/newsfirstlive-kannada/media/post_attachments/wp-content/uploads/2024/09/PAK-ARMY-ON-KARGIL-WAR.jpg)
ಇಸ್ಲಾಮಾಬಾದ್: ಕಾರ್ಗಿಲ್ ವಿಜಯೋತ್ಸವಕ್ಕೆ ಈಗ 25 ವರ್ಷಗಳ ಸಂಭ್ರಮ. 1947 ರಿಂದಲೂ ಕಾಶ್ಮೀರದ ಮೇಲೆ ಕಣ್ಣಿಟ್ಟಿರುವ ಪಾಕಿಸ್ತಾನ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆ ನೆಲದ ಮೇಲೆ ಒಂದು ಯುದ್ಧವನ್ನು ಸದಾ ಜಾರಿಯಲ್ಲಿಟ್ಟಿದೆ. ಒಳಗೆ ಬಂದು ಎರಡೆರಡು ಸಲ ಅಟ್ಟಾಡಿಸಿ ಹೊಡಿಸಿಕೊಂಡ ಮೇಲೆ, ಪಾಕ್ ಭಯೋತ್ಪಾದನೆ ಎಂಬ ವಿಷ ಕಳೆಯನ್ನು ಕಾಶ್ಮೀರದ ಸುತ್ತಲೂ ಬೆಳೆಸುತ್ತಾ ಹೋಯಿತು. ಕಾಶ್ಮೀರವೆಂಬ ಸದಾ ಶ್ವೇತ ಹಿಮವನ್ನು ಹೊದ್ದುಕೊಂಡಿರುವ ಈ ಭೂಮಿ ಕುಡಿದು ಉಗುಳುವಷ್ಟು ರಕ್ತವನ್ನು ಕಂಡಿದೆ.
ಇದನ್ನೂ ಓದಿ:ದೇಶದ್ರೋಹ.. ಚಿನ್ನದ ಪದಕ ಕೈ ತಪ್ಪಿದ್ದು ಹೇಗೆ? ವಿನೇಶ್ ಫೋಗಟ್ ಮೇಲೆ ಬ್ರಿಜ್ ಭೂಷಣ್ ಗಂಭೀರ ಆರೋಪ
ಇದೇ ನೆಲ 1999ರಲ್ಲಿ ಕಾರ್ಗಿಲ್ನಲ್ಲಿ ರಣಭಯಂಕರ ಯದ್ಧವನ್ನು ಕಂಡಿದೆ. ಒಂದು ಕಡೆ ಪಾಕಿಸ್ತಾನ್ ಭಾರತ್ ಭಾಯಿ ಭಾಯಿ ಎಂದೇ ಕೂಗಿದ್ದ ಪಾಕ್. ಹಿಂದಿನಿಂದ ತನ್ನ ಸೈನಿಕರನ್ನು ಕಳುಹಿಸಿ ಕಾರ್ಗಿಲ್ ಬೆಟ್ಟದ ಮೇಲೆ ನಿಂತು ಭಾರತೀಯ ಸೈನಿಕರು ಸಿದ್ಧಪಡಿಸಿದ್ದ ರಸ್ತೆಗಳನ್ನು ಧ್ವಂಸಗೊಳಿಸುವ ಮೂಲಕ ಹೊಸ ಯುದ್ಧಕ್ಕೆ ಮುನ್ನುಡಿ ಬರೆಯಿತು. ಮೇ 3 ರಿಂದ ಆರಂಭವಾದ ಯುದ್ಧ ನಿರಂತರ ಎರಡು ತಿಂಗಳು ಮೂರು ವಾರ ಎರಡು ದಿನಗಳವರೆಗೆ ಅಂದ್ರೆ ಜುಲೈ 26ವರೆಗೆ ನಡೆಯಿತು. ಭಾರತದ ಭೀಕರ ದಾಳಿಗೆ ತತ್ತರಿಸಿ ಹೋದ ಪಾಕ್ ಸೇನೆ ದಿಕ್ಕಾಪಾಲಾಗಿ ಓಡಿತ್ತು. ಕ್ಯಾಪ್ಟನ್ ವಿಕ್ರಮ್ ಬಾತ್ರಾರಂತಹ ರಣಕಲಿಗಳ ಭೀಕರ ಹೋರಾಟದಿಂದಲೇ, ವೀರ ಮರಣದಿಂದ ಕಾರ್ಗಿಲ್ನಲ್ಲಿ ಭಾರತ ತನ್ನ ವಿಜಯ ಸ್ಥಾಪಿಸಿತು. ಕಾರ್ಗಿಲ್ ವಿರುದ್ಧದ ಈ ಹೋರಾಟಕ್ಕೆ ಆಪರೇಷನ್ ವಿಜಯ್ ಎಂದೇ ಹೆಸರಿಡಲಾಗಿತ್ತು. ಇದೆಲ್ಲಾ ನಡೆದು ಈಗ 25 ವರ್ಷಗಳೇ ಕಳೆದಿವೆ.
ಇದನ್ನೂ ಓದಿ:ಸೈನೈಡ್ ಮಲ್ಲಿಕಾ ಅಕ್ಕ-ತಂಗಿಯರಾ ಇವ್ರು.. ಆಂಧ್ರದಲ್ಲಿ ನಾಲ್ವರ ಹ*ತ್ಯೆ; ಕಾಂಬೋಡಿಯಾಗೆ ಎಸ್ಕೇಪ್!
25 ವರ್ಷದಿಂದ ಸಿಂಧು ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. ಪಾಕಿಸ್ತಾನದ ರಾಜಕಾರಣದಲ್ಲಿ ನೂರೆಂಟು ಬದಲಾವಣೆ ಆಗಿವೆ. ಆದ್ರೆ ಅಂದಿನಿಂದ ಇಂದಿನವರೆಗೂ ಪಾಕ್ ಮಾತ್ರ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೈನಿಕರ ಪಾತ್ರವಿಲ್ಲ ಎಂದಲೇ ವಾದಿಸುತ್ತಾ ಬಂದಿತ್ತು. ಅದೊಂದು ಕಾಶ್ಮೀರದ ಸ್ಥಳೀಯ ಉಗ್ರ ಮುಜಾಹಿದಿನ್ಗಳಿಂದ ನಡೆದ ಯುದ್ಧ, ಕಾರ್ಗಿಲ್ ಯುದ್ಧಕ್ಕೂ ನಮ್ಮ ಸೇನೆಗೂ ಯಾವುದೇ ಸಂಬಂಧವಿಲ್ಲ ತನ್ನ ಸೇನೆ ಆ ಯುದ್ಧದಲ್ಲಿ ಭಾಗಿಯೇ ಆಗಿಲ್ಲ ಎಂದೇ ವಾದಿಸುತ್ತಿತ್ತು. ಕಾರ್ಗಿಲ್ ಬೆಟ್ಟದಲ್ಲಿ ಬಿದ್ದಿದ್ದ ತನ್ನ ಸೈನಿಕರ ಶವವನ್ನು ಕೂಡ ತೆಗೆದುಕೊಂಡು ಹೋಗಲು ಪಾಕಿಸ್ತಾನ ಸಿದ್ಧವಾಗಲಿಲ್ಲ. ಈಗ 25 ವರ್ಷಗಳ ನಂತರ 1999ರಲ್ಲಿ ನಡೆದ ಯುದ್ಧದಲ್ಲಿ ತನ್ನ ಸೇನೆಯ ಪಾತ್ರವಿತ್ತು ಎಂದು ಒಪ್ಪಿಕೊಳ್ಳುತ್ತಿದೆ.
ಇದನ್ನೂ ಓದಿ:ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನ; ಕೂಡಲೇ ಅಪ್ಲೇ ಮಾಡಿ; ಸ್ಯಾಲರಿ ಎಷ್ಟು ಗೊತ್ತಾ?
ಖುದ್ದು ಪಾಕಿಸ್ತಾನದ ಸೇನೆಯೇ ಈ ಮಾತನ್ನು ಈಗ 25 ವರ್ಷಗಳ ಬಳಿಕ ಒಪ್ಪಿಕೊಳ್ಳುತ್ತಿದೆ. ರಾವಲ್ಪಿಂಡಿಯಲ್ಲಿ ನಡೆದ ರಾಷ್ಟ್ರೀಯ ರಕ್ಷಣಾ ದಿನದ ಪ್ರಯುಕ್ತವಾಗಿ ಮಾತನಾಡಿದ ಪಾಕ್ನ ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಮಾತನಾಡುತ್ತಾ. ನಮ್ಮ ದೇಶದ ಸೈನಿಕರು 1947, 1965, 1971 ಹಾಗೂ 1999ರಲ್ಲಿ ನಡೆದ ಭೀಕರ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡುವ ಮೂಲಕ ದೇಶದ ರಕ್ಷಣೆ ಮಾಡಿದ್ದಾರೆ ಎಂದು ಮುನೀರ್ ಹೇಳಿದ್ದಾರೆ.
ಪಾಕಿಸ್ತಾನ ಸೇನೆ ಈ ದೇಶ ಹಾಗೂ ಇಸ್ಲಾಂಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದು ಹೇಳಿದ ಮುನೀರ್ ತಮ್ಮ ಭಾಷಣದಲ್ಲಿ 1999ರ ಕಾರ್ಗಿಲ್ ಯುದ್ಧವನ್ನು ಪ್ರಸ್ತಾಪಿಸಿದ್ದಾರೆ. ಈ ಮೂಲಕ ಪಾಕಿಸ್ತಾನದ ಸೇನೆ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕವಾಗಿ ನಮ್ಮ ಸೇನೆ ಕಾರ್ಗಿಲ್ ಯುದ್ಧದಲ್ಲಿ ಭಾಗವಾಗಿತ್ತು ಎಂದು ಹೇಳಿದೆ. ಮೊಟ್ಟ ಮೊದಲ ಬಾರಿಗೆ ಒಂದು ಸತ್ಯವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ