ಬಿಗ್​ಬಾಸ್​ ಇತಿಹಾಸದಲ್ಲೇ ಮೊದಲು.. ಕ್ಯಾಪ್ಟನ್ಸಿ ಪಟ್ಟಕ್ಕೆ ಸ್ಪರ್ಧಿಗಳ ಮಧ್ಯೆ ನಡೆದ ಭಾರೀ ಜಿದ್ದಾಜಿದ್ದಿ ಹೇಗಿತ್ತು?

author-image
Veena Gangani
Updated On
BBK11: ಭವ್ಯಾ, ತ್ರಿವಿಕ್ರಮ್​ ಮಧ್ಯೆ ಸಖತ್​ ಪ್ಲಾನ್​; ಮೋಕ್ಷಿತಾ ಹೇಳಿಕೆಗೆ ಕಕ್ಕಾಬಿಕ್ಕಿಯಾಯ್ತು ಈ ಜೋಡಿ
Advertisment
  • ಈ ವಾರದ ಕ್ಯಾಪ್ಟನ್ಸಿ ಪಟ್ಟವನ್ನು ಹೇಗೆ ನಿಭಾಯಿಸುತ್ತಾರೆ ಈ ಇಬ್ಬರು
  • ಮನೆಯ ಜೋಡಿ ಸ್ಪರ್ಧಿಗಳಿಗೆ ಬಿಗ್​ಬಾಸ್​ ಕೊಟ್ಟಿದ್ದ ಟಾಸ್ಕ್​ ಏನು?
  • ಕ್ಯಾಪ್ಟನ್ಸಿ ಟಾಸ್ಕ್​ಗೆ ಜೋಡಿಯಾಗಿ ಆಯ್ಕೆಯಾದವರು ಯಾರು ಯಾರು?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಶುರುವಾಗಿ ಮೂರು ವಾರ ಕಳೆದಿದೆ. ಈ 24 ದಿನಗಳಲ್ಲಿ ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 15 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ.

ಇದನ್ನೂ ಓದಿ:ಫುಟ್ ಬಾಲ್ ಪ್ಲೇಯರ್ ಜತೆ ಎಂಗೇಜ್ ಆದ ನಟಿ ಮಾನಸಾ ಮನೋಹರ್; ಹುಡುಗ ಇವರೇ ನೋಡಿ

publive-image

ಇನ್ನೂ ನಾಲ್ಕನೇ ವಾರಕ್ಕೆ ಬಿಗ್​ಬಾಸ್​ ಮನೆಯ ಎಲ್ಲಾ ಸ್ಪರ್ಧಿಗಳಿಗೂ ಕ್ಯಾಪ್ಟನ್ಸಿ ಟಾಸ್ಕ್​ ಆಡಲು ಅನು ಮಾಡಿಕೊಟ್ಟಿದ್ದಾರೆ. ಬಿಗ್​ಬಾಸ್​ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಈ ವಾರ ದೊಡ್ಮನೆಯಲ್ಲಿ ಜೋಡಿ ಕ್ಯಾಪ್ಟನ್ ಆಯ್ಕೆ ಆಗಿದ್ದಾರೆ ಈ ಇಬ್ಬರು.

ಬಿಗ್​ಬಾಸ್​ ಕೊಟ್ಟ ಟಾಸ್ಕ್​ ಏನು?

publive-image

ಗಾರ್ಡನ್ ಏರಿಯಾದಲ್ಲಿ ಅಳವಡಿಸಲಾದ ಸಮಯ ಸೂಚಿಸುವ ಮುಳ್ಳುಗಳನ್ನು ತಳ್ಳುತ್ತಾ ಜೊತೆಗೆ ತಾವು ಸುತ್ತುತ್ತಾ, 17 ನಿಮಿಷಗಳನ್ನು ಏಣಿಸಬೇಕು. ಜೋಡಿಗಳು 17 ನಿಮಿಷ ಮುಗಿದಿದೆ ಎಂದು ಭಾವಿಸಿದರೇ ಗಡಿಯಾರದಿಂದ ಕಳೆಗೆ ಇಳಿದು ಪಕ್ಕದಲ್ಲಿ ಇರುವ ಗಂಟೆ ಬಾರಿಸಿಬೇಕು. ಆದರೆ ಇದರ ಮಧ್ಯೆ ಪ್ರತಿ ಸ್ಪರ್ಧಿಗಳು ಅವರ ಏಕಾಗ್ರತೆಯನ್ನು ಕಳೆದುಕೊಳ್ಳುವಂತೆ ಮಾಡಬಹುದು ಎಂದು ಬಿಗ್​ಬಾಸ್​ ತಿಳಿಸಿದ್ದರು.

ಇದನ್ನೂ ಓದಿ:ಫುಟ್ ಬಾಲ್ ಪ್ಲೇಯರ್ ಜತೆ ಎಂಗೇಜ್ ಆದ ನಟಿ ಮಾನಸಾ ಮನೋಹರ್; ಹುಡುಗ ಇವರೇ ನೋಡಿ

publive-image

ಬಿಗ್​ಬಾಸ್​ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಆಗಮಿಸಿದ ಹನುಮಂತ ಅವರನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಸ್ಪರ್ಧಿಗಳು ಈ ಕ್ಯಾಪ್ಟನ್ಸಿ ಟಾಸ್ಕ್​ ಅನ್ನು ಆಡಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್​ಗೆ ಜೋಡಿಯಾಗಿ ಆಯ್ಕೆಯಾದವರು, ಶಿಶಿರ್​ ಹಾಗೂ ಸುರೇಶ್​, ಭವ್ಯಾ ಗೌಡ ಹಾಗೂ ಧನರಾಜ್​, ಅನುಷಾ ಹಾಗೂ ಉಗ್ರಂ ಮಂಜು, ಐಶ್ವರ್ಯಾ ಹಾಗೂ ತ್ರಿವಿಕ್ರಮ್​, ಚೈತ್ರಾ ಹಾಗೂ ಮಾನಸ, ಹಂಸ ಹಾಗೂ ಧರ್ಮ ಕೀರ್ತಿರಾಜ್​, ಮೋಕ್ಷಿತಾ ಹಾಗೂ ಗೌತಮಿ ಸೆಲೆಕ್ಟ್ ಮಾಡಿಕೊಂಡಿದ್ದರು.

publive-image

ಸದ್ಯ ಜೋಡಿಗಳ ಪೈಕಿ ಬಿಗ್​ಬಾಸ್​ ಕ್ಯಾಪ್ಟನ್​ ಪಟ್ಟವನ್ನು ಐಶ್ವರ್ಯಾ ಹಾಗೂ ತ್ರಿವಿಕ್ರಮ್​​ ಅಲಂಕರಿಸಿದ್ದಾರೆ. ಬಿಗ್​ಬಾಸ್​ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕನ್ನಡ ಬಿಗ್​ಬಾಸ್​ ಮನೆಯಲ್ಲಿ ಜೋಡಿ ಕ್ಯಾಪ್ಟನ್​ ಆಗಿ ಐಶ್ವರ್ಯಾ ಹಾಗೂ ತ್ರಿವಿಕ್ರಮ್​ ಆಯ್ಕೆಯಾಗಿದ್ದಾರೆ. ಇನ್ನೂ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ ಐಶ್ವರ್ಯಾ ಹಾಗೂ ತ್ರಿವಿಕ್ರಮ್ ಈ ಒಂದು ವಾರ ಹೇಗೆ ಮನೆಯನ್ನು ನಿಭಾಹಿಸುತ್ತಾರೆ ಅಂತ ಕಾದು ನೋಡಬೇಕಿದೆ.​

ಇನ್ನು, ಬಿಗ್​ಬಾಸ್​ ಕೊಟ್ಟಿದ್ದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಜೋಡಿ ಸ್ಪರ್ಧಿಗಳು ಗೆಲುವು ಸಾಧಿಸಲು ಸಾಕಷ್ಟು ಶ್ರಮ ಪಟ್ಟಿದ್ದರು. ಒಂದು ಜೋಡಿ ಆಟವಾಡುತ್ತಿದ್ದಾಗ, ಮತ್ತೊಂದು ಜೋಡಿ ಏಕಾಗ್ರತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತಿದ್ದರು. ಜೊತೆಗೆ ಟಾಸ್ಕ್ ಆಡುತ್ತಿದ್ದವರ ಮೇಲೆ ನೀರು ಹಾಕುತ್ತಿದ್ದರು. ಜೊತೆಗೆ ಅವರು ಗಡಿಯಾದ ಕೈ ಬಿಡಲೇಂದು ಎಣ್ಣೆ ಕೂಡ ಹಾಕಿ ಅವರ ಏಕಾಗ್ರತೆ ಹುಸಿ ಮಾಡುತ್ತಿದ್ದರು. ಇಷ್ಟಾದರೂ ಐಶ್ವರ್ಯಾ ಹಾಗೂ ತ್ರಿವಿಕ್ರಮ್​​ ತಮ್ಮ ಛಲವನ್ನು ಬಿಡದೇ 19 ನಿಮಿಷದವರೆಗೂ ಸಮಯ ಸೂಚಿಸುವ ಮುಳ್ಳುಗಳನ್ನು ತಳ್ಳುತ್ತಾ ಜೊತೆಗೆ ತಾವು ಸುತ್ತುತ್ತಾ ಕ್ಯಾಪ್ಟನ್ಸಿ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment