ಅಬ್ದುಲ್ ರಹಿಮಾನ್​ನ ಬರ್ಬರ ಹತ್ಯೆ.. ಸದ್ಯ ಹೇಗಿದೆ ಮಂಗಳೂರು ಪರಿಸ್ಥಿತಿ..?

author-image
Ganesh
Updated On
ಅಬ್ದುಲ್ ರಹಿಮಾನ್​ನ ಬರ್ಬರ ಹತ್ಯೆ.. ಸದ್ಯ ಹೇಗಿದೆ ಮಂಗಳೂರು ಪರಿಸ್ಥಿತಿ..?
Advertisment
  • ಕುತ್ತಾರು ಮದನಿನಗರ ಮಸೀದಿಗೆ ಆಗಮಿಸಿದ ಮೃತದೇಹ
  • ರಹೀಂ ಮೃತದೇಹಕ್ಕೆ ಇಸ್ಲಾಂ ಸಂಪ್ರದಾಯದಂತೆ ಮಯ್ಯತ್
  • ಮಸೀದಿಯಿಂದ ಕೊಲ್ತಮಜಲು ಗ್ರಾಮಕ್ಕೆ ಮೃತದೇಹ ರವಾನೆ

ತಲ್ವಾರ್​ನಿಂದ ದಾಳಿ ಮಾಡಿ ದುಷ್ಕರ್ಮಿಗಳು ಓರ್ವನನ್ನು ಕೊಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಂಟ್ವಾಳದಲ್ಲಿ ನಡೆದಿದೆ. ಅಬ್ದುಲ್ ರಹಿಮಾನ್ ಕೊಲೆಯಾದ ಯುವಕ.

ಆಗಿದ್ದೇನು..?

ಬಂಟ್ವಾಳದ ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿ‌ಯಲ್ಲಿ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ಮೇಲೆ ದಾಳಿ ಮಾಡಿದ್ದಾರೆ. ಪರಿಣಾಮ, ಅಬ್ದುಲ್ ರಹಿಮಾನ್ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ. ಇದೀಗ ಅಬ್ದುಲ್ ರಹಿಮಾನ್ ಮೃತದೇಹ ಮಸೀದಿ ತಲುಪಿದ್ದು, ಇಸ್ಲಾಂ ಸಂಪ್ರದಾಯದಂತೆ ಮಯ್ಯತ್, ಬಳಿಕ ಕೊಲ್ತಮಜಲು ಗ್ರಾಮಕ್ಕೆ ಕುಟುಂಬಸ್ಥರು ಮೃತದೇಹವನ್ನ ಕೊಂಡೊಯ್ಯಲಿದ್ದಾರೆ.

ಇದನ್ನೂ ಓದಿ: ಮಂಗಳೂರಲ್ಲಿ ಮತ್ತೆ ಹರಿದ ನೆತ್ತರು.. ತಲ್ವಾರ್​ನಿಂದ ಕೊಚ್ಚಿ ಅಬ್ದುಲ್ ರಹಿಮಾನ್​ನ ಭೀಕರ ಹತ್ಯೆ

publive-image

ಪ್ರಕರಣಕ್ಕೆ ಸಂಬಂಧಿಸಿದಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಎನ್ಎಸ್ 163ರಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿನ್ನೆಯಿಂದ ಮೇ 30ರವರೆಗೆ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರಾವಾಲ್ ಆದೇಶ ಹೊರಡಿಸಿದ್ದಾರೆ. ಇನ್ನು, ಇವತ್ತು ಮಂಗಳೂರಿಗೆ ಎಡಿಜಿಪಿ ಹಿತೇಂದ್ರ ಭೇಟಿ ನೀಡಲಿದ್ದು, ಆಯಕಟ್ಟಿನ ಸ್ಥಳಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಜೊತೆಗೆ ಅನುಮಾನಾಸ್ಪದ ಚಟುವಟಿಕೆ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

publive-image

ಮೃತದೇಹದ ಮೆರವಣಿಗೆ

ಸದ್ಯ ಅಬ್ದುಲ್ ಅವರ ಮೃತದೇಹವು ಮೃತದೇಹದ ಅಂತಿಮ ಯಾತ್ರೆ ಆರಂಭವಾಗಿದೆ. ಮಂಗಳೂರು ಕುತ್ತಾರ್ ಮದನಿ ನಗರದ ಮಸೀದಿಯಿಂದ ಬಂಟ್ವಾಳದ ಕೋಳ್ತಮಜಲುಗೆ ಮೃತದೇಹದ ಮೆರವಣಿಗೆ ಸಾಗುತ್ತಿದೆ. ಒಟ್ಟು ನಾಲ್ಕು ಆ್ಯಂಬುಲೆನ್ಸ್ ಮೂಲಕ ಮೃತದೇಹ ರವಾನೆ ಮಾಡಲಾಗುತ್ತಿದೆ. ಮೆರವಣಿಗೆಗೆ ಪೊಲೀಸರು ಭದ್ರತೆ ನೀಡಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ.. ಕುಂಭಮೇಳ ಸುಂದರಿಯ ಲುಕ್​ ನೋಡ್ರೋ; ವಿಡಿಯೋ ಹಿಂದಿನ ಅಸಲಿಯತ್ತು ಇಲ್ಲಿದೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment