newsfirstkannada.com

ರಾಮೇಶ್ವರಂ ಕೆಫೆ ಹೋಟೆಲ್ ಮೇಲೆ ರೇಡ್‌.. ಅವಧಿ ಮುಗಿದ ಬೇಳೆ, ಹಾಲು, ಮೊಸರು; ಜಿರಳೆ ಕೂಡ ಪತ್ತೆ!

Share :

Published May 24, 2024 at 5:56pm

    ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆ ಹೋಟೆಲ್‌ ಮೇಲೆ ದಾಳಿ

    ಅವಧಿ ಮುಗಿದ 10 ಕೆಜಿ ನಂದಿನಿ ಮೊಸರು, 8 ಲೀಟರ್ ನಂದಿನಿ ಹಾಲು

    ಲೇಬಲ್ ಸರಿಯಾಗಿ ಇಲ್ಲದ ಅಕ್ಕಿ, ಲೇಬಲ್ ಇಲ್ಲದ 300 ಕೆಜಿ ಬೆಲ್ಲ ಪತ್ತೆ

ಹೈದರಾಬಾದ್‌: ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆಗೆ ಸಂಬಂಧಪಟ್ಟ ಹೋಟೆಲ್ ಮೇಲೆ ತೆಲಂಗಾಣ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಫುಡ್‌ ಸೇಫ್ಟಿ ಕಮಿಷನರ್ ತಂಡದ ದಾಳಿ ವೇಳೆ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಅವಧಿ ಮುಗಿದ ಬೇಳೆ ಬಳಸಿ ಅಡುಗೆ ಮಾಡಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಪ್ರಬುದ್ಧ ಕೊಲೆ ಕೇಸ್​​ಗೆ ಕ್ಷಣಕ್ಕೊಂದು ಟ್ವಿಸ್ಟ್​​; ಹಂತಕನ ಪ್ಲಾನ್​​ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ 

ಹೈದರಾಬಾದ್ ಸಮೀಪದ ಮಾದಾಪುರದಲ್ಲಿ ದಿ ರಾಮೇಶ್ವರಂ ಕೆಫೆ ಹೋಟೆಲ್ ಇದೆ. ಈ ಹೋಟೆಲ್‌ನಲ್ಲಿ ಇಂದು ತೆಲಂಗಾಣ ಫುಡ್ ಸೇಫ್ಟಿ ಕಮೀಷನರ್ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಪರಿಶೀಲನೆ ವೇಳೆ ಅವಧಿ ಮುಗಿದ 100 ಕೆಜಿ ಬೇಳೆ ಪತ್ತೆಯಾಗಿದೆ. ಈ ಮಾಹಿತಿಯನ್ನು ತೆಲಂಗಾಣ ಫುಡ್ ಸೇಫ್ಟಿ ಕಮಿಷನರ್‌ ಮಾಹಿತಿ ನೀಡಿದೆ.

ರಾಮೇಶ್ವರಂ ಕೆಫೆಯಲ್ಲಿ ಕಳೆದ ಮಾರ್ಚ್ 2024ರ ಅವಧಿ ಮುಗಿದಿರುವ ಬೇಳೆ ಬಳಸಿ ಅಡುಗೆ ಮಾಡಿರುವುದು ಪತ್ತೆಯಾಗಿದೆ. ಅವಧಿ ಮುಗಿದ 10 ಕೆಜಿ ನಂದಿನಿ ಮೊಸರು, 8 ಲೀಟರ್ ನಂದಿನಿ ಹಾಲು ಕೂಡ ಸಿಕ್ಕಿವೆ.

ಇದನ್ನೂ ಓದಿ: ‘ರಾಮೇಶ್ವರಂ ಕೆಫೆ ಬ್ಲಾಸ್ಟ್​ ಕೇಸಲ್ಲಿ ಬಿಜೆಪಿ ಕೈವಾಡ’- ಬಿಗ್​ ಟ್ವಿಸ್ಟ್​​ ಕೊಟ್ಟ ಸಚಿವ ದಿನೇಶ್‌ ಗುಂಡೂರಾವ್​​! 

ಇದರ ಜೊತೆಗೆ ಲೇಬಲ್ ಸರಿಯಾಗಿ ಇಲ್ಲದ ಅಕ್ಕಿ, ಲೇಬಲ್ ಇಲ್ಲದ 300 ಕೆಜಿ ಬೆಲ್ಲವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅವಧಿ ಮುಗಿದ ದವಸ ಧಾನ್ಯಗಳನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹೋಟೆಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮೆಡಿಕಲ್‌ ಫಿಟನೆಸ್ ಸರ್ಟಿಫಿಕೇಟ್ ಕೂಡ ಇಲ್ಲ ಎಂದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಬರೀ ರಾಮೇಶ್ವರಂ ಕೆಫೆ ಮೇಲೆ ಮಾತ್ರ ಈ ದಾಳಿ ನಡೆದಿಲ್ಲ. ಫುಡ್ ಸೇಫ್ಟಿ ಅಧಿಕಾರಿಗಳು ಹೈದರಾಬಾದ್‌ನ ಬೇರೆ, ಬೇರೆ ಹೋಟೆಲ್‌ಗಳ ಮೇಲೂ ದಾಳಿ ಮಾಡಿ ಆಹಾರ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ರಾಮೇಶ್ವರಂ ಕೆಫೆ ಹೋಟೆಲ್ ಮೇಲೆ ನಡೆದಿರುವ ಈ ದಾಳಿಯ ಮಾಹಿತಿಯನ್ನು ಫುಡ್ ಸೇಫ್ಟಿ ಕಮಿಷನರ್‌ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗಳನ್ನು ನೋಡಿರುವ ಗ್ರಾಹಕರು ಕರ್ನಾಟಕದಲ್ಲೂ ಇದೇ ರೀತಿ ಖ್ಯಾತ ಹೋಟೆಲ್‌ಗಳ ಮೇಲೆ ದಾಳಿ ನಡೆಸಬೇಕು. ಕರ್ನಾಟಕದಲ್ಲೂ ಆಹಾರ ಸುರಕ್ಷತಾ ಕಮೀಷನರ್ ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಿ ಎಂದು ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರಂ ಕೆಫೆ ಹೋಟೆಲ್ ಮೇಲೆ ರೇಡ್‌.. ಅವಧಿ ಮುಗಿದ ಬೇಳೆ, ಹಾಲು, ಮೊಸರು; ಜಿರಳೆ ಕೂಡ ಪತ್ತೆ!

https://newsfirstlive.com/wp-content/uploads/2024/05/Rameshwarama-Cafe-2.jpg

Load More