/newsfirstlive-kannada/media/post_attachments/wp-content/uploads/2024/10/FlipKart-₹1-Auto.jpg)
ಇ- ಕಾಮರ್ಸ್ ದೈತ್ಯ ಕಂಪನಿ ಫ್ಲಿಪ್ಕಾರ್ಟ್ ತನ್ನ ಬಿಗ್ ಬಿಲಿಯನ್ ಡೇ ಸಮೀಪದಲ್ಲಿಯೇ ಬೆಂಗಳೂರಿಗರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಯುಪಿಐ ಪೇಮೆಂಟ್ ಪ್ರಮೋಟ್ ಮಾಡುವ ಸಲುವಾಗಿ ಬೆಂಗಳೂರಿನ ಆಟೋಗಳೊಂದಿಗೆ ಕೈ ಜೋಡಿಸಿರುವ ಫ್ಲಿಪ್ಕಾರ್ಟ್, 1 ರೂಪಾಯಿಗೆ ಆಟೋ ಲಭ್ಯವಾಗುವಂತೆ ನೋಡಿಕೊಳ್ಳಲು ಸಜ್ಜಾಗಿದೆ. ಇದು ಐಟಿ ಹಬ್ ಬೆಂಗಳೂರಿನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ.
ಇದನ್ನೂ ಓದಿ:ದರ್ಶನ್ ಅಂಡ್ ಗ್ಯಾಂಗ್ ಕೇಸ್.. ಜೈಲಿನಿಂದ ಮೂವರು ಆರೋಪಿಗಳು ರಿಲೀಸ್..!
ಈ ಹಿನ್ನೆಲೆಯಲ್ಲಿ ಫ್ಲಿಪ್ಕಾರ್ಟ್ ನಗರದ ಹಲವು ಕಡೆ ಸ್ಟಾಲ್ಗಳನ್ನು ಓಪನ್ ಮಾಡಿ, ಪೀಕ್ ಅವರ್ನಲ್ಲಿ ಬೆಂಗಳೂರಿನ ಆಟೋ ಪ್ರಯಾಣಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಫ್ಲಿಪ್ಕಾರ್ಟ್ ನೀಡಿರುವ ಹೊಸ ಆಫರ್ನಲ್ಲಿ ಯಾವುದೇ ಸಮಯದಲ್ಲಿ ನೀವು ಆಟೋ ಏರಿಕೊಂಡು ಬೆಂಗಳೂರಿನ ಯಾವ ಭಾಗಕ್ಕಾದರೂ ಹೋಗಬಹುದು ಎಂದು ಇದು ಪ್ರಮೋಟ್ ಮಾಡುತ್ತಿರುವ ವಿಡಿಯೋದಲ್ಲಿ ಹೇಳಲಾಗಿದೆ.
ಇದನ್ನೂ ಓದಿ:BPL ಕಾರ್ಡ್‌ದಾರರಿಗೆ ಸರ್ಕಾರ ಬಿಗ್ ಶಾಕ್; ಕಾರು, ಬೈಕ್ ಇದ್ರೆ ರೇಷನ್ ಕಾರ್ಡ್ ರದ್ದು!
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಂಸ್ಥೆ ಫ್ಲಿಪ್ಕಾರ್ಟ್ ಯುಪಿಐ ಒಂದು ಅದ್ಭುತ ಕ್ಯಾಂಪೇನ್ ಶುರು ಮಾಡಿದೆ.ಆಟೋ ಪ್ರಯಾಣಕ್ಕೆ ಕೇವಲ ಒಂದು ರೂಪಾಯಿಯನ್ನು ನೀಡುವ ಕೊಡುಗೆಯನ್ನು ನೀಡುವ ಮೂಲಕ ಬಿಗ್ ಬಿಲಿಯನ್ ಡೇಗೂ ಮುನ್ನವೇ ಬೆಂಗಳೂರಿಗರಿಗೆ ಅದ್ಭುತ ಸಡಗರ ಉಂಟಾಗುವಂತೆ ಮಾಡಿದೆ ಎಂದು ಹೇಳಿಕೊಂಡಿದೆ.
ನಮ್ಮ ಕ್ಯಾಂಪೇನ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ರೂಪಾಯಿಯಲ್ಲಿ ಸದ್ಯದ ಕಾಲಘಟ್ಟದಲ್ಲಿ ಏನೂ ಬರುವುದಿಲ್ಲ, ನಮ್ಮ ಕ್ಯಾಂಪೇನ್ ಸುಲಭ ಹಾಗೂ ಕಡಿಮೆ ವೆಚ್ಚದ ಒಂದು ಪ್ರಯಾಣಕ್ಕೆ ನಾಂದಿ ಹಾಡಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಇನ್ನು ಫ್ಲಿಪ್ಕಾರ್ಟ್ನ ಈ ಆಫರ್ ಕೇಳಿರುವ ಬೆಂಗಳೂರಿಗರು ಆಟೋಗಾಗಿ ಸಾಲು ಹಚ್ಚುತ್ತಿದ್ದಾರೆ. ಹೀಗೆ ಆಟೋ ಬಳಸಿದವರಲ್ಲಿ ಹಲವರು. ಒಂದು ರೂಪಾಯಿಯಲ್ಲಿ ಬೆಂಗಳೂರಿನಲ್ಲಿ ಆಟೋ ಪ್ರಯಾಣ ಮಾಡುವ ಅಸಾಧ್ಯವಾದ ಮಾತು. ಆದ್ರೆ ಫ್ಲಿಪ್ಕಾರ್ಟ್ ಇದನ್ನು ಸಾಧ್ಯ ಮಾಡಿ ತೋರಿಸಿದೆ ಎಂದಿದ್ದಾರೆ. ಸದ್ಯ ಈ ಒಂದು ಆಫರ್ ಬೆಂಗಳೂರಿಗೆ ಮಾತ್ರ ಸಿಮೀತವಾಗಿದೆ. ಜನರು ಬೇರೆ ಸಿಟಿಗಳಲ್ಲೂ ಇದೇ ಬಗೆಯ ಆಫರ್ನ್ನು ವಿಸ್ತರಿಸಿ ಎಂದು ಫ್ಲಿಪ್ಕಾರ್ಟ್ಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ