Advertisment

ಮೆಟ್ಟೂರು‌ ಡ್ಯಾಂನಿಂದ ಕಾವೇರಿಗೆ ನೀರು.. ಕೃಷ್ಣೆಯಲ್ಲಿ ಕೊಚ್ಚಿ ಹೋಗ್ತಿದ್ದವನ ರಕ್ಷಣೆ; ತುಂಗಭದ್ರೆಯಿಂದ ಕಂಪ್ಲಿಗೆ ಕಂಟಕ..!

author-image
Bheemappa
Updated On
ಮೆಟ್ಟೂರು‌ ಡ್ಯಾಂನಿಂದ ಕಾವೇರಿಗೆ ನೀರು.. ಕೃಷ್ಣೆಯಲ್ಲಿ ಕೊಚ್ಚಿ ಹೋಗ್ತಿದ್ದವನ ರಕ್ಷಣೆ; ತುಂಗಭದ್ರೆಯಿಂದ ಕಂಪ್ಲಿಗೆ ಕಂಟಕ..!
Advertisment
  • ವರದೆಯ ದಡದಲ್ಲಿದ್ದ ನೂರಾರು ಎಕರೆ ಜಮೀನುಗಳು ಜಲಾವೃತ
  • ಮೆಟ್ಟೂರು‌ ಡ್ಯಾಂನಿಂದ ಎಷ್ಟು ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದಾರೆ?
  • ಉಕ್ಕಿ ಹರಿಯುತ್ತಿರೋ ನದಿಯಲ್ಲಿ ಮೀನು ಹಿಡಿಯುತ್ತಿರೋ ಜನರು

ಮಳೆ.. ಜನರನ್ನ ಮನೆಯಿಂದ ಹೊರಗೆ ಕಾಲಿಡದಂತೆ ಮಾಡಿದೆ. ಮನೆಯಲ್ಲಿ ಇದ್ದವರನ್ನ ನಡುಗುವಂತೆ ಮಾಡ್ತಿದೆ. ಸ್ವಲ್ಪ ಯಾಮಾರಿದ್ರು ಜಲ ದಿಗ್ಭಂದನ ಫಿಕ್ಸ್. ರಾಜ್ಯದಲ್ಲಿ ಎಲ್ಲೆಲ್ಲಿ ಮಳೆಯ ಅವಾಂತರ ಹೇಗಿದೆ?.

Advertisment

ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಘಟಪ್ರಭಾ ನದಿ

ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬಾಗಲಕೋಟೆ ಜಿಲ್ಲೆಯ ಢವಳೇಶ್ವರ ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಬೆಳಗಾವಿಯ ಹಿಡಕಲ್ ಜಲಾಶಯದಿಂದ 80 ಸಾವಿರ‌ ಕ್ಯೂಸೆಕ್ ನೀರು ಹರಿ ಬಿಟ್ಟ ಪರಿಣಾಮ ಪ್ರವಾಹದ ಭೀತಿ ಎದುರಾಗಿದೆ. ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಸ್ಥಳೀಯ ಆಡಳಿತ ಢವಳೇಶ್ವರ ಬ್ಯಾರೇಜ್ ಮೇಲೆ ಸಂಚಾರ ನಿಷೇಧಿಸಿದೆ. ನದಿಯ ಅಬ್ಬರದಿಂದ ನದಿ ಪಾತ್ರದ ಜಮೀನುಗಳಿಗೂ ನೀರು‌‌ ನುಗ್ಗಿದ್ದು ಕಬ್ಬು ಬೆಳೆ ಸೇರಿ ಇತರೇ ಬೆಳೆಗಳಿಗೆ ಹಾನಿ ಸಂಭವಿಸಿದೆ.

ಇದನ್ನೂ ಓದಿ:ಒನ್​ ನೇಷನ್.. ಒನ್ ರೇಟ್.. ಇನ್ಮುಂದೆ ಎಲ್ಲಾ ‘ಚಿನ್ನ’ಪ್ರಿಯರಿಗೂ ಸಮಾನ ಬೆಲೆ..!

publive-image

ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ

ತುಂಗಭದ್ರಾ ನದಿಗೆ ಅಪಾರ ಪ್ರಮಾಣ ನೀರು ಬಿಡುಗಡೆ ಹಿನ್ನೆಲೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣಕ್ಕೆ ಪ್ರವಾಹದ ಆತಂಕ ಎದುರಾಗಿದೆ. ಕೋಟೆ ಆಂಜನೇಯ ದೇಗುಲ ಜಲಾವೃತಗೊಂಡಿದ್ದು, ಹರಿಯುವ ನೀರಿನಲ್ಲಿ ಜನರ ಹುಚ್ಚಾಟವಾಡ್ತಿದ್ದಾರೆ. ವಿಷ ಜಂತು, ಮೊಸಳೆಗಳ ಕಾಟ ನಡೆಯುವೆ ನೀರಿನಲ್ಲಿ ಶಾಲಾ ಮಕ್ಕಳ ಓಡಾಟ ಮಾಡ್ತಾ ನೀರಿಗಿಳಿಯುತ್ತಿದ್ದಾರೆ. ಕೆಲ ಯುವಕರು ನದಿ ಮಧ್ಯೆ ಇರೋ ಗಿಡದಲ್ಲಿ ಕುಳಿತಿದ್ರೆ.. ಇನ್ನೂ ಕೆಲವರು ತೆಪ್ಪ ಹಾಕಿ ಮೀನು ಹಿಡಿಯುವ ಹುಚ್ಚು‌ ಸಾಹಸ ಮಾಡ್ತಾ ಅಪಾಯದ ಹಂತದಲ್ಲೂ ಬೇಜವಾಬ್ದಾರಿ ಮೆರೆಯುತ್ತಿದ್ದಾರೆ.

Advertisment

ವರದಾ ನದಿ ರಭಸಕ್ಕೆ ಶಿವನ ದೇಗುಲ ಸಂಪೂರ್ಣ ಮುಳುಗಡೆ

ವರದಾ ನದಿ ರಭಸಕ್ಕೆ ಹಾವೇರಿ ತಾಲೂಕಿನ ದೇವಗಿರಿಯ ಬಳಿ ಇರುವ ಶಿವನ ದೇವಸ್ಥಾನ ಸಂಪೂರ್ಣ ಮುಳುಗಡೆಯಾದೆ. ವರದೆಯ ದಡದಲ್ಲಿದ್ದ ನೂರಾರು ಎಕರೆ ಜಮೀನುಗಳು ಕೂಡ ಜಲಾವೃತವಾಗಿದೆ. ಸೋಯಾಬೀನ್, ಜೋಳ, ಅಡಿಕೆ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿದೆ. ಸೂಕ್ತ ಪರಿಹಾರ ಘೋಷಣೆ ಮಾಡುವಂತೆ ರೈತರ ಆಗ್ರಹ ಮಾಡ್ತಿದ್ದಾರೆ.

ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ!

ಕೃಷ್ಣ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಯಮನಪ್ಪ ಹಡಪದಯನ್ನ ತೆಪ್ಪದ ಸಹಾಯದಿಂದ ಮೀನುಗಾರರು ರಕ್ಷಿಸಿದ್ದಾರೆ. ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ್ ಸ್ವತಃ ಮುಂದೆ ನಿಂತು ರಕ್ಷಣಾ ಕಾರ್ಯ ಮಾಡಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಂದೊಡ್ಡಿ ಬಳಿಯ ಕೃಷ್ಣ ನದಿಯಲ್ಲಿ ಯಮನಪ್ಪ ಕೊಚ್ಚಿ ಹೋದ ಘಟನೆ ನಡೆದಿದೆ. ದ್ರಾಕ್ಷಿ ತೋಟಕ್ಕೆ ತೆರಳಿದ್ದ ಯಮನಪ್ಪ, ಕಾಲು ಜಾರಿ ಕೃಷ್ಣ ನದಿಯಲ್ಲಿ ಬಿದ್ದಿದ್ದಾನೆ. ಆಗ ನದಿಯಲ್ಲಿದ್ದ ಗೀಡವನ್ನು ಹಿಡಿದುಕೊಂಡು ನಿಂತಿದ್ದ ಯಮನಪ್ಪನನ್ನ ಕಂಡ ಸ್ಥಳೀಯರು ತಹಶೀಲ್ದಾರ್​​ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು, ಶಾಸಕರು ಧಾವಿಸಿ ರಕ್ಷಣೆ ಕಾರ್ಯ ಆರಂಭಿಸಿದ್ದಾರೆ. ಮೀನುಗಾರರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಕೇಳಿ ಬಂದ ಅಪಸ್ವರ.. ತಂಡದ ನಾಯಕನ ಸ್ಥಾನಕ್ಕಾಗಿ ಬೂಮ್ರಾ ಓಪನ್ ಚಾಲೆಂಜ್!

Advertisment

publive-image

ಮೆಟ್ಟೂರು ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ

ಕೆಆರ್​ಎಸ್​ನಿಂದ ತಮಿಳುನಾಡಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸಲಾಗ್ತಿದೆ. ಮೆಟ್ಟೂರು ಡ್ಯಾಂ ತುಂಬಲು ಇನ್ನೇನು ಕೆಲವೇ ಅಡಿಗಳು ಬಾಕಿ ಉಳಿದಿದೆ. ತಮಿಳುನಾಡಿನ ಸರ್ಕಾರ ಮೆಟ್ಟೂರು‌ ಡ್ಯಾಂನಿಂದ ಗೇಟ್ ತೆರೆದು ಕಾವೇರಿ ನದಿಗೆ ನೀರು ಬಿಟ್ಟಿದ್ದಾರೆ. ಕಾವೇರಿ ನದಿಗೆ ಸುಮಾರು 5 ಸಾವಿರ ‌ಕ್ಯೂಸೆಕ್ ನೀರು ಹರಿಬಿಡಲಾಗ್ತಿದೆ. ರಾಜ್ಯದಲ್ಲಿ ಕಳೆದ ವರ್ಷ ಈ ವೇಳೆಗೆ ಬರಗಾಲ ಎದುರಾಗಿತ್ತು.. ಈ ಬಾರಿ ಉತ್ತಮ ಮಳೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment