ಚಾಕೊಲೇಟ್​ ಚಿಪ್​ ಕುಕ್ಕಿ ತಯಾರಿಸಲು ಈತ ಏನು ಬಳಸಿದ ಗೊತ್ತಾ? ಫುಡ್ ಇಂಜಿನಿಯರ್ ವಿಡಿಯೋ ವೈರಲ್

author-image
Gopal Kulkarni
Updated On
ಚಾಕೊಲೇಟ್​ ಚಿಪ್​ ಕುಕ್ಕಿ ತಯಾರಿಸಲು ಈತ ಏನು ಬಳಸಿದ ಗೊತ್ತಾ? ಫುಡ್ ಇಂಜಿನಿಯರ್ ವಿಡಿಯೋ ವೈರಲ್
Advertisment
  • ಸಿಮೆಂಟ್ ಮಿಕ್ಸರ್​ನಲ್ಲಿ ಸಿದ್ಧಗೊಂಡ ಚಾಕೊಲೇಟ್​ ಚಿಪ್​ ಕುಕ್ಕಿ
  • ಫುಡ್ ಇಂಜಿನಿಯರ್ ನೂತನ ಐಡಿಯಾಗೆ ನೆಟ್ಟಿಗರು ಫುಲ್ ಫಿದಾ
  • ಹೇಗೆ ರೆಡಿಯಾಯ್ತು ಗೊತ್ತಾ ಬೃಹತ್ ಚಾಕೊಲೇಟ್​ ಚಿಪ್ ಕುಕ್ಕಿ

ಫುಡ್​ ಇಂಜಿನಿಯರ್​ಗಳು ವಿಜ್ಞಾನ, ತಂತ್ರಜ್ಞಾನ ಹಾಗೂ ತಮ್ಮ ಕ್ರಿಯಾಶೀಲತೆಯ ಮೂಲಕ ಹೊಸ ಹೊಸ ರುಚಿಯಾದ ಹೊಸ ಆಹಾರವನ್ನು ಸಿದ್ಧಪಡಿಸುತ್ತಲೇ ಇರುತ್ತಾರೆ. ಅವರ ಕ್ರಿಯಾಶೀಲತೆಯ ಮಟ್ಟವೇ ಒಂದು ಕೈ ಎತ್ತರ. ಆದ್ರೆ ಒಬ್ಬ ಫುಡ್ ಇಂಜಿನೀಯರ್​ ತಾನು ಮಾಡಿದ ಚಾಕೊಲೇಟರ್​ ಚಿಪ್ ಕುಕ್ಕಿಯಿಂದ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಸದ್ದು ಮಾಡಿದ್ದಾನೆ. ಈ ಒಂದು ಬೃಹತ್ ಕುಕ್ಕಿ ಸಿದ್ಧಗೊಳಿಸಲು ಆತ ಸಹಾಯ ಪಡೆದುಕೊಂಡಿದ್ದು ಸಿಮೆಂಟ್​ ಮಿಕ್ಸರ್​​ನ್ನು

ವೈರಲ್ ಆದ ವಿಡಿಯೋದಲ್ಲಿ ವಿವಿಧ ಪದಾರ್ಥಗಳನ್ನು ಅಂದ್ರೆ ಬೆಣ್ಣೆ, ಸಕ್ಕಾರೆ, ಹಿಟ್ಟು ಹಾಗೂ ಚಾಕೊಲೇಟ್ ಚಿಪ್ಸ್​ಗಳನ್ನು ಸಿಮೆಂಟ್​ ಮಿಕ್ಸರ್​ನಲ್ಲಿ ಹಾಕುವ ಮೂಲಕ ಚಾಕೊಲೇಟ್​ ಚಿಪ್ ಕುಕ್ಕಿ ರೆಡಿ ಮಾಡಿದ್ದಾನೆ. ಸಿಮೆಂಟ್ ಮಿಕ್ಸರ್​ನ್ನು ಸ್ವಾಭಾವಿಕವಾಗಿ ಕಟ್ಟಡ ಕಾಮಗಾರಿ ಹಾಗೂ ರಸ್ತೆ ಕಾಮಗಾರಿ ವೇಳೆ ಉಪಯೋಗಿಸುತ್ತಾರೆ. ಈ ಒಂದು ಅನನ್ಯ ಹಾಗೂ ಅಸಾಂಪ್ರದಾಯಿಕ ಮಾರ್ಗದಲ್ಲಿ ಈತ ಕುಕ್ಕಿ ರೆಡಿ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೀವರ್ಸ್​ ಗಮನ ಸೆಳೆದಿದೆ. ಇಂದೊಂದು ಯಾರು ನೀರಿಕ್ಷಿಸಿದ ಟೆಕ್ನಿಕ್ ಬಳಸಿ ಸಿದ್ಧಪಡಿಸಲಾದ ಖಾದ್ಯವೆಂದೇ ಎಲ್ಲರೂ ಈ ಫುಡ್ ಇಂಜಿನಿಯರ್​ನ್ನು ಹೊಗಳುತ್ತಿದ್ದಾರೆ.

ಇದನ್ನೂ ಓದಿ:‘ಡಿಂಗ ಡಿಂಗ’.. ಮಕ್ಕಳು, ಮಹಿಳೆಯರನ್ನೇ ಕಾಡುತ್ತಿದೆ ಈ ವಿಲಕ್ಷಣ ಕಾಯಿಲೆ; ಔಷಧಿಯೇ ಇಲ್ಲ!

ಈ ಒಂದು ವಿಡಿಯೋ 24 ಬಟರ್​ ಸ್ಟಿಕ್​ಗಳನ್ನು ಸಿಮೆಂಟ್ ಮಿಕ್ಸರ್​ನಲ್ಲಿ ಹಾಕವುದರೊಂದಿಗೆ ಶುರುವಾಗುತ್ತದೆ. ಆನಂತರ ಈತ ಒಟ್ಟು 2 ಡಜನ್ ಮೊಟ್ಟೆಗಳನ್ನು, ರುಚಿಗೆ ಬೇಕಾದಷ್ಟು ಸಕ್ಕರೆ, ಬೇಕಿಂಗ್​ ಸೋಡಾ, ಬೇಕಿಂಗ್ ಪೌಡರ್​, ಉಪ್ಪು ಇವೆಲ್ಲವನ್ನೂ ಸಿಮೆಂಟ್ ಮಿಕ್ಸರ್​ನಲ್ಲಿ ಹಾಕಿ ಮಿಕ್ಸರ್​ ತಿರುಗುತ್ತಾ ತಿರುಗುತ್ತಾ ಹಾಕಿರುವ ಎಲ್ಲಾ ಪದಾರ್ಥಗಳನ್ನು ಸರಿಯಾಗಿ ಮಿಕ್ಸ್​ ಮಾಡಿ ಒಂದು ಹಂತಕ್ಕೆ ಬಂದ ನಂತರ ಅದನ್ನು 4 ಫೀಟ್ ಅಗಲದ ಆಲ್ಯೂಮಿನಿಯಂ ಪಾನ್​ನಲ್ಲಿ ಹಾಕಿದ್ದಾನೆ.

ನೋಡಲು ಕೇಳಲು ಹಾಸ್ಯವೆನಿಸಿದರೂ ಸಹ ಕೊನೆಗೆ ಈ ಫುಡ್ ಇಂಜಿನಿಯರ್ ತಯಾರಿಸಿದ ಚಾಕೊಲೇಟ್​ ಚಿಪ್ ಕುಕ್ಕಿ ಎಲ್ಲರ ಗಮನಸ ಸೆಳೆದಿದೆ. ಸದ್ಯ ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ಈ ಪದಾರ್ಥವನ್ನು ತಯಾರಿಸಲು ಫುಡ್ ಇಂಜಿನಿಯರ್​​ ಕಂಡು ವಿಚಿತ್ರ ದಾರಿಗೆ ಎಲ್ಲರೂ ಹ್ಯಾಟ್ಸ್​ ಆಫ್ ಹೇಳಿದ್ದಾರೆ.

Advertisment