newsfirstkannada.com

ಭಾರೀ ಮಳೆಗೆ ರಣಭೀಕರ ಪ್ರವಾಹ, 155 ಮಂದಿ ಸಾವು; 2 ಲಕ್ಷ ಜನ ಅತಂತ್ರ

Share :

Published April 27, 2024 at 7:13am

    ಈ ಹಿಂದೆ ಪ್ರವಾಹ ಸಂಭವಿಸಿ 6000 ಮಂದಿ ಪ್ರಾಣ ಬಿಟ್ಟಿದ್ದರು

    ಏಪ್ರಿಲ್, ಮೇ ತಿಂಗಳಲ್ಲಿಯೇ ಇಲ್ಲಿ ಮಳೆಗಾಲ, ಭಾರೀ ತೊಂದರೆ

    236 ಮಂದಿಗೆ ಗಾಯವಾಗಿದ್ದು, ಸಾವು ಬದುಕಿನ ಹೋರಾಟ

ಪೂರ್ವ ಆಫ್ರಿಕಾದ ತಾಂಜೇನಿಯಾ ದೇಶ ವರುಣಾರ್ಭಟದಿಂದ ಅಕ್ಷರಶಃ ತತ್ತರಿಸಿ ಹೋಗಿದೆ. ಕಳೆದ ಎರಡು ವಾರಗಳಿಂದ ಸುರಿಯುತ್ತಿರೋ ರಕ್ಕಸ ರೂಪದ ಮಳೆಗೆ ಬರೋಬ್ಬರಿ 155 ಮಂದಿ ಸಾವನ್ನಪ್ಪಿದ್ದಾರೆ.

ನೀರಿನ ಭೊರ್ಗರತೆಕ್ಕೆ ಕಾರುಗಳು ಕೊಚ್ಚಿ ಹೋಗುತ್ತಿವೆ. ಭಾರೀ ಮಳೆಯಿಂದ ತಾಂಜೇನಿಯಾದಲ್ಲಿರುವ 26 ಪ್ರದೇಶಗಳ ಪೈಕಿ 18 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಏಪ್ರಿಲ್​​ ಮತ್ತು ಮೇ ತಿಂಗಳಲ್ಲಿ ತಾಂಜೇನಿಯಾದಲ್ಲಿ ಮಳೆಗಾಲ ಪ್ರಾರಂಭವಾಗುತ್ತದೆ. ಈ ಬಾರಿ ಸಾಮಾನ್ಯಕ್ಕಿಂತ ಅತಿ ಹೆಚ್ಚು ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಇದನ್ನೂ ಓದಿ:ಮದುವೆ ಮನೆಯಲ್ಲಿ ದುರಂತ.. ಒಂದೇ ಕುಟುಂಬದ 6 ಜನರು ದಾರುಣ ಸಾವು

ಮಳೆ ಸೃಷ್ಟಿಸಿರೋ ಅವಾಂತರಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಪರಿಣಾಮ ಎದುರಿಸುತ್ತಿದ್ದಾರೆ. ಸುಮಾರು 51 ಸಾವಿರ ಕುಟುಂಬಗಳು ಮನೆ ಕಳೆದುಕೊಂಡಿದ್ದಾರೆ. ರಣ ಭೀಕರ ಪ್ರವಾಹದಿಂದ 236 ಮಂದಿ ಗಾಯಗೊಂಡಿದ್ದಾರೆ. ಕಳೆದ ವರ್ಷ ನಡೆದ ಪ್ರವಾಹದಲ್ಲಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈಸ್ಟ್ ಆಫ್ರಿಕಾದಲ್ಲಿ 1997, 1998ರಲ್ಲಿ ಭಾರೀ ಪ್ರವಾಹ ಸಂಭವಿಸಿತ್ತು. ಈ ವೇಳೆ ಐದು ದೇಶಗಳಿಗೆ ಭಾರೀ ಹಾನಿಯಾಗಿತ್ತು. ವರದಿಗಳ ಪ್ರಕಾರ ಸುಮಾರು 6000 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಇದನ್ನೂ ಓದಿ:ಉದ್ಯಮಿ ದೀಪಕ್ ಚೌವ್ಹಾಣ್ ಜೊತೆ ಸಪ್ತಪದಿ ತುಳಿದ ಮಾಜಿ ಬಿಗ್​ಬಾಸ್​ ಸ್ಟಾರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರೀ ಮಳೆಗೆ ರಣಭೀಕರ ಪ್ರವಾಹ, 155 ಮಂದಿ ಸಾವು; 2 ಲಕ್ಷ ಜನ ಅತಂತ್ರ

https://newsfirstlive.com/wp-content/uploads/2024/04/tanzania.jpg

Load More