newsfirstkannada.com

ಸಿಡಿಲು ಬಡಿದು ಮೈದಾನದಲ್ಲೇ ಫುಟ್ಬಾಲ್​ ಆಟಗಾರ ಸಾವು; ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

Share :

Published February 13, 2024 at 11:50am

Update February 13, 2024 at 11:53am

    ಪುಟ್ಬಾಲ್​ ಮ್ಯಾಚ್​ ವೇಳೆ ನಡೆದ ದುರ್ಘಟನೆ

    ಆಟಗಾರನಿಗೆ ಬಡಿದ ಸಿಡಿಲು, ಸ್ಥಳದಲ್ಲೇ ಸಾವು

    ಸಿಡಿಲು ಬಡಿತಕ್ಕೆ ಆಟಗಾರನ ಜೆರ್ಸಿ ಸುಟ್ಟು ಕರಕಲು

ಮೈದಾನದಲ್ಲಿ ಫುಟ್ಬಾಲ್​ ಆಡುತ್ತಿದ್ದ ವೇಳೆ ಸಿಡಿಲು ಬಡಿದ ಘಟನೆಯೊಂದು ದೃಶ್ಯ ಸಮೇತ ವೈರಲ್​ ಆಗಿದೆ. ಇಂಡೋನೇಷ್ಯಾದ ಸಿಲಿವಾಂಗಿ ಸ್ಟೇಡಿಯಂನಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಡಿಲು ಬಡಿಯುವ ದೃಶ್ಯ ಹರಿದಾಡುತ್ತಿದೆ.

ಸಿಡಿಲು ಬಡಿದ ವೇಳೆ ಆಟಗಾರ ಮೈದಾನದಲ್ಲೇ ಕುಸಿದು ಬಿದ್ದಿದ್ದಾನೆ. ಕುಸಿತದ ಬಳಿಕ ಕೊಂಚ ಹೊತ್ತು ಉಸಿರಾಡಿದ್ದು, ಬಳಿಕ ಸಾವನ್ನಪ್ಪಿದ್ದಾನೆ. ಟ್ವಿಟ್ಟರ್​ನಲ್ಲಿ ಸಿಡಿಲು ಬಡಿಯುವ ಭಯಾನಕ ದೃಶ್ಯ ಹರಿದಾಡುತ್ತಿದೆ.

ಮಾಹಿತಿಯಂತೆ, ಫೆಬ್ರವರಿ 10ರಂದು ನಡೆ ಘಟನೆ ಇದಾಗಿದೆ, ಪಶ್ಚಿಮ ಜಾವಾದ ಬಮಡಂಗ್​ನಲ್ಲಿರುವ ಸಿಲಿವಾಂಗಿ ಸ್ಟೇಡಿಯಂನಲ್ಲಿ ಫುಟ್ಬಾಲ್​ ಪಂದ್ಯ ಏರ್ಪಡಿಸಲಾಗಿತ್ತು. ಈ ಸೌಹಾರ್ದದ ಪಂದ್ಯದ ವೇಳೆ ಏಕಾಏಕಿ ಮಳೆ ಪ್ರಾರಂಭವಾಯಿತು. ಮಳೆ ಪ್ರಾರಂಭವಾದಂತೆ ಆಟಗಾರನಿಗೆ ಸಿಡಿಲು ಬಡಿದಿದೆ. ಸಿಡಿಲು ಬಡಿದ ರಭಸಕ್ಕೆ ಆಟಗಾರನ ಜೆರ್ಸಿಯು ಸುಟ್ಟು ಕರಕಲಾಗಿದೆ. ಆಟಗಾರರನನ್ನು ಸರಿನಿಂಗ್ಸಿಹ್​​ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರು ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಡಿಲು ಬಡಿದು ಮೈದಾನದಲ್ಲೇ ಫುಟ್ಬಾಲ್​ ಆಟಗಾರ ಸಾವು; ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

https://newsfirstlive.com/wp-content/uploads/2024/02/Football.jpg

Load More