/newsfirstlive-kannada/media/post_attachments/wp-content/uploads/2025/03/DEVADAS-MOVIE-3.jpg)
ಅದು ಮೂರು ಸೂಪರ್ಸ್ಟಾರ್ಗಳು ಏಕಕಾಲಕ್ಕೆ ಸಮ್ಮಿಲನವಾಗಿ ತೆರೆಗೆ ಬಂದ ಸಿನಿಮಾ. 2002ರಲ್ಲಿ ಬಂದ ಈ ಸಿನಿಮಾ ದೊಡ್ಡ ಮಟ್ಟದ ಅಲೆ ಎಬ್ಬಿಸಿತ್ತು. ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಹಾಗೂ ಐಶ್ವರ್ಯ ರೈ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಒಂದು ಸಿನಿಮಾದಿಂದಾಗಿ ಮುಂಬೈನಲ್ಲಿ ಅನೇಕ ಮದುವೆಗಳು ಮುಂದೂಡಬೇಕಾದ ಪ್ರಸಂಗ ಬಂತು. ಇದು ಸುಮಾರು ಎರಡು ದಶಕಗಳ ಹಿಂದಿನ ಮಾತು. ಈ ಸಿನಿಮಾದ ಶೂಟಿಂಗ್ ಮುಗಿಯುವವರೆಗೂ ಮುಂಬೈನಲ್ಲಿ ಅನೇಕ ಮದುವೆಗಳನ್ನು ಪೋಸ್ಟ್ಪೋನ್ ಆಗಿದ್ದವು.
ಯಾವುದು ಆ ಚಿತ್ರ ಅಂತ ಯೋಚನೆ ಮಾಡ್ತಾ ಇದ್ದೀರಾ ಆ ಸಿನಿಮಾದ ಹೆಸರು ದೇವದಾಸ್. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನವಿರುವ , ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಹಾಗೂ ಐಶ್ವರ್ಯ ರೈ ನಟನೆಯ ಸಿನಿಮಾ ಅಂದಿನ ಕಾಲಕ್ಕೆ ದೊಡ್ಡ ಮಟ್ಟದ ಬಜೆಟ್ನೊಂದಿಗೆ ಅಂದು ಸಿದ್ಧಗೊಂಡಿತ್ತು. ದೇವದಾಸ್ ಸಿನಿಮಾವನ್ನು ದೊಡ್ಡ ದೊಡ್ಡ ಮಹಲುಗಳಲ್ಲಿ ಶೂಟ್ ಮಾಡಲಾಗಿದೆ. ಆ ಮಹಲುಗಳಿಗೆ ಝೂಮರ್ ಅಂದ್ರೆ ತೂಗುದೀಪಗಳನ್ನು ಅಳವಡಿಸಬೇಕಾಗಿತ್ತು. ಅದಕ್ಕಿಂತಲೂ ಹೆಚ್ಚು ಲೈಟಿಂಗ್ ಬಗ್ಗೆ ಹೆಚ್ಚು ಗಮನವಿರಿಸಲಾಗಿತ್ತು. ಲೈಟಿಂಗ್ ಮೂಲಕವೇ ಇಡೀ ಮಹಲ್ಗಳನ್ನು ವೈಭವವಾಗಿ ತೋರಿಸಬೇಕಾಗಿತ್ತು. ಆದ್ರೆ ಆ ಸಮಯದಲ್ಲಿ ಶೂಟಿಂಗ್ಗೆ ಹೆಚ್ಚು ವಿದ್ಯುತ್ ಶಕ್ತಿ ಬೇಕಾಗಿತ್ತು ಮತ್ತು ಅವಶ್ಯಕತೆಯೂ ಇತ್ತು.
ಇದನ್ನೂ ಓದಿ:ಅಂಬರೀಶ್ ಮೊಮ್ಮಗನಿಗೆ ಕಿಚ್ಚ ಸುದೀಪ್ ಕೊಟ್ಟ ಗಿಫ್ಟ್ ಏನು? ನಾಮಕರಣದ ಫೋಟೋಗಳು ಇಲ್ಲಿವೆ!
ಈ ಸಿನಿಮಾದ ಕೊರಿಯೋಗ್ರಾಫರ್ ಆಗಿದ್ದ ವಿನೋದ್ ಪ್ರಧಾನ ಹೇಳುವ ಪ್ರಕಾರ ಈ ಸಿನಿಮಾ ಶೂಟಿಂಗ್ ಶುರುವಾದಾಗ ಮುಂಬೈನಲ್ಲಿ ಅನೇಕ ಮದುವೆಗಳು ಪೋಸ್ಟ್ ಪೋನ್ ಆಗಿದ್ದನ್ನು ನಾವು ಕೇಳಿದ್ದೇವೆ ಎಂದು ಇತ್ತೀಚಿನ ಒಂದು ಇಂಟರ್ವ್ಯೂವ್ನಲ್ಲಿ ಹೇಳಿದ್ದಾರೆ. ಅದಕ್ಕೆ ಕಾರಣ ನಾವು ಮುಂಬೈನಲ್ಲಿರುವ ಎಲ್ಲಾ ಜನರೇಟರ್ಗಳನ್ನು ಉಪಯೋಗಿಸಿಕೊಂಡಿದ್ದೇವು. ಮುಖ್ಯವಾದ ಒಂದು ಜಾಗವಿತ್ತು ಆ ಜಾಗದಲ್ಲಿ ನಮಗೆ ತುಂಬಾ ವಿದ್ಯುತ್ ಶಕ್ತಿಯ ಅವಶ್ಯಕತೆ ಇತ್ತು. ಹೀಗಾಗಿ ಅಲ್ಲಿ ನಾವು ಹೆಚ್ಚು ಜನರೇಟರ್ಗಳನ್ನು ಉಪಯೋಗಿಸಿಕೊಳ್ಳಬೇಕಾಯ್ತು. ಯಾವಾಗ ನಮಗೆ ಜನರೇಟರ್ ನಾವು ಅಂದುಕೊಂಡಂತೆ ಸಪೋರ್ಟ್ ಮಾಡುತ್ತವೋ ಆಗ ನಾವು ನಮ್ಮ ಬೆಸ್ಟ್ ಅನ್ನು ಸ್ಕ್ರೀನ್ ಮೇಲೆ ತರಲು ಸಾಧ್ಯ ಎಂದು ಹೇಳಿದ್ದರು.
ಇದನ್ನೂ ಓದಿ:BREAKING: ಖ್ಯಾತ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಆಸ್ಪತ್ರೆಗೆ ದಾಖಲು
ವಿನೋದ್ ಪ್ರಧಾನ ಹೇಳುವ ಪ್ರಕಾರ ದೇವದಾಸ್ ಸಿನಿಮಾವನ್ನು ದೊಡ್ಡ ದೊಡ್ಡ ಸೆಟ್ಗಳಲ್ಲಿ ಶೂಟ್ ಮಾಡಲಾಯಿತಂತೆ. ಆದರೆ ಯಾವುದೇ ಗಡಿಬಿಡಿ ಇಲ್ಲದೇ ಅವಸವಿಲ್ಲದೇ ನಡೆದ ಶೂಟಿಂಗ್ ಅದು. ನಾವು ಸಾಮಾನ್ಯವಾದ ಸಿನಿಮಾಗಳಲ್ಲಿ ಒಂದು ದಿನಕ್ಕೆ 15-20 ಶಾಟ್ಸ್ಗಳನ್ನು ತೆಗೆಯುತ್ತೇವೆ. ಒಂದೊಂದು ದಿನ 40ಕ್ಕೂ ಹೋಗಿದೆ ಆದ್ರೆ ದೇವದಾಸ್ ಸಿನಿಮಾದಲ್ಲಿ ದಿನಕ್ಕೆ ಕೇವಲ 3 ರಿಂದ4 ಶಾಟ್ಸ್ಗಳನ್ನು ಮಾತ್ರ ತೆಗೆದಯುತ್ತಿದ್ದೇವು. ಕಾರಣ ಲೈಟಿಂಗ್ ವ್ಯವಸ್ಥೆಯೇ ಈ ಸಿನಿಮಾದ ದೊಡ್ಡ ಸವಾಲಾಗಿತ್ತು. ಸಿನಿಮಾದಲ್ಲಿ ಪಾರು ಮನೆ ಸಂಪೂರ್ಣವಾಗಿ ಗಾಜಿನಿಂದ ತುಂಬಿ ಹೋಗಿತ್ತು. ಇಂತಹ ಸೆಟ್ನಲ್ಲಿ ಲೈಟಿಂಗ್ ಮಾಡುವುದು ಅಷ್ಟು ಸರಳವಿಲ್ಲ. ಒಂದು ಸೀನ್ ಶೂಟ್ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತಿತ್ತು. ಇದೇ ಸ್ಥಿತಿ ಚಂದ್ರಮುಖಿ ಮನೆಯಲ್ಲಿದ್ದ ಸೆಟ್ನಲ್ಲಿಯೂ ಇತ್ತು. ಹೀಗಾಗಿ ಲೈಟಿಂಗ್ ನಾವು ಅಂದುಕೊಂಡಂತೆ ಮಾಡಲು ನಾವು ಮುಂಬೈನ ಎಲ್ಲಾ ಜನರೇಟರ್ಗಳನ್ನು ಉಪಯೋಗಿಸಿಕೊಂಡೇವು. ಹೀಗಾಗಿ ಕಲ್ಯಾಣಮಂಟಪಗಳಲ್ಲಿ ಜನರೇಟರ್ ಸಮಸ್ಯೆಗಳು ಉಂಟಾದ ಕಾರಣ, ಅನೇಕ ಮದುವೆಗಳು ಮುಂದೂಡಲ್ಪಟ್ಟವು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ