/newsfirstlive-kannada/media/post_attachments/wp-content/uploads/2024/11/Winter-Grains.jpg)
ಚಳಿಗಾಲ ನಮ್ಮನ್ನು ನಡುಗಿಸಲು ಆರಂಭಿಸಿದೆ. ದೇಹ ಹಲವು ಪೋಷಕಾಂಶಗಳು ನಮ್ಮಿಂದ ಬಯಸಲು ಶುರು ಮಾಡಿದೆ. ಇದೇ ಸಮಯದಲ್ಲಿ ದೇಹವನ್ನು ಹೆಚ್ಚು ರೋಗ ನಿರೋಧಕವಾಗಿಡುವುದು ಅವಶ್ಯಕ. ಇದರಿಂದ ಕರಳುನಿ ಆರೋಗ್ಯವೂ ಸ್ಥಿರವಾಗಿದ್ದು ನಾವು ಚಳಿಗಾಲವನ್ನು ಯಾವುದೇ ಆರೋಗ್ಯ ಸಮಸ್ಯೆಯಿಲ್ಲದೇ ಹೊರಗಟ್ಟಬಹುದು. ನಮಗೆ ಯಾವ ಸೀಸನ್ನಲ್ಲಿ ಯಾವ ಹಣ್ಣು ತರಕಾರಿ ಉಪಯುಕ್ತ ಎಂಬುದು ಗೊತ್ತು. ಆದ್ರೆ ಯಾವ ಧಾನ್ಯದ ಹಿಟ್ಟುಗಳನ್ನು ಯಾವ ಕಾಲದಲ್ಲಿ ಉಪಯೋಗಿಸಬೇಕು ಅನ್ನೋದು ಬಹುತೇಕರಿಗೆ ಗೊತ್ತಿಲ್ಲ.
ಇದನ್ನೂ ಓದಿ: ಸ್ನಾಯುಗಳ ಬೆಳವಣಿಗೆಗೆ ಹಣ್ಣುಗಳು ಬಹಳ ಸಹಕಾರಿ; ಆ ಪ್ರಮುಖ 10 ಹಣ್ಣುಗಳು ಯಾವುವು?
ಅದರಲ್ಲೂ ಧಾನ್ಯಗಳ ವಿಷಯಕ್ಕೆ ಬಂದಾಗ ನಮ್ಮ ದೇಶದಲ್ಲಿ ಹಲವಾರು ಧಾನ್ಯಗಳನ್ನು ಬೆಳೆಯತ್ತಾರೆ ಅವುಗಳಿಂದ ತಯಾರಾಗುವ ಹಿಟ್ಟಿನಿಂದ ಅನೇಕ ರೀತಿಯ ಆಹಾರಗಳು ರೆಡಿಯಾಗುತ್ತವೆ. ಧಾನ್ಯಗಳ ಹಿಟ್ಟಿನಲ್ಲಿ ಹಲವು ರೀತಿಯ ಪೋಷಕಾಂಶಗಳು, ಖನಿಜಾಂಶಗಳು ಹಾಗೂ ಪ್ರೊಟೀನ್ ಅಂಶಗಳು ಇರುತ್ತವೆ. ಅದರಲ್ಲೂ ಚಳಿಗಾಲದಲ್ಲಿ ಬಳಸಬೇಕಾದ ಹಿಟ್ಟಿನ ಬಗ್ಗೆ ನಾವು ತಿಳಿದುಕೊಳ್ಳಬೇಕು. ಕೆಲವು ತಜ್ಞರು ಹೇಳುವ ಪ್ರಕಾರ ಚಳಿಗಾಲಕ್ಕೆ ಕೆಲವು ಧಾನ್ಯಗಳ ಹಿಟ್ಟನ್ನು ನಾವು ತಪ್ಪದೇ ಆಹಾರದ ಕ್ರಮವಾಗಿಸಿಕೊಳ್ಳಬೇಕು ಎಂದು ಹೇಳುತ್ತಾರೆ ಅವುಗಳಲ್ಲಿ ಪ್ರಮುಖವಾದವುಗಳು ಇಲ್ಲಿವೆ
ಜೋಳದ ಹಿಟ್ಟು
ಅತಿಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಧಾನ್ಯ ಅಂದ್ರೆ ಅದು ಜೋಳ. ಇದರಲ್ಲಿ ಅತ್ಯಂತ ಹೇರಳವಾಗಿ ಫೈಬರ್ ಹಾಗೂ ಆ್ಯಂಟಿಆಕ್ಸಿಡೆಂಟ್ನಂತಹ ಅಂಶಗಳುವ ಇವೆ. ನೈಸರ್ಗಿಕವಾಗಿ ಗ್ಲೂಟಿನ್ ಫ್ರೀ ಆಗಿರುವ ಈ ಧಾನ್ಯ ಸರಳವಾಗಿ ಜೀರ್ಣವಾಗುತ್ತದೆ. ಇದು ದೇಹದಲ್ಲಿ ಶಕ್ತಿ ಹೆಚ್ಚಿಸಿ ಕರುಳಿನ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ. ಹೀಗಾಗಿ ಚಳಿಗಾಲಕ್ಕೆ ಜೋಳದ ಹಿಟ್ಟನಿಂದ ಮಾಡಿದ ಆಹಾರ ತಿನ್ನುವುದು ಬಹಳ ಉತ್ತಮ. ಜೋಳದ ಹಿಟ್ಟಿನಿಂದ ರೊಟ್ಟಿ ಗಂಜಿ ಸೇರಿದಂತೆ ಹಲವು ಆಹಾರಗಳನ್ನ ತಯಾರಿಸಬಹುದು.
ಇದನ್ನೂ ಓದಿ:ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸೇವಿಸಿ ಕ್ಯಾರೆಟ್; ಪ್ರತಿದಿನ ಈ ತರಕಾರಿ ತಿನ್ನುವುದರಿಂದ ಇವೆ 8 ಆರೋಗ್ಯಕರ ಲಾಭಗಳು
ರಾಗಿ ಮುದ್ದೆಯಂತೆ ಮುದ್ದೆಯನ್ನು ಕೂಡ ತಯಾರಿಸಬಹುದು. ಅದರಲ್ಲೂ ಈ ಚಳಿಗಾಲಕ್ಕೆ ಜೋಳದ ರೊಟ್ಟಿಯ ಟಾಕೋಸ್ ಮಾಡಿ ಮಧ್ಯ ಸ್ಪೈಸಿ ಚಿಕನ್ ಸೇರಿಸಿ ತಿನ್ನುವುದಂತೂ ಅತ್ಯುದ್ಭುತ ಅನುಭವ ಹಾಗೆಯೇ ಆರೋಗ್ಯಕ್ಕೂ ಕೂಡ ಒಳ್ಳೆಯದು.
ಸಜ್ಜೆ ಹಿಟ್ಟು
ಸಜ್ಜೆ ಹಿಟ್ಟು ಹಾಗೂ ಜೋಳದ ಹಿಟ್ಟನ್ನು ಜಾಸ್ತಿ ಉಪಯೋಗಿಸುವುದು ಉತ್ತರ ಕರ್ನಾಟಕದಲ್ಲಿ. ಈ ಒಂದು ಧಾನ್ಯ ಹೆಚ್ಚು ಕಬ್ಬಿನಾಂಶವನ್ನು ಹೊಂದಿದೆ. ಚಳಿಗಾಲಕ್ಕೆ ಹೇಳಿ ಮಾಡಿಸಿದ ಆಹಾರ. ಇದರಲ್ಲಿ ಹೇರಳವಾಗಿ ಆಮಿನೋ ಆಸಿಡ್ ಇರುವ ಕಾರಣ ಇದು ದೇಹದ ತಾಪಮಾನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಮ್ಮನ್ನು ಒಳಗಿನಿಂದ ಬೆಚ್ಚಗೆ ಇಡುವ ಕ್ಷಮತೆ ಈ ಸಜ್ಜೆಗೆ ಇದೆ.ಸಜ್ಜೆಯಿಂದ ನಾವು ರೊಟ್ಟಿಯನ್ನು ತಯಾರಿಸಬಹುದು. ಕಿಚಡಿಯನ್ನು ತಯಾರಿಸಬಹುದು ಸಜ್ಜೆಯ ಪೊಂಗಲ್ ಕೂಡ ಮಾಡಿಕೊಂಡು ಸೇವಿಸಬಹುದು.
ಮೆಕ್ಕೆಜೋಳದ ಹಿಟ್ಟು
ಮೆಕ್ಕೆ ಜೋಳ ಅಥವಾ ಮುಸುಕಿನ ಜೋಳ ಕೂಡ ಚಳಿಗಾಲದಲ್ಲಿ ತುಂಬಾ ಪ್ರಮುಖವಾದ ಧಾನ್ಯ. ಇದರಲ್ಲಿ ಹೇರಳವಾಗಿ ನಮಗೆ ಕಾರ್ಬೋಹೈಡ್ರೆಡ್ ಸಿಗುವುದರಿಂದ ನಮಗೆ ಇದು ದೀರ್ಘಕಾಲ ಉಳಿಯುವಂತಹ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸುತ್ತದೆ. ಇದು ಜೀರ್ಣಕ್ರಿಯೆಗೆ ಬಹಳ ಸಹಾಯಕಾರಿ ಚಳಿಗಾಲದಲ್ಲಿ ಇದನ್ನು ಹೆಚ್ಚು ಉತ್ತರ ಭಾರತದವರು ಬಳಸುತ್ತಾರೆ. ಇದರಿಂದ ರೊಟ್ಟಿ, ಉಪ್ಪಿಟ್ಟು, ಕಿಚಡಿ ತಯಾರಿಸಿ ಸೇವಿಸಬಹುದು.
ರಾಗಿ ಹಿಟ್ಟು
ರಾಗಿ ಹಿಟ್ಟು ಅಂದ ತಕ್ಷಣ ನಮ್ಮ ಕರ್ನಾಟಕದವರಿಗೆ ಒಂದು ಪ್ರೀತಿ. ಕರ್ನಾಟಕಕ್ಕೂ ರಾಗಿಗೂ ಒಂದು ಎಂದು ಬಿಡಲಾರದ ನಂಟು ಇದೆ. ರಾಗಿ ಮುದ್ದೆ ಅಂದ ತಕ್ಷಣ ನಮಗೆ ಮಂಡ್ಯ ಮೈಸೂರು ಭಾಗ ನೆನಪಾಗಿ ಬಿಡುತ್ತದೆ. ರಾಗಿಯಲ್ಲಿ ಅತಿಹೆಚ್ಚು ಕ್ಯಾಲ್ಸಿಯಂ, ಕಬ್ಬಣಾಂಶ ಮತ್ತು ಆ್ಯಂಟಿ ಆಕ್ಸಿಡೆಂಟ್ಸ್ ಇರುತ್ತವೆ. ಇದು ಎಲುಬುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದೂ ಮಾತ್ರವಲ್ಲ ರಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದುರಿಂದ ಚಳಿಗಾಲದಲ್ಲಿ ಸಹಜವಾಗಿ ಹುಟ್ಟುವಂತಹ ಕಾಯಿಲೆಗಳಿಗೆ ಇದು ರಾಮಬಾಣವಾಗಿ ನಿಲ್ಲುತ್ತದೆ. ದೇಹವನ್ನು ಅಂತಹ ಕಾಯಿಲೆಗಳಿಂದ ಕಾಪಾಡುತ್ತದೆ.
ನವಣೆ ಹಿಟ್ಟು
ನವಣೆ ಸಿರಿಧಾನ್ಯಗಳಲ್ಲಿ ಕೂಡ ಒಂದು ನವಧಾನ್ಯಗಳಲ್ಲಿಯೂ ಕೂಡ ಒಂದು. ಈ ಧಾನ್ಯದಲ್ಲಿ ನಮಗೆ ಶ್ರೀಮಂತ ಪೋಷಕಾಂಶಗಳನ್ನು ಹೊಂದಿದೆ. ಇದು ಅತ್ಯಂತ ಕಡಿಮೆ ಗ್ಲೈಸೆಮಿಕ್ ಹೊಂದಿರುವ ಆಹಾರ ಆಗಿರುವುದರಿಂದ ದೇಹದಲ್ಲಿ ಶುಗರ್ ಅಂಶವನ್ನು ಕೂಡ ಕಡಿಮೆ ಮಾಡುತ್ತದೆ. ಇದು ಚಳಿಗಾಲಕ್ಕೆ ಅತ್ಯಂತ ಸೂಕ್ತವಾದ ಧಾನ್ಯ. ನವಣೆಯಿಂದ ಕಿಚಡಿ, ಉಪ್ಪಿಟ್ಟು, ದೋಸೆ ಪಲಾವ್ ಈ ರೀತಿಯ ಆಹಾರಗಳನ್ನು ಮಾಡಿಕೊಂಡು ತಿನ್ನಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ