/newsfirstlive-kannada/media/post_attachments/wp-content/uploads/2025/07/BIHAR.jpg)
ಬಿಹಾರದಲ್ಲಿ 24 ವರ್ಷದ ಯುವಕನಿಗೆ ದೊಣ್ಣೆಯಿಂದ ಹೊಡೆದು ಬಡಿದು ಚಿಕ್ಕಮ್ಮನನ್ನೇ ಮದುವೆಯಾಗುವಂತೆ ಬಲವಂತ ಮಾಡಲಾಗಿದೆ. ಇದಕ್ಕೆ ಕಾರಣ 24 ವರ್ಷದ ಯುವಕನಿಗೆ ತನ್ನ ಚಿಕ್ಕಮ್ಮನ ಜೊತೆ ಅಫೇರ್ ಇದೆ ಅನ್ನೋದು. ಬಿಹಾರದ ಸೌಪಲ್ ಜಿಲ್ಲೆಯಲ್ಲಿ ನಡೆದ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಗುಡ್ ಮಾರ್ನಿಂಗ್ ಅಮ್ಮ ಎಂದಿದ್ದಳು.. ಬೆಂಗಳೂರಿನ ಯುವತಿ ಓಡಿಶಾದಲ್ಲಿ ನಿಧನ, ಭಾರೀ ಅನುಮಾನ
ಮಿಥಿಲೇಶ್ ಕುಮಾರ್ ಮುಖಿಯಾ ಎಂಬ 24 ವರ್ಷದ ಯುವಕನ ಕಿಡ್ನ್ಯಾಪ್ ಮಾಡಿ ಆತನ ಚಿಕ್ಕಪ್ಪ, ಶಿವಚಂದ್ರ ಮುಖಿಯಾನ ಮನೆಗೆ ಕರೆದೊಯ್ಯಲಾಗಿದೆ. ಅಲ್ಲಿ ಮಿಥಿಲೇಶ್ ಕುಮಾರ್ ಮುಖಿಯಾಗೆ ಐದಾರು ಮಂದಿ ಸೇರಿಕೊಂಡು ಕಬ್ಬಿಣದ ರಾಡ್, ದೊಣ್ಣೆಯಿಂದ ಮನಸೋ ಇಚ್ಛೆ ಹೊಡೆದಿದ್ದಾರೆ. ಚಿಕ್ಕಪ್ಪ ಶಿವಚಂದ್ರ ಮುಖಿಯಾರ ಪತ್ನಿ ರೀಟಾ ದೇವಿ ಜೊತೆಗೆ ಮಿಥಿಲೇಶ್ ಕುಮಾರ್ ಮುಖಿಯಾಗೆ ಅನೈತಿಕ ಸಂಬಂಧ ಇದೆ ಎಂದು ಹೊಡೆದಿದ್ದಾರೆ. ಹೀಗೆ ಮಿಥಿಲೇಶ್ ಕುಮಾರ್ ಮುಖಿಯಾಗೆ ಹೊಡೆಯುವ ವಿಡಿಯೋ ವೈರಲ್ ಆಗಿದೆ.
ಶಿವಚಂದ್ರ ಮುಖಿಯಾ - ರೀಟಾ ದೇವಿ ದಾಂಪತ್ಯಕ್ಕೆ ನಾಲ್ಕು ವರ್ಷದ ಮಗನಿದ್ದಾನೆ. ರೀಟಾ ದೇವಿ ಜೊತೆಗೆ ಮಿಥಿಲೇಶ್ ಕುಮಾರ್ ಅಫೇರ್ ಇಟ್ಟುಕೊಂಡಿದ್ದಾನೆ ಎಂಬುವುದು ಶಿವಚಂದ್ರ ಮುಖಿಯಾ ಕೋಪಕ್ಕೆ ಕಾರಣವಾಗಿದೆ. ಮಿಥಿಲೇಶ್ ಕುಮಾರ್ಗೆ ಹೊಡೆಯುವಾಗ, ರೀಟಾ ದೇವಿಯನ್ನು ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ. ರೀಟಾ ದೇವಿ ಜೊತೆ ಅಫೇರ್ ಇಟ್ಟುಕೊಂಡ ಮೇಲೆ ಆಕೆಯನ್ನು ನೀನೇ ಮದುವೆಯಾಗು ಎಂದು ಪತಿ ಶಿವಚಂದ್ರ ಮುಖಿಯಾ ಒತ್ತಾಯಿಸಿದ್ದಾನೆ. ಮಿಥಿಲೇಶನ ಕೈಯಿಂದ ರೀಟಾ ದೇವಿಯ ಹಣೆಗೆ ತಿಲಕ ಇಡುವಂತೆ ಹೇಳಿ ತಿಲಕ ಹಚ್ಚಿಸಿದ್ದಾರೆ. ಬಲವಂತವಾಗಿ ಮಿಥಿಲೇಶ್ ಕುಮಾರ್ ಮುಖಿಯಾಗೆ ಹಾಗೂ ರೀಟಾ ದೇವಿಯ ಮದುವೆ ಮಾಡಿಸುವ ಯತ್ನ ಮಾಡಿದ್ದಾರೆ.
ಇದನ್ನೂ ಓದಿ: Heart Attack: ಮದುವೆ ಆಗಿ ತಿಂಗಳು ಕೂಡ ಆಗಿರಲಿಲ್ಲ; ಜೀವ ಹಿಂಡಿದ ಹೃದಯ
ತಮ್ಮ ಮಗನಿಗೆ ಹೊಡೆಯುವ ವಿಷಯ ಕೇಳಿ, ಮಿಥಿಲೇಶ್ ತಂದೆ, ರಾಮಚಂದ್ರ ಸ್ಥಳಕ್ಕೆ ಬಂದು ಮಧ್ಯಪ್ರವೇಶ ಮಾಡಿ, ಜಗಳ ಬಿಡಿಸುವ ಯತ್ನ ಮಾಡಿದ್ದಾರೆ. ಶಿವಚಂದ್ರ ಮುಖಿಯಾ ಅಂಡ್ ಗ್ಯಾಂಗ್ ರಾಮಚಂದ್ರ ಅವರಿಗೂ ಥಳಿಸಿದೆ. ಮಿಥಿಲೇಶ್ ಕುಮಾರ್ ಮುಖಿಯಾ ಬೆನ್ನು, ಕುತ್ತಿಗೆ, ಕೈಗೆ ಗಂಭಿರ ಗಾಯಗಳಾಗಿವೆ. ಹೊಡೆದಾಟ ನಡೆಯುವಾಗ ಗ್ರಾಮಸ್ಥರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಸ್ಧಳದಿಂದ ಪರಾರಿಯಾಗಿದ್ದಾರೆ.
ತಮ್ಮ ಮಗನ ಮೇಲೆ ರಾಜಕುಮಾರ್, ವಿಕಾಸ್ ಮುಖಿಯಾ, ಶಿವಚಂದ್ರ ಮುಖಿಯಾ, ಸೂರಜ್ ಮುಖಿಯಾ, ಪ್ರದೀಪ್ ಠಾಕೂರ್, ಸುರೇಶ್ ಮುಖಿಯಾ ಹಲ್ಲೆ ಮಾಡಿದ್ದಾರೆ. ಇವರೆಲ್ಲಾ ಜೀವಚಪುರ ಗ್ರಾಮದವರು. ರಾಹುಲ್ ಕುಮಾರ್, ಸಜಾನ್ ಸಾಹ್ನಿ ಬೇಲಗಂಜ್ ಗ್ರಾಮದವರು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಭೀಮಾಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕಿಡ್ನ್ಯಾಪ್ ಕೇಸ್ ದಾಖಲಾಗಿದೆ. ಭೀಮಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಿಥಿಲೇಶ್ ಪಾಂಡೆ ಅವರು ಕೇಸ್ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ. ಮಿಥಿಲೇಶ್ ನನ್ನು ಮೊದಲಿಗೆ ನರಪತ್ ಗಂಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆತನ ಸ್ಥಿತಿ ಗಂಭೀರವಾಗಿದ್ದರಿಂದ ಅರಾರಿಯಾ ಸದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇನ್ಸ್ಪೆಕ್ಟರ್ ಮಿಥಿಲೇಶ್ ಪಾಂಡೆ ಹೇಳಿದ್ದಾರೆ.
ಇದನ್ನೂ ಓದಿ: ಕುಚಿಕು ಸ್ನೇಹಿತನ ಬೆಂಗಳೂರಿನಿಂದ ಕರೆಸಿ ಮುಹೂರ್ತ ಇಟ್ಟ ಆಪ್ತಮಿತ್ರ.. ಕಾರಣ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ