ರಾಜ್ಯಾದ್ಯಂತ ಗೊಂದಲ ಸೃಷ್ಟಿಸಿದ BPL ಕಾರ್ಡ್​ ರದ್ದು.. ಬಡವರಿಗೆ ಸಚಿವ ಮುನಿಯಪ್ಪ ಹೇಳಿದ್ದೇನು?

author-image
admin
Updated On
ರಾಜ್ಯಾದ್ಯಂತ ಗೊಂದಲ ಸೃಷ್ಟಿಸಿದ BPL ಕಾರ್ಡ್​ ರದ್ದು.. ಬಡವರಿಗೆ ಸಚಿವ ಮುನಿಯಪ್ಪ ಹೇಳಿದ್ದೇನು?
Advertisment
  • ಬಿಪಿಎಲ್​ ಕಾರ್ಡ್​ ಬಗ್ಗೆ ಆಹಾರ ಸಚಿವ ಮುನಿಯಪ್ಪ ಹೇಳಿಕೆ
  • ಬಡವರಲ್ಲದವರು ಅರ್ಹರಲ್ಲದವರೂ ಕೂಡ ಸೇರಿಕೊಂಡಿದ್ದಾರೆ
  • ಜನರು ಭಯಪಡಬೇಕಿಲ್ಲ, ಯಾವ ಕಾರ್ಡ್​ ಕೂಡ ರದ್ದಾಗಲ್ಲ

ಬೆಂಗಳೂರು: ಬಡವರ ಬದುಕಿಗೆ ಆಧಾರವಾಗಿರುವ ಬಿಪಿಎಲ್ ರೇಷನ್​ ಕಾರ್ಡ್​​​ ರದ್ದು ವಿಚಾರ ರಾಜ್ಯಾದ್ಯಂತ ಗೊಂದಲಕ್ಕೆ ಕಾರಣವಾಗಿದೆ. ಕೆಲವು ಬಿಪಿಎಲ್ ರೇಷನ್ ಕಾರ್ಡ್ ರದ್ದಿನಿಂದ ಅರ್ಹ ಫಲಾನುಭವಿಗಳು ಕಂಗಾಲಾಗಿದ್ದಾರೆ. ಕಾರ್ಡ್ ರದ್ದಾಗಿರುವ ಲಿಸ್ಟ್ ನೋಡಿ ರೇಷನ್ ಮುಂಗಡಿ ಮುಂದೆ ಬಂದ ಬಂದ ಜನರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕರೇ ಎಚ್ಚರ! ನಿಮ್ಮ BPL ರೇಷನ್​ ಕಾರ್ಡ್​ ಯಾವಾಗ ಬೇಕಾದ್ರೂ ರದ್ದಾಗಬಹುದು 

ಬಿಪಿಎಲ್ ರೇಷನ್​ ಕಾರ್ಡ್​​​ ರದ್ದು ಮಾಡುತ್ತಿರುವುದಕ್ಕೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. ಬಿಪಿಎಲ್​​ ಕಾರ್ಡ್​ ರದ್ದಾಗಲ್ಲ, ಎಪಿಎಲ್​ ಕಾರ್ಡ್​ ರದ್ದಾಗಲ್ಲ. ಶೇಕಡಾ 20-25ರಷ್ಟು BPLಗೆ ಅರ್ಹರಲ್ಲದವರು ಸೇರಿಕೊಂಡಿದ್ದಾರೆ. ಬಡವರಲ್ಲದವರು, ಅರ್ಹರಲ್ಲದವರೂ ಕೂಡ ಸೇರಿಕೊಂಡಿದ್ದಾರೆ. ಜನರು ಭಯಪಡಬೇಕಿಲ್ಲ, ಯಾವ ಕಾರ್ಡ್​ ಕೂಡ ರದ್ದಾಗಲ್ಲ ಎಂದಿದ್ದಾರೆ.

publive-image

15-20 ದಿನಗಳಲ್ಲಿ ಸಂಪೂರ್ಣ ಪರಿಷ್ಕರಣೆ!
ಇನ್ನು, ಬಿಪಿಎಲ್‌ಗೆ ಯಾರು ಅರ್ಹರಲ್ಲವೋ ಅವರು ಎಪಿಎಲ್‌ನಲ್ಲಿ ಇರುತ್ತಾರೆ. ಯಾರಾದರೂ ಬಿಪಿಎಲ್ ಕಾರ್ಡ್ ಬಿಟ್ಟಿದ್ರೆ ಅವರನ್ನ ಮತ್ತೆ ಸೇರಿಸುತ್ತೇವೆ. ಯಾರೂ ಕೂಡ ಭಯ ಪಡಬೇಕಾಗಿಲ್ಲ. ಯಾವ ಕಾರ್ಡ್ ಕೂಡ ರದ್ದು ಆಗೋದಿಲ್ಲ. ಮುಂದಿನ 15-20 ದಿನಗಳಲ್ಲಿ BPL ಕಾರ್ಡ್‌ ಸಂಪೂರ್ಣ ಪರಿಷ್ಕರಣೆ ಆಗುತ್ತದೆ. ಹೊಸ ಕಾರ್ಡ್ ಕೂಡ ಬಿಡುಗಡೆ ಮಾಡುತ್ತೇವೆ ಎಂದು ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

publive-image

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಬಿಪಿಎಲ್ ರೇಷನ್​ ಕಾರ್ಡ್​​​ ರದ್ದು ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. BPL ಕಾರ್ಡ್ ಬಗ್ಗೆ ಬಡವರು ಆತಂಕ ಪಡುವ ಅಗತ್ಯ ಇಲ್ಲ. ಅರ್ಹರ BPL ಕಾರ್ಡ್​ ರದ್ದು ಮಾಡ್ಬೇಡಿ ಅಂತ ನಾನು ಮುನಿಯಪ್ಪಗೆ ಸೂಚನೆಯನ್ನ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಬಡವರಿಗೆ ಕಾರ್ಡ್​ ರದ್ದಾಗಬಾರದು. BPLನವರು ಬಿಟ್ಟೋಗಿದ್ರೆ ಅರ್ಜಿ ಕೊಟ್ಟರೆ ಕಾರ್ಡ್​​ ಕೊಡುತ್ತೇವೆ. ನಮ್ಮ ಸರ್ಕಾರ ಯಾವತ್ತೂ ಬಡವರ ಪರ ಇರುತ್ತೆ. BJPಯಿಂದ ನಾವು ಪಾಠ ಕಲಿಯಬೇಕಿಲ್ಲ, ಅವರು ಶ್ರೀಮಂತ್ರ ಪರ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment