ಒಂದೇ ಒಂದು ಕಿಸ್ಸಿಂಗ್‌ ಸೀನ್‌ಗೆ 37 ರೀಟೇಕ್ ತಗೊಂಡ ಹೀರೋ.. ಹೀರೋಯಿನ್ ಮೇಲೆ ಆರೋಪ! ಯಾವುದು ಈ ಸಿನಿಮಾ?

author-image
Gopal Kulkarni
Updated On
ಒಂದೇ ಒಂದು ಕಿಸ್ಸಿಂಗ್‌ ಸೀನ್‌ಗೆ 37 ರೀಟೇಕ್ ತಗೊಂಡ ಹೀರೋ.. ಹೀರೋಯಿನ್ ಮೇಲೆ ಆರೋಪ! ಯಾವುದು ಈ ಸಿನಿಮಾ?
Advertisment
  • ಒಂದೇ ಒಂದು ಕಿಸ್ಸಿಂಗ್​ ಸೀನ್​ಗೆ 37 ರೀಟೇಕ್​ ತೆಗೆದುಕೊಂಡ ನಾಯಕ
  • ಆ್ಯಕ್ಷನ್ ಕಟ್ ಹೇಳಿ ಸಾಕಾಗಿ ಹೋದ ನಿರ್ದೇಶಕರು ಕೊನೆಗೆ ಹೇಳಿದ್ದೇನು?
  • ಇಂದಿಗೂ ಆ ಸಿನಿಮಾ, ಆ ದೃಶ್ಯ ನೆನಪಿಸಿಕೊಳ್ಳುವುದೇಕೆ ಆ ಸಿನಿಮಾದ ನಟ

ಬಾಲಿವುಡ್ ಸಿನಿಮಾಗಳೆಂದರೆನೇ ರೋಮ್ಯಾನ್ಸ್​ಗೆ ಇನ್ನೊಂದು ಹೆಸರು. ಅದರಲ್ಲೂ ಇತ್ತೀಚೆಗೆಂತೂ ಕಿಸ್ಸಿಂಗ್ ಸೀನ್ ಇಲ್ಲದ ಬಾಲಿವುಡ್​ ಸಿನಿಮಾಗಳನ್ನು ಊಹಿಸಿಕೊಳ್ಳುವುದೇ ಕಷ್ಟ ಆ ಮಟ್ಟಕ್ಕೆ ರೋಮ್ಯಾನ್ಸ್​ ತುಂಬಿ ತುಳುತ್ತಿರುತ್ತದೆ. ಇದೇ ಕಿಸ್ಸಿಂಗ್ ಸೀನ್ ವಿಚಾರವಾಗಿ 2014ರಲ್ಲಿ ಬಂದ ಒಂದು ಸಿನಿಮಾ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಆ ಸಿನಿಮಾದ ನಾಯಕ ಒಂದು ಚುಂಬನದ ದೃಶ್ಯಕ್ಕಾಗಿ ಸುಮಾರು 37 ರೀಟೇಕ್ ತೆಗೆದುಕೊಂಡಿದ್ದರು. ಇದರಿಂದ ಬೇಸತ್ತ ಡೈರೆಕ್ಟರ್​ ಹೀರೋನನ್ನು ಬೈದರೆ ಹೀರೋ ಹೀರೋಯಿನ್ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಹೇಳಿದ್ದ.

ನಾವು ಈಗ ಮಾತನಾಡುತ್ತಿರುವುದು 18 ಸಿನಿಮಾಗಳಲ್ಲಿ ನಟಿಸಿ ಅವುಗಳಲ್ಲಿ 8 ಸಿನಿಮಾ ಹಿಟ್​ ಕೊಟ್ಟು 3 ಸಿನಿಮಾಗಳನ್ನು ರೆಕಾರ್ಡ್ ಬ್ರೇಕ್ ಮಾಡಿದ ಚಾಕಲೇಟ್ ಬಾಯ್​ ಆಫ್ ಬಾಲಿವುಡ್ ಸಿನಿಮಾ ಎಂದೇ ಕರೆಸಿಕೊಳ್ಳುವ ಕಾರ್ತಿಕ್ ಆರ್ಯನ್ ಬಗ್ಗೆ. 2014ರಲ್ಲಿ ಇಂತಹದೊಂದು ಘಟನೆ ಕಾಂಚಿ ಸಿನಿಮಾ ಶೂಟಿಂಗ್​ ವೇಳೆ ನಡೆದಿತ್ತು ಕಾರ್ತಿಕ್ ಆರ್ಯನ್ ಜೊತೆ ಮಿಶ್ತಿ ಚಕ್ರವರ್ತಿ ನಟನೆ ಮಾಡುತ್ತಿದ್ದರು.

publive-image

ಇದನ್ನೂ ಓದಿ:ಸಲ್ಮಾನ್ ಖಾನ್ ರಾಕಿ ಸಹೋದರಿಗೆ ಭೀಕರ ಅಪಘಾತ.. ಅಯ್ಯೋ ಏನಾಯ್ತು..?

ಈ ಸಿನಿಮಾಗೆ ಸುಭಾಷ್ ಘೈ ನಿರ್ದದೇಶನವಿತ್ತು. ಈ ಸಿನಿಮಾದಲ್ಲಿ ರೋಮ್ಯಾಂಟಿಕ್ ಹೀರೋ ಆಗಿ ಕಾರ್ತಿಕ್ ಆರ್ಯನ್ ಕಾಣಿಸಿಕೊಂಡಿದ್ದರು. ಆದ್ರೆ ಒಂದೇ ಒಂದು ಚುಂಬನ ದೃಶ್ಯಕ್ಕಾಗಿ ಕಾರ್ತಿಕ್ ಆರ್ಯನ್​ ಸುಮಾರು 37 ರೀಟೇಕ್ ತೆಗೆದುಕೊಂಡಿದ್ದರ ಬಗ್ಗೆ ಇತ್ತೀಚೆಗೆ ಹೇಳಿಕೊಂಡಿದದ್ದಾರೆ. ನಾವು ಅಕ್ಷರಶಃ ಪ್ರೇಮಿಗಳಂತೆ ನಟಿಸಿದ್ದೇವು ಆದ್ರೆ ಕಿಸ್ಸಿಂಗ್ ಸೀನ್ ಇಷ್ಟೊಂದು ತಲೆನೋವು ತಂದಿಡುತ್ತೆ ಅಂತ ಗೊತ್ತಿರಲಿಲ್ಲ. ನಾವು ಒಟ್ಟು 37 ರೀಟೇಕ್ ತೆಗೆದುಕೊಂಡಿದ್ದೇವು. ಕೊನೆಗೆ ನಿರ್ದೇಶಕ ಸುಭಾಷ್ ಅವರು ಓಕೆ ಹೇಳಿದಾಗ ನಮಗೆ ನಿರಾಳವೆನಿಸಿತ್ತು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಸ್ಟಾರ್​ ಡೈರೆಕ್ಟರ್​ SS ರಾಜಮೌಳಿ ಸ್ಟ್ರಾಟಜಿ ಬಳಸಿದ ರಾಮ್ ಚರಣ್.. ಏನ್ ಮಾಡಿದ್ರು ಗೊತ್ತಾ?

ಈ ಅನುಭವದ ಬಗ್ಗೆ ಜೋಕ್ ಮಾಡಿರುವ ಕಾರ್ತಿಕ್ ಆಗ ನನಗೆ ಮಿಸ್ತಿ ಬೇಕಂತಲೇ ಹೀಗೆ ಮಾಡುತ್ತಿದ್ದಾಳೆ ಎನಿಸಿತ್ತು ಸುಭಾಷ್​ ಘೈಗೆ ಆ ಒಂದು ಸೀನ್​ನಲ್ಲಿ ತುಂಬಾ ಪ್ಯಾಷನೆಟ್​ ಕಿಸ್​​ ಇರುವಂತ ದೃಶ್ಯವನ್ನು ಸೆರೆಹಿಡಿಯುವುದಿತ್ತು. ನಿಜವಾಗಿಯೂ ನನಗೆ ಹೇಗೆ ಮಾಡಬೇಕು ಎಂದು ಗೊತ್ತಿರಿಲ್ಲ. ಕೊನೆಗೆ ಮಿಸ್ತಿಯೇ ಬಂದು ಯಾಕೆ ನೀವೇ ನನಗೆ ಹೇಗೆ ಕಿಸ್ ಕೊಡಬೇಕು ಎಂದು ಕಲಿಸಬಾರದು ಎಂದು ಕೇಳಿದ್ದಳು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment