Advertisment

ಉತ್ತರ ಕನ್ನಡ ಜಿಲ್ಲೆಗೆ ಮಳೆ ಕಂಟಕ.. 18 ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರ ಆರೈಕೆ.. ಭಾರೀ ಪ್ರವಾಹದ ಭೀತಿ..

author-image
Ganesh
Updated On
ಉತ್ತರ ಕನ್ನಡ ಜಿಲ್ಲೆಗೆ ಮಳೆ ಕಂಟಕ.. 18 ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರ ಆರೈಕೆ.. ಭಾರೀ ಪ್ರವಾಹದ ಭೀತಿ..
Advertisment
  • ಉಕ್ಕಿ ಹರಿಯುತ್ತಿವೆ ಗಂಗಾವಳಿ, ಅಘನಾಶಿನಿ, ಕಾಳಿ, ಶರಾವತಿ ನದಿಗಳು
  • ಹಲವು ಗ್ರಾಮಗಳು ಜಲಾವೃತ, ಜನರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ
  • ಕದ್ರಾ ಜಲಾಶಯದಿಂದ ಕಾಳಿ ನದಿಗೆ ನೀರು ಬಿಡುಗಡೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮತ್ತೆ ಮುಂದುವರಿದಿದೆ. ಪರಿಣಾಮ ನಿರಂತರ ಗುಡ್ಡ ಕುಸಿಯುವ ಆತಂಕದ ಜೊತೆಗೆ ನದಿಗಳು ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪರಿಣಾಮ ಭಾರೀ ಪ್ರವಾಹದ ಆತಂಕ ಎದುರಾಗಿದೆ.

Advertisment

ಗಂಗಾವಳಿ, ಅಘನಾಶಿನಿ, ಕಾಳಿ, ಶರಾವತಿ ನದಿ ಉಕ್ಕಿ ಹರಿಯುತ್ತಿವೆ. ಜೊತೆಗೆ ಮಾಣಿ ಹಾಗೂ ಮುಕ್ತೆ ಹೊಳೆಗಳಲ್ಲೂ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಲವು ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಸದ್ಯ ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.

ಇದನ್ನೂ ಓದಿ:ಎಲ್ಲೆಲ್ಲೂ ಮಳೆಯ ಆರ್ಭಟ.. ಶಾಲಾ-ಕಾಲೇಜುಗಳಿಗೆ ಇವತ್ತೂ ರಜೆ.. ಮತ್ತೆ ಎಲ್ಲೆಲ್ಲಿ ಭಾರೀ ಅನಾಹುತ ಆಗಿದೆ..?

publive-image

ಜಿಲ್ಲೆಯಲ್ಲಿ ಒಟ್ಟು 18 ಕಡೆಯಲ್ಲಿ ಕಾಳಜಿ ಕೇಂದ್ರವನ್ನು ಜಿಲ್ಲಾಡಳಿತ ತೆರೆದಿದೆ. ಕಾರವಾರದಲ್ಲಿ 6, ಅಂಕೋಲಾದಲ್ಲಿ 4, ಹೊನ್ನಾವರದಲ್ಲಿ 8 ಸೇರಿ ಒಟ್ಟು 18 ಕಾಳಜಿ ಕೇಂದ್ರ ತೆರೆಯಲಾಗಿದೆ. ಇವುಗಳಲ್ಲಿ 2055 ಮಂದಿಗೆ ಆಶ್ರಯ ನೀಡಲಾಗಿದೆ.

Advertisment

ಮತ್ತೊಂದು ಕಡೆ ಕದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ 61ಸಾವಿರ ಕ್ಯುಸೆಕ್ ನೀರನ್ನು ಕಾಳಿ‌ ನದಿ ಬಿಡಲಾಗಿದೆ. ಕಾಳಿ ನದಿ ತಟದ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಎದುರಾಗಿದೆ.

ಇದನ್ನೂ ಓದಿ:ಬಯಲಾಯ್ತು ಗಂಗೂಲಿ ಅಸಲಿ ಮುಖವಾಡ.. ಕ್ರೆಡಿಟ್ ಆಸೆಗಾಗಿ ಸತ್ಯ ಒಪ್ಪಿಕೊಂಡ ದಾದಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment