newsfirstkannada.com

ಪ್ರಸಿದ್ಧ ಕನ್ಯಕಾ ಪರಮೇಶ್ವರಿಗೆ ವಿಶೇಷ ಉಡುಗೊರೆ; ಒಂದೂವರೆ ಕೆಜಿ ಚಿನ್ನದ ಕಿರೀಟ ಸಮರ್ಪಣೆ..!

Share :

Published February 24, 2024 at 7:25am

    ವಾಸವಿಯ ಬೃಹತ್ ವಿಗ್ರಹಕ್ಕೆ 5ನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವ

    90 ಅಡಿಯ ಬೃಹತ್ ವಾಸವಿ ಕನ್ಯಕಾ ದೇವಿಯ ಪಂಚಲೋಹದ ವಿಗ್ರಹ

    ವಾಸವಿ ಕನ್ಯಕಾ ಪರಮೇಶ್ವರಿ ಮಹೋತ್ಸವ ಅದ್ಧೂರಿಯಾಗಿ ನಡೆಯಿತು

ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ಭಕ್ತರ ನಂಬಿಕೆಯ ಅಧಿದೇವತೆ. ಆರ್ಯ ವೈಶ್ಯರ ಪಾಲಿನ ಕುಲದೇವತೆ. ಆಂಧ್ರಪ್ರದೇಶದ ಪೆನುಗೊಂಡದಲ್ಲಿರುವ ದೇವಿಗೆ ಬರೋಬ್ಬರಿ ಒಂದೂವರೆ ಕೆಜಿ ಚಿನ್ನದ ಕಿರೀಟ ಸಮರ್ಪಣೆಯಾಗಿದೆ. ಅಲ್ಲದೆ, 90 ಅಡಿಯ ಬೃಹತ್ ವಾಸವಿ ದೇವಿಯ ಪಂಚಲೋಹದ ವಿಗ್ರಹ. 5ನೇ ವರ್ಷಾಚರಣೆ ಸಂಭ್ರಮದಿಂದ ನಡೆಯಿತು.

ಶ್ರೀವಾಸವಿ ಕನ್ಯಕಾ ಪರಮೇಶ್ವರಿಗೆ ಪಂಚ ವಾರ್ಷೀಕೋತ್ಸವದ ಸಂಭ್ರಮ.. ಒಂದೂವರೆ ಕೆಜಿ ಚಿನ್ನದ ಕಿರೀಟ ಸಮರ್ಪಣೆ

ಶ್ರೀ ವಾಸವಿ ಕನ್ಯಕಾಪರಮೇಶ್ವರಿ ಪೆನುಗೊಂಡದಲ್ಲಿ ನೆಲೆ ನಿಂತ ಮಹಾಮಾತೆ. ಇದು ವಾಸವಿ ದೇವಿಯ ಜನ್ಮಸ್ಥಳವೂ ಹೌದು. ಈ ಮಹಾದೇವಿ ಆರ್ಯ ವೈಶ್ಯ ಸದ್ಭಕ್ತರ ಪಾಲಿನ ಜಗನ್ಮಾತೆ. ಈ ದೇವಭೂಮಿಗೆ ಕಾಶಿ ಆಫ್ ವೈಶ್ಯಾಸ್ ಎಂಬ ನಾಮಾಂಕಿತವೂ ಇದೆ. ಪೆನುಗೊಂಡದ ವಾಸವಿ ದೇವಸ್ಥಾನದಲ್ಲಿನ ಈ 90 ಅಡಿಯ ವಾಸವಿದೇವಿಯ ವಿಗ್ರಹ, ಪ್ರಪಂಚದಲ್ಲೇ ಮೊದಲ ಪಂಚಲೋಹದ ವಿಗ್ರಹ ಎಂಬ ಖ್ಯಾತಿವೆತ್ತಿದೆ. ಇದೇ ದೇವಸ್ಥಾನಕ್ಕೀಗ ವಿಶೇಷ ಉಡುಗೊರೆಯೊಂದು ಸಮರ್ಪಿತವಾಗಿದೆ.

ವಾಸವಿದೇವಿಯ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ

ಪೆನುಗೊಂಡದಲ್ಲಿ ಸಂಭ್ರಮವೋ ಸಂಭ್ರಮ. ವಿಶೇಷ ಆಕರ್ಷಣೆ ಜೊತೆ ಕಂಗೊಳಿಸುತ್ತಿರುವ ಪೆನುಗೊಂಡದ ವಾಸವಿ ದೇವಸ್ಥಾನದ ಭಕ್ತರಲ್ಲೂ ಉತ್ಸಾಹ, ಸಡಗರ ಮನೆ ಮಾಡಿತ್ತು. ಅಂದ್ಹಾಗೆ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ಮಹೋತ್ಸವ ಅದ್ಧೂರಿಯಾಗಿ ಜರುಗಿದೆ. ಈ ಮಹೋತ್ಸವಕ್ಕೆ 75 ವಿವಿಧ ಪ್ರದೇಶಗಳಿಂದ ವಾಸವಿದೇವಿಯ ಉತ್ಸವ ಮೂರ್ತಿಗಳನ್ನ ತಂದು ವಿಶೇಷವಾಗಿ ಪೂಜಿಸಲಾಯ್ತು.

ಶ್ರೀವಾಸವಿ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿನ ಬರೋಬ್ಬರಿ 90 ಅಡಿಯ ಪಂಚಲೋಹದ ವಾಸವಿ ದೇವಿಗೆ ಪಂಚ ವಾರ್ಷೀಕೋತ್ಸವದ ಸಂಭ್ರಮ. ಈ ಸಂಭ್ರಮದಲ್ಲಿ ದೇವಿಗೆ ಬರೋಬ್ಬರಿ ಒಂದೂವರೆ ಕೆಜಿ ತೂಕದ ಚಿನ್ನದ ಕಿರೀಟ ಸಮರ್ಪಣೆ ಆಗಿದೆ. ಅಖಿಲ ಭಾರತ ಶ್ರೀವಾಸವಿ ಪೆನುಗೊಂಡ ಟ್ರಸ್ಟ್ ವತಿಯಿಂದ ದೇವಿಗೆ ಈ ಕಿರೀಟ ಭೂಷಣವಾಗಿದೆ.

ದೇವಿಗೆ 1,500 ಗ್ರಾಂ ಚಿನ್ನದ ಕಿರೀಟ ಧಾರಣೆ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹಸ್ತದಿಂದ ದೇವಿಗೆ 1,500 ಗ್ರಾಂ ಚಿನ್ನದ ಕಿರೀಟ ಧಾರಣೆ ಆಗಿದೆ. ಇನ್ನು, ವಾಸವಿ ಮಾತೆಗೆ 1,500 ಗ್ರಾಂ ಚಿನ್ನದ ಕಿರೀಟ ಮಾಡಲು ಸಹಕರಿಸಿದ ದಾನಿಗಳನ್ನ ಟ್ರಸ್ಟ್ ಅಧ್ಯಕ್ಷ ಡಾ. ಪಿ.ಎನ್.ಗೋವಿಂದರಾಜುಲು ಸನ್ಮಾನಿಸಿದರು.

ವಾಸವಿ ದೇವಿಯ ಬೃಹತ್ ವಿಗ್ರಹಕ್ಕೆ 5ನೇ ವರ್ಷದ ಪ್ರತಿಷ್ಠಾಪನಾ ಮಹೋತ್ಸವದ ಕೊನೆಯಲ್ಲಿ ವೈಭವದ ಬೆಳ್ಳಿ ರಥೋತ್ಸವವು ನೆರೆದಿದ್ದ ಭಕ್ತ ಸಮೂಹವನ್ನ ಭಾವಪರವಶಗೊಳಿಸ್ತು. ಆರ್ಯ ವೈಶ್ಯರ ಅಧಿದೇವತೆಯಾಗಿರೋ ವಾಸವಿ ಕನ್ಯಕಪರಮೇಶ್ವರಿ ದೇವಿಯ ಜನ್ಮಸ್ಥಾನದಲ್ಲಿ ಸಂಭ್ರಮ, ಸಡಗರ ಉಕ್ಕೇರಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಸಿದ್ಧ ಕನ್ಯಕಾ ಪರಮೇಶ್ವರಿಗೆ ವಿಶೇಷ ಉಡುಗೊರೆ; ಒಂದೂವರೆ ಕೆಜಿ ಚಿನ್ನದ ಕಿರೀಟ ಸಮರ್ಪಣೆ..!

https://newsfirstlive.com/wp-content/uploads/2024/02/NIRMALA_SITARAMAN-2.jpg

Load More