newsfirstkannada.com

ಪ್ರತ್ಯೇಕ ದೇಶದ ಹೇಳಿಕೆಗೆ ಡಿ.ಕೆ. ಸುರೇಶ್ ಸ್ಪಷ್ಟನೆ; ನನಗೂ ಪ್ರಶ್ನಿಸುವ ಹಕ್ಕು ಇದೆ ಎಂದ ಸಂಸದ

Share :

Published February 2, 2024 at 6:32am

  ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಡಿ.ಕೆ.ಸುರೇಶ್

  ನಾನು ದೇಶ ವಿಭಜನೆ ಬಗ್ಗೆ ಮಾತನಾಡಿಲ್ಲ ಎಂದ ಸಂಸದ

  ರಾಜ್ಯಕ್ಕೆ ಅನ್ಯಾಯ ಆಗ್ತಿರೋದ್ರಿಂದ ಧ್ವನಿ ಎತ್ತಿದ್ದೇನೆ ಅದರಲ್ಲಿ ತಪ್ಪೇನಿದೆ

ದಕ್ಷಿಣ ಭಾರತವನ್ನ ಪ್ರತ್ಯೇಕ ರಾಷ್ಟ್ರ ಮಾಡ್ಬೇಕು ಎಂಬ ಧ್ವನಿ ಎತ್ತಿದ್ದ ಸಂಸದ ಡಿ.ಕೆ. ಸುರೇಶ್ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ. ನನಗೂ ಪ್ರಶ್ನಿಸುವ ಹಕ್ಕು ಇದೆ ಎನ್ನುತ್ತಾ ನನ್ನ ಮಾತನ್ನ ತಿರುಚಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಕರ್ನಾಟಕಕ್ಕೆ ಅನ್ಯಾಯ ಎನ್ನುತ್ತಾ ಮಾತಿಗೆ ಸಮರ್ಥನೆ

ದೇಶದಲ್ಲೇ ಅತೀ ಹೆಚ್ಚು ತೆರಿಗೆ ಹಣ ಕಟ್ಟುವ ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಆಗುತ್ತಿದೆ ಎಂಬ ಕೂಗು ಹೊಸದೇನಲ್ಲ.. ಈ ವಿಷಯವಾಗಿ ಪ್ರತ್ಯೇಕ ದೇಶ ಅಥವಾ ಪ್ರತ್ಯೇಕ ದಕ್ಷಿಣ ಭಾರತದ ಕೂಗು ಸಹ ಆಗಾಗ ಕೇಳಿಬರುತ್ತದೆ. ಕೇಂದ್ರ ಸರ್ಕಾರದ ಮಧ್ಯಂತರ ಬಟೆಜ್ ಬಗ್ಗೆ ಟೀಕಿಸುವ ಭರದಲ್ಲಿ ಕಾಂಗ್ರೆಸ್​ ಸಂಸದ ಡಿ.ಕೆ.ಸುರೇಶ್​ ಪ್ರತ್ಯೇಕ ರಾಷ್ಟ್ರದ ಕೂಗು ಏಳುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಕಾಂಗ್ರೆಸ್​ ಸಂಸದರ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ರು. ವಿವಾದದ ಬೆನ್ನಲ್ಲೇ ಡಿ.ಕೆ.ಸುರೇಶ್​ ಸ್ಪಷ್ಟನೆ ನೀಡಿದ್ದು, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಡಿ.ಕೆ.ಸುರೇಶ್​ ನಾನು ದೇಶ ವಿಭಜನೆ ಬಗ್ಗೆ ಮಾತನಾಡಿಲ್ಲ. ಅದರ ಬಗ್ಗೆ ಜನರೇ ಹೇಳುತ್ತಿದ್ದಾರೆ. ನಮ್ಮ ಅನುದಾನವನ್ನು ಸರಿಯಾಗಿ ನೀಡದೇ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ. ಈಗಾಗಲೇ ತಮಿಳುನಾಡಿನಲ್ಲಿ ಕೂಗು ಎದ್ದಿದೆ. ಪ್ರತ್ಯೇಕತೆ ಕೂಗು ಕರ್ನಾಟಕದಲ್ಲಿ ಕೇಳಬಾರದು ಅನ್ನೋದು ನನ್ನ ಅಭಿಪ್ರಾಯ. ಆದ್ರೆ, ನನ್ನ ಹೇಳಿಕೆಯನ್ನ ಷಡ್ಯಂತ್ರ ಮಾಡಿ ತಿರುಚಿದ್ದಾರೆ ಎಂದು ಕಿಡಿಕಾರಿದ್ರು.

ಕನ್ನಡ ವಿಷಯ ಪ್ರಸ್ತಾಪಿಸಿ ಕೇಂದ್ರಕ್ಕೆ ಡಿ.ಕೆ.ಸುರೇಶ್​ ಠಕ್ಕರ್

ನಾನು ಭಾರತೀಯ ಅನ್ನೋದನ್ನ ಮರೆತಿಲ್ಲ ಅದೇ ರೀತಿ ನಾನು ಕನ್ನಡಿಗ ಅನ್ನೋದನ್ನೂ ಮರೆಯಲು ಆಗೋದಿಲ್ಲ. ರಾಜ್ಯಕ್ಕೆ ಅನ್ಯಾಯ ಆಗ್ತಿರೋದ್ರಿಂದ ಧ್ವನಿ ಎತ್ತಿದ್ದೇನೆ ಅದರಲ್ಲಿ ತಪ್ಪೇನಿದೆ. ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರ ಅಂತ ದಕ್ಷಿಣದಲ್ಲಿ ಹಿಂದಿ ಏರಿಕೆ ಮಾಡ್ತಿದೆ. ಆದ್ರೆ. ಉತ್ತರ ಭಾರತದಲ್ಲಿ ತ್ರಿಭಾಷಾ ಸೂತ್ರ ಅಳವಡಿಸಿದ್ದಾರಾ ಎಂದು ಪ್ರಶ್ನೆ ಮಾಡಿದ್ರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ಪದೇ ಪದೇ ಅನ್ಯಾಯ ಆಗ್ತಿದೆ ಎಂದು ವಾಗ್ದಾಳಿ ನಡೆಸಿದ್ರು.

ರಾಜ್ಯ ಬಿಜೆಪಿ ನಾಯಕರ ವಿರುದ್ಧವೂ ಡಿಕೆ ಸುರೇಶ್​ ಕಿಡಿ

ಡಿ.ಕೆ.ಸುರೇಶ್​ ಕ್ಷಮೆಯಾಚನೆಗೆ ಆಗ್ರಹಿಸಿರುವ ರಾಜ್ಯ ಬಿಜೆಪಿ ನಾಯಕರಿಗೂ ಡಿ.ಕೆ.ಸುರೇಶ್​ ತಿರುಗೇಟು ನೀಡಿದ್ದಾರೆ. ಬಿಜೆಪಿಯ ಶಾಸಕರೇ ಪ್ರತ್ಯೇಕ ಕರ್ನಾಟಕದ ಕೂಗು ಹಾಕಿದಾಗ ಇವರೆಲ್ಲ ಎಲ್ಲಿ ಹೋಗಿದ್ರು. ನನ್ನ ರಾಷ್ಟ್ರೀಯತೆಯನ್ನು ಪ್ರಶ್ನಿಸುವ ಹಕ್ಕು ಬಿಜೆಪಿಗರಿಗೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇನ್ನು ಡಿ.ಕೆ.ಸುರೇಶ್​ ಅವರ ಪ್ರತ್ಯೇಕ ರಾಷ್ಟ್ರದ ಮಾತಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಖಂಡನೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ನವರಿಗೆ ದೇಶದ ಅಖಂಡತೆ ಬಗ್ಗೆ ಗೌರವ ಇದ್ರೆ ಡಿ.ಕೆ.ಸುರೇಶ್​ಅವರನ್ನು ಈ ಕೂಡಲೇ ಪಕ್ಷದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಒಟ್ಟಾರೆ ಕರ್ನಾಟಕಕ್ಕೆ ಅನ್ಯಾಯ ಆಗ್ತಿರೋದನ್ನು ಪ್ರಶ್ನಿಸಿದ್ದೇನೆ ಎನ್ನುವ ಮೂಲಕ ತಮ್ಮ ಹೇಳಿಕೆಯನ್ನ ಡಿ.ಕೆ.ಸುರೇಶ್​ ಸಮರ್ಧಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರತ್ಯೇಕ ದೇಶದ ಹೇಳಿಕೆಗೆ ಡಿ.ಕೆ. ಸುರೇಶ್ ಸ್ಪಷ್ಟನೆ; ನನಗೂ ಪ್ರಶ್ನಿಸುವ ಹಕ್ಕು ಇದೆ ಎಂದ ಸಂಸದ

https://newsfirstlive.com/wp-content/uploads/2024/02/DK-Suresh.jpg

Load More