ವಿದೇಶಿ ಬಂಡವಾಳ, ಯುವತಿಯರಿಗೆ ಲಕ್ಷಾಂತರ ರೂಪಾಯಿ ಸ್ಯಾಲರಿ. ಅಶ್ಲೀಲ ಚಿತ್ರ ತಯಾರಿಸುತ್ತಿದ್ದ ಜೋಡಿಗೆ ಬೇಡಿ!

author-image
Gopal Kulkarni
Updated On
ವಿದೇಶಿ ಬಂಡವಾಳ, ಯುವತಿಯರಿಗೆ ಲಕ್ಷಾಂತರ ರೂಪಾಯಿ ಸ್ಯಾಲರಿ. ಅಶ್ಲೀಲ ಚಿತ್ರ ತಯಾರಿಸುತ್ತಿದ್ದ ಜೋಡಿಗೆ ಬೇಡಿ!
Advertisment
  • ವಿದೇಶಿ ಬಂಡವಾಳದ ಹಣದಲ್ಲಿ ಅಶ್ಲೀಲ ಚಿತ್ರಗಳನ್ನು ನಿರ್ಮಿಸುತ್ತಿದ್ದ ಜೋಡಿ
  • ಜೋಡಿ ಮನೆಯ ಮೇಲೆ ದಾಳಿಯಿಟ್ಟ ಜಾರಿ ನಿರ್ದೇಶನಾಲಯಕ್ಕೆ ಸಿಕ್ಕಿದ್ದೇನು?
  • ಮಾಡಲಿಂಗ್ ಅವಕಾಶದ ಭರವಸೆ ನೀಡಿ ಯುವತಿಯರನ್ನು ಬಲೆಗೆ ಬೀಳಿಸುತ್ತಿದ್ದರು!

ವಿದೇಶಿ ಬಂಡವಾಳ ಮೂಲಕ ವಯಸ್ಕರರ ಮನರಂಜನೆ ಚಿತ್ರ ತಯಾರಿಸುತ್ತಿದ್ದ ಜೋಡಿಯೊಂದು ನೋಯ್ಡಾದಲ್ಲಿ ಸಿಕ್ಕಿಬಿದ್ದಿದೆ. ವಿಚಾರಣೆ ವೇಳೆ ಈ ಒಂದು ಕಾನೂನು ಬಾಹಿರ ಚಟುವಟಿಕೆಯ ಕಬಂದ ಬಾಹು ಅಂತಾರಾಷ್ಟ್ರೀಯ ಗಡಿಯಾಚೆಗೂ ಚಾಚಿಕೊಂಡಿವೆ ಎಂಬ ಭಯಾನಕ ಸತ್ಯ ಆಚೆ ಬಂದಿದೆ. ಈ ಒಂದು ಪೋರ್ನ್​ ರಾಕೆಟ್​​ನ್ನು ಉಜ್ವಲ್​ ಕಿಶೋರ್ ಹಾಗೂ ಆತನ ಪತ್ನಿ ನೀಲು ಶ್ರೀವಾತ್ಸವ ನಡೆಸುತ್ತಿದ್ದರು, ವಿದೇಶಿ ಬಂಡವಾಳದ ಮೂಲಕ ಐದು ವರ್ಷ ಈ ಬ್ಯುಸೆನೆಸ್ ನಡೆಸುವುದಾಗಿ ಒಪ್ಪಂದ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಮೊಟ್ಟೆ ಮತ್ತು ಜ್ಯೂಸ್ ಮಾರಾಟಗಾರರಿಗೆ GST ನೋಟಿಸ್​.. ಕಾರಣವೇನು?

ಮೂಲಗಳ ಪ್ರಕಾರ ಈ ಜೋಡಿ ಸೈಪ್ರಸ್​ ಎಂಬ ಕಂಪನಿಯೊಂದಿಗೆ ಕೈಜೋಡಿಸಿ ಟೆಕ್ನಿಸ್​ ಲಿಮಿಟೆಡ್​ ಎಂಬ ಸಂಸ್ಥೆಯನ್ನು ಶುರು ಮಾಡಿತ್ತು. ಇಲ್ಲಿ ಜನಪ್ರಿಯ ವಯಸ್ಕರರ ಮನರಂಜನೆಯ ಚಿತ್ರಗಳು ತಯಾರಾಗುತ್ತಿದ್ದವು. ಅವುಗಳನ್ನು Xhamster and Stripchat ಎಂಬ ವೆಬ್​ಸೈಟ್​ಗಳಲ್ಲಿ ನೋಡಲು ಸಿಗವಂತೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಜೋಡಿಗಳಿಗೆ ವಿದೇಶಿ ಕಂಪನಿಗಳಿಂದ ವಿವಿಧ ಬ್ಯಾಂಕುಗಳಿಗೆ ಸಾಕಷ್ಟು ಹಣ ಹರಿದು ಬಂದಿದ್ದು. ಇದನ್ನು ಜಾಹಿರಾತು ನಿರ್ಮಿಸಿದ್ದಕ್ಕಾಗಿ ಸಲ್ಲಿಕೆಯಾದ ಪೇಮೆಂಟ್​ ಎಂದು ನಂಬಿಸುತ್ತಿದ್ದರು.

publive-image

ನೊಯ್ಡಾದಲ್ಲಿರುವ ಈ ಜೋಡಿಯ ಮನೆಯ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ಅಲ್ಲದೇ ಅವರ ಮನೆಯಲ್ಲಿ ಆಧಾರವಿಲ್ಲದ ಸುಮಾರು 50 ಕೋಟಿ ರೂಪಾಯಿಯನ್ನು ವಶಕ್ಕೆ ಪಡೆದಿದೆ. ಇನ್ನು ಜಾರಿ ನಿರ್ದೇಶನಾಲಯ ನಡೆಸಿರುವ ವಿಚಾರಣೆಯಿಂದ ಆಚೆ ಬಂದಿರುವ ಮತ್ತೊಂದು ಮಾಹಿತಿ ಅಂದ್ರೆ, ಈ ಅಕ್ರಮ ಚಟುವಟಿಕೆಯ ಪ್ರಮುಖ ಆರೋಪಿ ಉಜ್ವಲ್​ ಕಿಶೋರ್ ಎಂದು ತಿಳಿದು ಬಂದಿದೆ. ಈತ ಈ ಮೊದಲು ಇದೇ ಮಾದರಿಯ ಚಟುವಟಿಕೆಯಲ್ಲಿ ರಷ್ಯಾದಲ್ಲಿ ಭಾಗಿಯಾಗಿದ್ದ ಬಳಿಕ ಭಾರತಕ್ಕೆ ಬಂದು ಇಲ್ಲಿ ತನ್ನ ಪತ್ನಿಯೊಂದಿಗೆ ಈ ದಂಧೆಯನ್ನು ಶುರು ಮಾಡಿದ ಎಂದು ಹೇಳಲಾಗಿದೆ.

publive-image

ಮಾಡೆಲ್​ಗಳನ್ನು ಹಾಗೂ ಯುವತಿಯರನ್ನು ಸೆಳೆಯಲು ಈ ಜೋಡಿ ಪ್ರಮುಖವಾಗಿ ಫೇಸ್​ಬುಕ್ ಸೋಷಿಯಲ್ ಮೀಡಿಯಾವನ್ನು ಬಳಕೆ ಮಾಡಿಕೊಳ್ಳುತ್ತಿತ್ತು. ಎಚಾಟೊ ಡಾಟ್ ಕಾಮ್ ಎಂಬ ಪೇಜ್ ಕ್ರಿಯೇಟ್ ಮಾಡಿದ್ದ ಈ ಜೋಡಿ ಮಾಡಲಿಂಗ್​ಗೆ ಅವಕಾಶ ನೀಡಲಾಗುವುದು ಎಂದು ಯವತಿಯರನ್ನು ಸೆಳೆಯುತ್ತಿತ್ತು. ಅದು ಮಾತ್ರವಲ್ಲದೇ ಲಕ್ಷ ಲಕ್ಷ ರೂಪಾಯಿ ಸ್ಯಾಲರಿ ಇದೆ ಎಂದು ಭರವಸೆಯನ್ನು ನೀಡುತ್ತಿತ್ತು. ಇದನ್ನು ನಂಬಿ ಬಂದ ಯುವತಿಯರಿಗೆ ಆಡಿಷನ್ ನೆಪದಲ್ಲಿ ಅಶ್ಲೀಲ ಚಿತ್ರೀಕರಣದಲ್ಲಿ ಭಾಗಿಯಾಗುವಂತೆ ಹೇಳಲಾಗುತ್ತಿತ್ತು ಮತ್ತು ಅವರಿಗೆ 1 ರಿಂದ 2 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿತ್ತಂತೆ.

ಇದನ್ನೂ ಓದಿ:ವಿಶ್ವ ಪ್ರಸಿದ್ಧಿ ಪಡೆದಿರುವ ಮುಧೋಳ ಬೇಟೆ ನಾಯಿ ಬಗ್ಗೆ ನಿಮಗೆಷ್ಟು ಗೊತ್ತು? ಈ ತಳಿಗಳನ್ನು ಹೆಚ್ಚು ಸಾಕುವುದೇಕೆ?

ಹಲವು ಮಾನದಂಡಗಳಲ್ಲಿ ಯುವತಿಯರಿಗೆ ಪೇಮೆಂಟ್ ಸಲ್ಲಿಕೆಯಾಗುತ್ತಿತ್ತಂತೆ. ಅರ್ಧ ಮುಖ ತೋರಿಸುವವರಿಗೆ ಒಂದು ಸಂಬಾವನೆ, ಪೂರ್ತಿ ಮುಖ ತೋರಿಸಿ ಅಶ್ಲೀಲ ಚಿತ್ರಗಳಲ್ಲಿ ಕಾಣಿಸುವವರಿಗೆ ಒಂದು ಸಂಭಾವನೆ, ಅರೆನಗ್ನ ಹಾಗೂ ಸಂಪೂರ್ಣ ನಗ್ನಗೊಳ್ಳುವವರಿಗೆ ಒಂದು ಸಂಭಾವನೆ ನೀಡಲಾಗುತ್ತಿತ್ತು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment