/newsfirstlive-kannada/media/post_attachments/wp-content/uploads/2024/10/Gururaj-Hoskote-2.jpg)
ಬಾಗಲಕೋಟೆ: ಜನಪದ ಕಲಾವಿದ, ಚಿತ್ರನಟ ಗುರುರಾಜ್ ಹೊಸಕೋಟೆ ಕಾರು ಅಪಘಾತವಾಗಿದೆ. ಎದುರುಗಡೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಕಾರು ಅಪಘಾತದಲ್ಲಿ ಗುರುರಾಜ್ ಪಾರಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸೋರಗಾವಿಯ ಬಳಿ ಅಪಘಾತವಾಗಿದೆ. ಸಿಂಧನೂರಿನಿಂದ ಮಹಾಲಿಂಗಪುರಕ್ಕೆ ಹೊರಟಿದ್ದಾಗ ಅಪಘಾತವಾಗಿದೆ. ಜನಪದ ಕಲಾವಿದ ಗುರುರಾಜ್ ಹೊಸಕೋಟೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
/newsfirstlive-kannada/media/post_attachments/wp-content/uploads/2024/10/Gururaj-Hoskote-1.jpg)
ಗುರುರಾಜ್​ ಹೊಸಕೋಟೆ ಜನಪದ ಸಮೂಹ ಗೀತೆಗಳನ್ನು ರಚಿಸಿ ಹಾಡುತ್ತಾರೆ. ಜೊತೆಗೆ ನೃತ್ಯವನ್ನು ಸಂಯೋಜನೆ ಮಾಡುತ್ತಾರೆ. ಅವರ ಹಾಡುಗಾರಿಕೆಯಿಂದಲೇ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇದಲ್ಲದೆ ಅನೇಕ ಸಿನಿಮಾಗಳಲ್ಲೂ ಹಾಡಿದ್ದಾರೆ. ಕರಿಯ, ದಾಸ, ಜೋಗಿ, ಅಂಬಿ ಹೀಗೆ ಅನೇಕ ಸಿನಿಮಾಗಳಿಗೆ ಹಾಡಿನ ಮೂಲಕ ಧ್ವನಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us