newsfirstkannada.com

ಅಕ್ಕಿ ರಾಜಕೀಯ! ಮೋದಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಭಾರತೀಯ ಆಹಾರ ಮಂಡಳಿ

Share :

Published June 15, 2023 at 9:16am

    100 ಮೆಟ್ರಿಕ್ ಟನ್ ಧಾನ್ಯಗಳನ್ನು ಮಾತ್ರ ಹರಾಜಿನಲ್ಲಿ ಖರೀದಿಸಬಹುದು

    ಭಾರತೀಯ ಆಹಾರ ಮಂಡಳಿ ಪ್ರಕಟಣೆಯಿಂದ ಸಿದ್ದು ಸರ್ಕಾರಕ್ಕೆ ಸಂಕಷ್ಟ

    ಮೋದಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆರೋಪ ಏನಾಗಿತ್ತು..?

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಮಾಡಿದ ಆರೋಪಕ್ಕೆ ಭಾರತೀಯ ಆಹಾರ ಮಂಡಳಿ (FCI) ಸ್ಪಷ್ಟನೆ ನೀಡಿದೆ. ಜೂನ್​ನಲ್ಲಿ ರಾಜ್ಯ ಸರ್ಕಾರಗಳು ಗೋದಿ ಹಾಗೂ ಅಕ್ಕಿ ಪಡೆಯಲು ಅವಕಾಶವಿಲ್ಲ. ಹೀಗಾಗಿ ಅಕ್ಕಿ ಮತ್ತು ಧಾನ್ಯಗಳ ಹರಾಜು ರದ್ದು ಮಾಡಲಾಗಿದೆ ಎಂದು ಭಾರತೀಯ ಆಹಾರ ಮಂಡಳಿ ತಿಳಿಸಿದೆ. ಇದರಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಸಂಕಷ್ಟ ಎದುರಾದಂತಾಗಿದೆ.

ಗೋದಿ ಹಾಗೂ ಅಕ್ಕಿ, ಧಾನ್ಯನಗಳ ಬೆಲೆ ಏರಿಕೆಯನ್ನು ಸಮತೋಲನ ಕಾಪಾಡಲು ಮಂಡಳಿಯು ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಬಾರಿ OMSSD ಹರಾಜಿನಲ್ಲಿ ಏಕಕಾಲಕ್ಕೆ 10 ರಿಂದ 100 ಮೆಟ್ರಿಕ್ ಟನ್​ಗಳಷ್ಟು ಅಕ್ಕಿ, ಗೋದಿಯನ್ನು ಹರಾಜಿನ ಮೂಲಕ ಖರೀದಿಸಬಹುದಾಗಿದೆ.

ಈ ಹಿಂದೆ ಹರಾಜಿನಲ್ಲಿ ಗರಿಷ್ಠ 3,000 ಮೆಟ್ರಿಕ್ ಟನ್ ದಾನ್ಯಗಳನ್ನ ಖರೀದಿಗೆ ಅವಕಾಶ ಇತ್ತು. ಆದ್ರೆ ಈಗ ಈ ಅವಕಾಶ ಇಲ್ಲ ಎಂದು ಹೇಳಲಾಗುತ್ತಿದೆ. ಸಣ್ಣ ಹಾಗೂ ಮಧ್ಯಮ ಖರೀದಿದಾರರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಹಾಗೂ ಈ ಯೋಜನೆಯ (OMSSD) ಹೆಚ್ಚು ಜನರನ್ನ ತಲುಪಲು ಸಾಧ್ಯವಾಗಲಿದೆ. ಜೊತೆಗೆ ಖರೀದಿ ಮಾಡಿದ ಧಾನ್ಯಗಳು ಕೂಡಲೇ ಜನರಿಗೆ ತಲುಪಲು ಸಾಧ್ಯವಾಗಲಿದೆ ಎಂದು ಸಮರ್ಥನೆ FCI ನೀಡಿದೆ.

ಸಿದ್ದರಾಮಯ್ಯ ಆರೋಪ ಏನು?

ನಿನ್ನೆ ತುರ್ತು ಸುದ್ದಿಗೋಷ್ಟಿ ನಡೆಸಿದ್ದ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಕೊಡುವುದಾಗಿ ಭರವಸೆ ನೀಡಿದ್ದೆವು. ಅಕ್ಕಿ ಸಂಗ್ರಹ ಇಲ್ಲದ ಕಾರಣ ಮುಂದಿನ ತಿಂಗಳಿನಿಂದ ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್​​ದಾರರಿಗೆ ತಲಾ 10 ಕೆಜಿ ಆಹಾರ ಧಾನ್ಯ ವಿತರಿಸಲು ಸರ್ಕಾರ ಮಾಡಿದ್ದೆವು. ಈಗಾಗಲೇ ರಾಜ್ಯ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿದೆ. ಅದಕ್ಕೆ ಹೆಚ್ಚುವರಿಯಾಗಿ ಇನ್ನೂ ಐದು ಕೆಜಿ ಎಂದರೆ ಒಟ್ಟು 10 ಕೆಜಿ ನೀಡುವ ಭರವಸೆ ಕೊಟ್ಟಿದ್ದೇವೆ. ಹೀಗಾಗಿ ನಮಗೆ ತಿಂಗಳಿಗೆ 2,28,000 ಮೆಟ್ರಿಕ್​​ ಟನ್​​​ ಬೇಕಾಗುತ್ತದೆ. 5ಕ್ಕೆ ಐದು ಕೆಜಿ ಸೇರಿಸಿ ಒಟ್ಟು 10 ಕೆಜಿ ಕೊಡಬೇಕಾದರೆ ನಮಗೆ ಇಷ್ಟು ಅಕ್ಕಿ ಅಗತ್ಯ ಇದೆ. ಇದಕ್ಕೆ ತಿಂಗಳಿಗೆ 840 ಕೋಟಿ, ವರ್ಷಕ್ಕೆ 10,092 ಕೋಟಿ ಖರ್ಚು ಆಗಲಿದೆ. ಇದಕ್ಕೆ ಸಂಪುಟದಲ್ಲಿ ತೀರ್ಮಾನವು ಆಗಿದೆ. ನಾವು ಕೇಳಿದಷ್ಟು ಅಕ್ಕಿಯನ್ನು ಕೇಂದ್ರೀಯ ಆಹಾರ ನಿಗಮದ ಡೆಪ್ಯುಟಿ ಜನರಲ್ ಮ್ಯಾನೇಜರ್ ಒಪ್ಪಿಕೊಂಡಿದ್ದರು. ಈಗ ಅಕ್ಕಿ ಕೊಡಕ್ಕೆ ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಗಂಭೀರ ಆರೋಪಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ಕಿ ರಾಜಕೀಯ! ಮೋದಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಭಾರತೀಯ ಆಹಾರ ಮಂಡಳಿ

https://newsfirstlive.com/wp-content/uploads/2023/06/SIDDARAMAIAH_FCI.jpg

Load More