿ ನೆಲದಲ್ಲಿ ರೋಹಿತ್ ಪ್ರದರ್ಶನ ಅಷ್ಟಕ್ಕಷ್ಟೇ. ಬೌನ್ಸರ್ಗಳನ್ನು ಎದುರಿಸಲು ಸಾಕಷ್ಟು ಪರದಾಟಿದ್ದಾರೆ ಎಂದು ಡ್ಯಾರೆಲ್ ಕಲೀನನ್, ಮಾಜಿ ಆಟಗಾರ
ಟೆಸ್ಟ್ ತಂಡಕ್ಕೂ ಬೇಕಾಗಿಲ್ಲ ರೋಹಿತ್
ಟೀಮ್ ಇಂಡಿಯಾದಲ್ಲಿ ಫಿಟ್ನೆಸ್ ಟ್ರೆಂಡ್ ಶುರುವಾದರೂ ನಾಯಕ ರೋಹಿತ್ ಫಿಟ್ನೆಸ್ ಬಗ್ಗೆ ಅನುಮಾನ ಕಾಡುತ್ತಲೇ ಇರುತ್ತದೆ. ರೋಹಿತ್ ಶರ್ಮಾರ ಫಿಟ್ನೆಸ್ ಬಗ್ಗೆಯೂ ಚರ್ಚೆ ನಡೀತಾನೆ ಇರುತ್ತೆ. ಆದ್ರೀಗ ಮತ್ತದೆ ವಿಚಾರವಾಗಿ ಆಫ್ರಿಕಾದ ಮಾಜಿ ವೇಗಿ ಡ್ಯಾರೆಲ್ ಕಲೀನನ್ ಮಾತನಾಡಿದ್ದಾರೆ.
ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಮತ್ತೆ ಜನಾಂಗೀಯ ನಿಂದನೆ! ಬುಮ್ರಾಗೆ ಕ್ಷಮೆ ಕೇಳಿದ ಇಶಾ ಗುಹಾ ಯಾರು..?
ಫಿಟ್ ಇಲ್ಲ ರೋಹಿತ್..!
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನ ನೋಡಿ. ಇವರಿಬ್ಬರ ದೈಹಿಕ ಸ್ಥಿತಿಯಲ್ಲಿನ ವ್ಯತ್ಯಾಸವನ್ನು ಒಮ್ಮೆ ಗಮನಿಸಿ. ಕೊಹ್ಲಿಯ ಫಿಟ್ನೆಸ್ಗೆ ಹೋಲಿಕೆ ಮಾಡಿದರೆ ರೋಹಿತ್ ಹಿಂದುಳಿದಿದ್ದಾರೆ. ಅಧಿಕ ತೂಕ ಹೊಂದಿದ್ದಾರೆ. ನಾಲ್ಕೈದು ಟೆಸ್ಟ್ ಪಂದ್ಯಗಳ ಸರಣಿ ಆಡುವಷ್ಟು ಉತ್ತಮವಾಗಿ ರೋಹಿತ್ ಶರ್ಮಾ ಕಾಣುತ್ತಿಲ್ಲ. ಇದು ರೋಹಿತ್ಗೆ ಅಲ್ಲ. ಟೀಮ್ ಇಂಡಿಯಾಗೂ ಉತ್ತಮವಲ್ಲ -ಡ್ಯಾರೆಲ್ ಕಲೀನನ್, ಮಾಜಿ ಆಟಗಾರ
ಟೆಸ್ಟ್ ಕ್ರಿಕೆಟ್ಗೆ ಅನ್ ಫಿಟ್..?
ರೋಹಿತ್ ಶರ್ಮಾ ವಯಸ್ಸು ಈಗಾಗಲೇ 37ರ ಗಡಿ ದಾಟಿದೆ. 5 ದಿನಗಳ ಕಾಲ ಬ್ಯಾಟಿಂಗ್, ಫೀಲ್ಡಿಂಗ್ ಮಾಡುವ ಫಿಟ್ನೆಸ್ ಕೂಡ ರೋಹಿತ್ಗೆ ಇಲ್ಲ. ಇದಕ್ಕೆ ಸಾಕ್ಷಿ ಇತ್ತೀಚಿನ ಟೆಸ್ಟ್ ಸರಣಿಗಳಲ್ಲಿ ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡಲು ನಡೆಸಿದ ಪರದಾಟವೇ ಆಗಿದೆ. ಇದೇ ಫಿಟ್ನೆಸ್ ಬ್ಯಾಟಿಂಗ್ ಮೇಲೂ ಎಫೆಕ್ಟ್ ಕೂಡ ಆಗ್ತಿದೆ.
ಇದನ್ನೂ ಓದಿ:WPL ಮಿನಿ ಹರಾಜು.. ನಾಲ್ವರಿಗೆ ಕೋಟಿ ಕೋಟಿ ಜಾಕ್ಪಾಟ್.. ಅತ್ಯಂತ ದುಬಾರಿ ಆಟಗಾರ್ತಿ ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ