Advertisment

ಮನೆ ಬೀರುವಿನಲ್ಲಿರೋ ದುಬಾರಿ ಬೆಲೆಯ ಸೀರೆ ಸೇಫ್​ ಆಗಿರಿಸಲು ಈ 5 ಸಿಂಪಲ್​ ಟಿಪ್ಸ್​ ಫಾಲೋ ಮಾಡಿ!

author-image
Veena Gangani
Updated On
ಮನೆ ಬೀರುವಿನಲ್ಲಿರೋ ದುಬಾರಿ ಬೆಲೆಯ ಸೀರೆ ಸೇಫ್​ ಆಗಿರಿಸಲು ಈ 5 ಸಿಂಪಲ್​ ಟಿಪ್ಸ್​ ಫಾಲೋ ಮಾಡಿ!
Advertisment
  • ಸಿಲ್ಕ್​ ಸೀರೆಗಳು ದೀರ್ಘಕಾಲದವರೆಗೂ ಚೆನ್ನಾಗಿರಲು ಹೀಗೆ ಮಾಡಿ ನೋಡಿ
  • ಮನೆಯಲ್ಲಿರೋ ಸೀರೆಗಳಿಗೆ ಫಂಗಸ್ ಅಟ್ಯಾಕ್ ಆಗದಂತೆ ನೋಡಿಕೊಳ್ಳಿ
  • ಬೆಲೆ ಬಾಳೋ ಸೀರೆ ಸೇಫ್​ ಆಗಿರಿಸಲು ಸಿಂಪಲ್​ ಟಿಪ್ಸ್​ ಫಾಲೋ ಮಾಡಿ

ಸೀರೆಗಳಲ್ಲಿ ಹಲವು ವಿಧಗಳಿವೆ. ಭಾರತದ ಆಯಾಯ ಭಾಗಗಳಲ್ಲಿ ಸಂಸ್ಕೃತಿಯ ಭಾಗವಾಗಿ ಸೀರೆಗಳನ್ನು ಕಾಣಬಹುದು. ಮೈಸೂರು ಸಿಲ್ಕ್​​, ಕಾಂಚಿವರಂ, ಇಲಕಲ್​ ಸೀರೆ ಹೀಗೆ ಹಲವು ವಿಧದ ಸಾರಿಗಳಿವೆ. ಪ್ರಸ್ತುತ ಸಮಾಜದಲ್ಲಿ ಹೊಸ ಹೊಸ ಸಾರಿಗಳು ಮಾರುಕಟ್ಟೆಗೆ ಬರುತ್ತಿವೆ. ಟ್ರೇಡಿಂಗ್​ನಲ್ಲಿ ಯಾವುದೇ ಬಂದರು ಸಾಕಷ್ಟು ನಾರಿಯರಿಗೆ ಮೈಸೂರು ಸಿಲ್ಕ್ ಸೀರೆನೇ ಬಲು ಇಷ್ಟ.

Advertisment

ಇದನ್ನೂ ಓದಿ: VIDEO: ಹಲ್ಲು ಕೀಳಿಸಿ ಚಿನ್ನದ ಹಲ್ಲು ಹಾಕಿಸಿಕೊಂಡ ಭೂಪ; ಭಾರತದಲ್ಲಿ ಈ ರೀತಿ ಇರೋದು ಇವನೊಬ್ಬನೇ!

publive-image

ಹೌದು, ಸೀರೆ ಅನ್ನೋದು ಭಾರತೀಯ ಪರಂಪರೆಯ ಅವಿಭಾಜ್ಯ ಅಂಗ. ಸೀರೆಗೂ ಹಾಗೂ ಈ ದೇಶದ ನಾರಿಗೂ ಸಹಸ್ರಾರು ವರ್ಷಗಳ ನಂಟು ಇದೆ. ಸೀರೆ ಖರೀದಿಯಿಲ್ಲದೇ ಯಾವು ಹಬ್ಬವನ್ನಾಗಲಿ, ಧಾರ್ಮಿಕ ಕಾರ್ಯಕ್ರಮಗಳಾಗಲಿ, ಮದುವೆ ಮುಂಜಿವೆಗಳಾಗಲಿ ಪರಿಪೂರ್ಣಗೊಳ್ಳುವುದೇ ಇಲ್ಲ. ಭಾರತದಲ್ಲಿ ನಮಗೆ ಅಸಂಖ್ಯಾತ ರೀತಿಯ, ವಿನ್ಯಾಸದ ಹಾಗೂ ದುಬಾರಿ ಸೀರೆಗಳು ಕಾಣಲು ಸಿಗುತ್ತವೆ. ಹೀಗಾಗಿ ಮಾರುಕಟ್ಟೆ ಬಂದ ಹೊಸ ಹೊಸ ಸೀರೆಗಳನ್ನು ಹೆಣ್ಣು ಮಕ್ಕಳು ಖರೀದಿ ಮಾಡಿ ಬಿಡುತ್ತಾರೆ.

Advertisment

publive-image

ಹೀಗೆ ಖರೀದಿ ಮಾಡಿದ ಹೊಸ ಹೊಸ ಸೀರೆಗಳನ್ನು ಮಹಿಳೆಯರು ತಮ್ಮ ಮನೆಯ ಬೀರುವಿನಲ್ಲಿ ಇಟ್ಟು ಬಿಡುತ್ತಾರೆ. ಅದರಲ್ಲೂ ರೇಷ್ಮೆ ಸೀರೆಗಳನ್ನು ಹಬ್ಬ ಹರಿದಿನ ಅಥವಾ ಮದುವೆ ಹೀಗೆ ಕಾರ್ಯಕ್ರಮದಲ್ಲಿ ಮಾತ್ರ ಬೀರುವಿನಿಂದ ಆಚೆ ತೆಗೆಯುತ್ತಾರೆ. ಆದ್ರೆ ಹಾಗೇ ಬೀರುವಿನಲ್ಲಿ ಸೀರೆಗಳು ಇಟ್ಟರೆ ಹಾಳಾಗುವುದು, ವಾಸನೆ ಬರುವುದು ಗ್ಯಾರಂಟಿ. ಹೀಗಾಗಿ ಈ ಕೆಳಗಿನ 5 ಸಿಂಪಲ್​ ಟಿಪ್ಸ್​ ಫಾಲೋ ಮಾಡಿದರೇ ನಿಮ್ಮ ಸೀರೆಗಳು ದೀರ್ಘಕಾಲದವರೆಗೆ ಸೇಫ್​ ಆಗಿರಿಸಬಹುದು.

1. ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಿ ಬಂದ ಮೇಲೆ ನೀವು ಧರಿಸಿದ್ದ ಸಿಲ್ಕ್ ಸೀರೆಯನ್ನು ಹಾಗೇ ಮಡಚಿ ಇಡಬೇಡಿ. ಬರೋಬ್ಬರಿ 20 ನಿಮಿಷಗಳ ಕಾಲ ಒಣಗಿ ಹಾಕಿ.

Advertisment

2.ಸೀರೆಯ ಮೇಲೆ ಎಣ್ಣೆಯ ಕಲೆಗಳು ಬಿದ್ದಿದ್ದರೇ ಅದರ ಮೇಲೆ ಟಾಲ್ಕಮ್ ಪೌಡರ್ ಹಾಕಿ ಟೀಶೂ ಪೇಪರ್​ನಿಂದ ಅಥವಾ ಕಾಟನ್ ಬಟ್ಟೆಯಿಂದ ಸರಿಯಾಗಿ ಒರೆಸಿಕೊಳ್ಳಿ.

3.ಇನ್ನೂ ಸಿಲ್ಕ್ ಸೀರೆಗಳಿಗೆ ಇಸ್ತ್ರಿ ಮಾಡುವಾಗ ಗಮನವಿರಲಿ. ಇಸ್ತ್ರಿ ಮಾಡುವಾಗ ಸೀರೆಯನ್ನು ಉಲ್ಟಾ ಮಾಡಿ ಹೊಡೆಯಬೇಕು. ಉಲ್ಟಾ ಮಾಡಿ ಇಸ್ತ್ರಿ ಮಾಡಿದರೆ ಬಣ್ಣ ಮಾಸುವುದಿಲ್ಲ. ಜೊತೆಗೆ ಸೀರೆಯ ಜರಿ ಹಾಳಾಗುವ ಸಂಭವ ಇರುತ್ತದೆ.

4.ಮೈಸೂರ್​ ಸಿಲ್ಕ್​ ಸೀರೆಯನ್ನು ಹಾಕಿದ ಬಳಿಕ ಭಿನ್ನ ವಿಭಿನ್ನವಾಗಿ ಮಡಚಿ ಇಡಬೇಕು. ಉದಾಹರಣೆಗೆ ಒಮ್ಮೆ ಸೀತಾ ಮಡಚಿಟ್ಟರೆ, ಮತ್ತೊಮ್ಮೆ ಉಲ್ಟಾ ಮಡಚಿ ಇಡಬೇಕು.

Advertisment

5.ಮುಖ್ಯವಾಗಿ ಬೀರುವಿನಲ್ಲಿ ಸಿಲ್ಕ್ ಸೀರೆಯನ್ನು ಇಡುವಾಗ ಯಾವುದಾದರೂ ಕಾಟನ್ ಬ್ಯಾಗ್​ನಲ್ಲಿಯೇ ಮಡಚಿ ಇಡಿ. ಜೊತೆಗೆ ಫಂಗಸ್​ನಿಂದ ತಪ್ಪಿಸಲು ಆ ಕಾಟನ್ ಬ್ಯಾಗ್​ನಲ್ಲಿ ಒಂದು ಪಲಾವ್ ಎಲೆ, ಲವಂಗ ಹಾಗೂ ಏಲಕ್ಕಿ ಹಾಕಿ ಇಟ್ಟರೆ ಫಂಗಸ್ ಅಟ್ಯಾಕ್​ ಆಗೋದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment