/newsfirstlive-kannada/media/post_attachments/wp-content/uploads/2024/03/pani-puri-4.jpg)
ಭಾರತದ ಜನಪ್ರಿಯ ಖಾದ್ಯಗಳಲ್ಲಿ ಈ ಪಾನಿಪುರಿ ಕೂಡ ಒಂದು. ಈ ಪಾನಿಪುರಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸಖತ್ ಟೇಸ್ಟ್. ಬಾಯಲ್ಲಿ ಇಟ್ಟರೆ ಕರುಮ್ ಕುರುಮ್. ಹೀಗಾಗಿ ಪಾನಿಪುರಿ ಯುವತಿಯರಿಗಂತೂ ಪಂಚಪ್ರಾಣ. ಎಲ್ಲೇ ಕಂಡರಂತೂ ಬಾಯಿ ಚಪ್ಪರಿಸದೆ ಇರಲಾರರು. ರಸ್ತೆ ಬದಿಯಲ್ಲಿಟ್ಟು ಮಾರಾಟವಾಗುವ ಈ ಪಾನಿಪುರಿಗೆ ಎಲ್ಲಿಲ್ಲದ ಬೇಡಿಕೆ. ಆದರೆ ನಾಲಿಗೆ ರುಚಿ ಹೆಚ್ಚಿಸಲು ಹೋದರೇ ನಿಮ್ಮ ಜೀವಕ್ಕೂ ಬರುತ್ತೆ ಆಪತ್ತು.
ಇದನ್ನೂ ಓದಿ: ಸಾಕಪ್ಪಾ ಸಾಕು ಈ ಸೆರೆವಾಸ.. ಜೈಲಿನಲ್ಲಿ ದರ್ಶನ್ ಮೌನ ವ್ರತಕ್ಕೆ ಶರಣಾಗಲು ಕಾರಣಗಳೇನು?
ಹೌದು, ಗೋಬಿ ಆಯ್ತು, ಕಬಾಬ್ ಆಯ್ತು, ಈಗ ಪಾನಿಪುರಿಗೂ ಕಂಟಕ ಎದುರಾಗಿದೆ. ಪಾನಿಪುರಿಗೆ ಬಳಸುವ ಸಾಸ್ ಮತ್ತು ಮೀಟಾ ಖಾರದ ಪುಡಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇರೋದು ಪತ್ತೆಯಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಬೆಂಗಳೂರು ಸೇರಿದಂತೆ ರಾಜ್ಯದ 79 ಕಡೆ ಪಾನಿಪುರಿ ಮಾದರಿಗಳನ್ನ ಸಂಗ್ರಹ ಮಾಡಿ ಟೆಸ್ಟ್ ಒಳಪಡಿಸಲಾಗಿತ್ತು. ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡ್ತಾ ಇರೋದು ಬೆಳಕಿಗೆ ಬಂದಿದೆ.
ಇನ್ನು, ಆಹಾರ ಮತ್ತು ಸುರಕ್ಷತಾ ಇಲಾಖೆ ಟೆಸ್ಟ್ನಲ್ಲಿ ಸನ್ ಸೆಟ್ ಯಲ್ಲೋ 1, ಸನ್ ಸೆಟ್ ಯಲ್ಲೋ 2 ಜೊತೆಗೆ ಬ್ರಿಲಿಯಂಟ್ ಬ್ರೂ ಮತ್ತು ಕಾರ್ಮೋಸಿಯಸ್ ರಾಸಾಯನಿಕ ಅಂಶ ಬೆರಕೆ ಆಗಿರೋದು ಗೊತ್ತಾಗಿದ್ದು, ಈ ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗಲಿದೆಯಂತೆ. ಹೀಗಾಗಿ, ಕ್ಯಾನ್ಸರ್ ಕಾರಕ ಆಗಿರೋ ಕಲಬೆರಕೆ ಬೆರೆಸಬಾರದು ಅಂತಿದ್ದಾರೆ ತಜ್ಞರು. ಒಟ್ಟಾರೆ ಪಾನಿಪೂರಿ ತಯಾರಿಕೆಯಲ್ಲಿ ಬಳಸುವ ಸಾಸ್ ಹಾಗೂ ಮೀಟಾ ಖಾರನಲ್ಲೂ ಹಾನಿಕಾರಕ ಇರೋದು ಪತ್ತೆಯಾಗಿದ್ದು, ಈ ವಾರದಲ್ಲಿಯೇ ಹಾನಿಕಾರಕ ರಾಸಾಯನಿಕ ಅಂಶಗಳನ್ನ ಬಳಕೆ ಮಾಡದಂತೆ ಬ್ಯಾನ್ ಮಾಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ