ಲೆಬನಾನ್​ ಮೇಲೆ ಬಿಳಿ ವಿಷ ಚೆಲ್ಲುತ್ತಿರುವ ಇಸ್ರೇಲ್​! ಏನಿದು White Phosphorus ? ಬ್ಯಾನ್ ಆಗಿರೋದ್ಯಾಕೆ?

author-image
Gopal Kulkarni
Updated On
ಲೆಬನಾನ್​ ಮೇಲೆ ಬಿಳಿ ವಿಷ ಚೆಲ್ಲುತ್ತಿರುವ ಇಸ್ರೇಲ್​! ಏನಿದು White Phosphorus ? ಬ್ಯಾನ್ ಆಗಿರೋದ್ಯಾಕೆ?
Advertisment
  • ವೈರಿ ರಾಷ್ಟ್ರಗಳ ಮೇಲೆ ಭಯಾನಕ ಬಿಳಿ ವಿಷವನ್ನು ಚೆಲ್ಲುತ್ತಿರುವುದೇಕೆ ಇಸ್ರೇಲ್​?
  • ಅಂತಾರಾಷ್ಟ್ರೀಯ ಕಾನೂನು ಭಯಾನಕ ಅಸ್ತ್ರದ ಪ್ರಯೋಗದ ಬಗ್ಗೆ ಹೇಳುವುದೇನು?
  • ಕಾನೂನು ಕಟ್ಟಳೆಗಳನ್ನು ಮೀರಿ ಇಸ್ರೇಲ್ ಈ ಬಿಳಿ ರಂಜಕದ ದಾಳಿ ಮಾಡ್ತಿರೊದೇಕೆ?

ಇಸ್ರೇಲ್ ತನ್ನ ಯುದ್ಧ ನೀತಿಯನ್ನು ಬದಲಾಯಿಸಿಕೊಂಡಂತೆ ಕಾಣುತ್ತಿದೆ. ಬಾಂಬ್​ ಗುಂಡುಗಳ ಬದಲಿಗೆ ಬಿಳಿ ವಿಷವನ್ನೇ ತನ್ನ ಯುದ್ಧರಂಗಕ್ಕೆ ಇಳಿಸಿದೆ. ಆನ್​ಲೈನ್​ನಲ್ಲಿ ಹರಿದಾಡುತ್ತಿರುವ ವಿಡಿಯೋ ಸದ್ಯ ಈ ಭಯಾನಕ ಸತ್ಯವನ್ನು ಬಹಿರಂಗಗೊಳಿಸುತ್ತಿದೆ. ದಕ್ಷಿಣ ಲೆಬನಾನ್​ನಲ್ಲಿ ಆರ್ಟಿಲರಿಗಳ ಮೂಲಕ ಬಿಳಿ ರಂಜಕದ (white phosphorus )ದಾಳಿ ಮಾಡುತ್ತಿದೆ. ಈ ಒಂದು ಕೆಮಿಕಲ್ ಅದು ಯಾವ ಮಟ್ಟಿಗೆ ಅಪಾಯಕಾರಿ ಅಂದ್ರೆ ಇದು ಬಿದ್ದ ಜಾಗವನ್ನು ಸುಟ್ಟು ಹಾಕುತ್ತದೆ. ಮನುಷ್ಯರು ಮೇಲೆ ಇದು ಬಿದ್ದಲ್ಲಿ ಇಡೀ ಮೈಯೇ ಸುಟ್ಟು ಹೋಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಇಸ್ರೇಲ್​ನ ಆ ಒಂದು ಕನಸು ನನಸಾಗುವ ಸಮಯ ಬಂತಾ? ರಷ್ಯಾದ ಪ್ರಖ್ಯಾತ ರಾಜನೀತಿ ತಜ್ಞ ಈ ಬಗ್ಗೆ ಹೇಳುವುದೇನು?

ಇದರ ಹೊರಸೂಸುವ ಹೊಗೆಯನ್ನು ಮನುಷ್ಯರ ಉಸಿರು ಸೇರಿದಲ್ಲಿ ಹಲವು ಉಸಿರಾಟದ ತೊಂದರೆಗಳು ಆಗುತ್ತವಂತೆ. ಕೆಲವೊಮ್ಮೆ ಮನುಷ್ಯರು ಉಸಿರುಗಟ್ಟಿಸಿಯೇ ಸಾಯಿಸುತ್ತಾರೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದು ಮೈಮೇಲೆ ಬಿದ್ದರೆ ಒಳಚರ್ಮವನ್ನೇ ಸುಟ್ಟು ಹಾಕುವಷ್ಟು ಆಪಾಯಕಾರಿ.


">June 23, 2024


ಇದನ್ನೂ ಓದಿ:ವಿಶ್ವವನ್ನೇ ಇಭ್ಭಾಗ ಮಾಡಿತಾ ಇಸ್ರೇಲ್-ಇರಾನ್ ವಾರ್? ಯಾವ ಯಾವ ರಾಷ್ಟ್ರ ಯಾರ ಬೆನ್ನಿಗೆ ನಿಲ್ಲಲಿವೆ?

ಜನಸಂದಣಿ ಇದ್ದಲ್ಲಿ ಇಂತಹ ಬಿಳಿ ರಂಜಕಗಳ ದಾಳಿಗಳನ್ನು ನಡೆಸಬಾರದು ಅಂತ ಅಂತಾರಾಷ್ಟ್ರೀಯ ಕಾನೂನು ಇದೆ. ಈ ಒಂದು ಅಸ್ತ್ರ ಜನರಿಗೆ ಬೇರೆಯದ್ದೇ ರೀತಿ ಅಪಾಯವನ್ನುಂಟು ಮಾಡುವುದರಿಂದ ಇದನ್ನು ಬ್ಯಾನ್ ಮಾಡಲಾಗಿದೆ. ಆದರೂ ಕೂಡ ಇಸ್ರೇಲ್ ಅಂತಾರಾಷ್ಟ್ರೀಯ ಕಾನೂನುಗಳನ್ನು ಮೀರಿ ಈ ರೀತಿಯ ಅಸ್ತ್ರ ಪ್ರಯೋಗ ಮಾಡುತ್ತಿರುವುದು ಮತ್ತೊಂದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment