ದಾಲ್ ಮತ್ತು ರೊಟ್ಟಿಗೆ ಫೇಮಸ್ ಈ ಹಳ್ಳಿ.. ಈ ಗ್ರಾಮವನ್ನು ಹುಡುಕಿಕೊಂಡು ವಿದೇಶದಿಂದ ಬರುತ್ತಾರೆ ಭೋಜನ ಪ್ರಿಯರು

author-image
Gopal Kulkarni
Updated On
ದಾಲ್ ಮತ್ತು ರೊಟ್ಟಿಗೆ ಫೇಮಸ್ ಈ ಹಳ್ಳಿ.. ಈ ಗ್ರಾಮವನ್ನು ಹುಡುಕಿಕೊಂಡು ವಿದೇಶದಿಂದ ಬರುತ್ತಾರೆ ಭೋಜನ ಪ್ರಿಯರು
Advertisment
  • ಈ ಗ್ರಾಮಕ್ಕೆ ದಾಲ್-ರೋಟಿ ಭೋಜನ ಹುಡುಕಿಕೊಂಡು ಬರುತ್ತಾರೆ ವಿದೇಶಿಗರು
  • ಆ ಮಂದಿರ ನೋಡಲು ಬರುವ ವಿದೇಶಿಗರು ದಾಲ್-ರೋಟಿ ಸೇವಿಸದೇ ಹೋಗಲ್ಲ
  • ಯಾವುದು ಆ ಮಂದಿರ, ಇಲ್ಲಿಯ ದಾಲ್​ ರೋಟಿಗೆ ಮನಸೋತಿದ್ದೇಕೆ ವಿದೇಶಿಗರು ?

ಒಂದು ಹೋಟೆಲ್ ಊಟ, ಪುಟ್ಟದಾದ ಬೇಕರಿಯ ಖಾದ್ಯಗಳು , ಒಂದು ಸಣ್ಣ ಗೂಡಂಗಡಿಯಲ್ಲಿ ಮಾಡುವ ಬೊಂಡಾ,ವಡೆಗಳು. ಒಂದು ಬಾರಿ ಜನರಿಗೆ ಇಷ್ಟವಾದರೆ ಸಾಕು ಜನರು ಹುಡುಕಿಕೊಂಡು ಅಲ್ಲಿಗೆ ಬಂದು ತಮಗಿಷ್ಟವಾದ ಭಕ್ಷ್ಯಗಳನ್ನು ಸೇವಿಸಿ ಹೋಗುತ್ತಾರೆ. ಒಂದು ಬಾರಿ ರುಚಿ ತಾಗಿದರೆ ಸಾಕು ಅಂತಹ ಭೋಜನ ನೀಡುವ ಹೋಟೆಲ್​ಗಳಾಗಲಿ, ಧಾಬಾಗಳಾಗಲಿ ಜನರು ಹುಡುಕಿಕೊಂಡು ದೂರ ದೂರದಿಂದ ಬರುತ್ತಾರೆ. ಆದರೆ ನಮ್ಮ ದೇಶದಲ್ಲಿ ಒಂದ ಗ್ರಾಮವಿದೆ. ಆ ಗ್ರಾಮದ ಜನರು ಮಾಡುವ ದಾಲ್ ಮತ್ತು ರೋಟಿಯನ್ನು ಸೇವಿಸಲು ದೇಶವಲ್ಲ ವಿದೇಶದಿಂದ ಜನರು ಆ ಗ್ರಾಮವನ್ನು ಹುಡುಕಿಕೊಂಡು ಬರುತ್ತಾರೆ.

ಇದನ್ನೂ ಓದಿ:ನಿರಂತರ ಪ್ರೇಮ ವೈಫಲ್ಯ.. ಲವ್ ಫೆಲ್ಯೂರ್‌ಗೆ ತಲೆ ಕೆಟ್ಟ ಹುಡುಗ ಮದುವೆಯಾಗಿದ್ದು ಯಾರನ್ನ ಗೊತ್ತಾ?

ಮಧ್ಯಪ್ರದೇಶ ಕೇವಲ ಅದರ ಸೌಂದರ್ಯತೆಯಿಂದ ಮಾತ್ರವಲ್ಲ ಅಲ್ಲಿ ಸಿಗುವ ಸ್ವಾದಿಷ್ಠ ಆಹಾರಕ್ಕೂ ಕೂಡ ಪೇಮಸ್​. ಇಲ್ಲಿ ಸಿದ್ಧಗೊಳ್ಳುವ ಅನೇಕ ಭಕ್ಷ್ಯಗಳು ವಿಶ್ವಪ್ರಸಿದ್ಧಿಯನ್ನು ಪಡೆದಿವೆ. ಅದರಲ್ಲೂ ಇಲ್ಲಿಯ ದಾಲ್ ರೋಟಿ ತುಂಬಾ ಫೇಮಸ್ ಅದರಲ್ಲೂ ಮಧ್ಯಪ್ರದೇಶದ ಒಂದು ಹಳ್ಳಿಯಲ್ಲಿ ಸಿದ್ಧಗೊಳ್ಳುವ ದಾಲ್ ರೋಟಿ ಎಷ್ಟೊಂದು ಪ್ರಸಿದ್ಧಿ ಪಡೆದಿದೆಯೆಂದರೆ. ಇಲ್ಲಿಯ ದಾಲ್ ರೋಟಿ ತಿನ್ನಲು ವಿದೇಶಗಳಿಂದ ಜನರು ಈ ಗ್ರಾಮವನ್ನು ಹುಡುಕಿಕೊಂಡು ಬಂದು ಇಲ್ಲಿ ಸಿಗುವ ದಾಲ್ ರೋಟಿ ಸೇವಿಸಿ ಅನ್ನದಾತೋ ಸುಖೀಭವ ಎಂದು ಹೇಳಿ ಹೋಗುತ್ತಾರೆ.

publive-image

ನಿಮಗೆ ಆಶ್ಚರ್ಯವೆನಿಸಬಹುದು ಕೇವಲ ದಾಲ್ ರೋಟಿಯನ್ನು ಸೇವಿಸಲು ಜನರು ವಿದೇಶದಿಂದ ಏಕೆ ಆಗಮಿಸುತ್ತಾರೆ ಅಂತ. ಅದರ ವಿಶೇಷತೆಯನ್ನೇ ನಾವು ಇಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ. ಮಧ್ಯಪ್ರದೇಶದ ಗ್ವಾಲಿಯರ್ ಸಮೀಪದಲ್ಲಿರುವ ಮಿತೋಲಿ ಎಂಬುವಲ್ಲಿ ಚೌಸಟ್ ಯೋಗಿನಿ ಮಂದಿರವಿದೆ. ಅಂದ್ರೆ 64 ಯೋಗಿನಿಯರ ಮಂದಿರ ಎಂದು. ಇದನ್ನು ನೋಡಲು ವಿದೇಶಿಗರು ಬರುತ್ತಾರೆ. ಹೀಗೆ ಬರುವ ವಿದೇಶಿಗರು ಆಗಮಿಸುತ್ತಾರೆ. ಈ ವಿದೇಶಿಗರಿಗಾಗಿ ಮಿತೋಲಿ ಗ್ರಾಮಸ್ಥರು ಸ್ಟೇ ಹೋಮ್​ಗಳನ್ನು ಮಾಡಿದ್ದಾರೆ. ಅವರ ಉಳಿದುಕೊಳ್ಳಲು ಹಾಗೂ ಊಟ ಉಪಚಾರಕ್ಕೆಂದು ಅವರಿಗೆ ವ್ಯವಸ್ಥೆ ಮಾಡಲಾಗಲಿದೆ.

publive-image

ಇದನ್ನೂ ಓದಿ: ಇದು ಭಾರತದ ಅತ್ಯಂತ ದುಬಾರಿ ಟ್ರೈನ್.. ಟಿಕೆಟ್​ ದರ ಲಕ್ಷಕ್ಕೂ ಹೆಚ್ಚು! ವಂದೇ ಭಾರತ್ ಅಲ್ಲ, ತೇಜಸ್ ಅಲ್ಲ!

ಇಲ್ಲಿ ಬರುವ ವಿದೇಶಿಗರಿಗೆ ಇಲ್ಲಿಯ ಹೋಮ್​ ಸ್ಟೇಗಳು ತುಂಬಾ ಇಷ್ಟ. ಅದರಲ್ಲೂ ದೆಹಾತಿ ಹೋಮ್​ ಸ್ಟೇ ಅಂದ್ರೆ ವಿದೇಶಗರಿಗೆ ಬಲು ಅಚ್ಚುಮೆಚ್ಚು. ಇದು ಇಡೀ ಮಿಥೋಲಿ ಗ್ರಾಮದಲ್ಲಿ ಪ್ರಸಿದ್ಧ ಹೋಮ್​ ಸ್ಟೇ. ಅದರಲ್ಲೂ ಇಲ್ಲಿ ಸಿಗುವ ದಾಲ್ ರೋಟಿ ಸ್ವಾದಕ್ಕೆ ವಿದೇಶಿಗರು ಮಾರು ಹೋಗಿದ್ದಾರೆ. ಹೀಗಾಗಿ ಇಲ್ಲಿ ದಾಲ್​ ರೋಟಿ ಸೇವಿಸುವುದಕ್ಕಾಗಿಯೇ ಈ ಹೋಮ್ ಸ್ಟೇ ಹಾಗೂ ಈ ಗ್ರಾಮವನ್ನು ಹುಡುಕಿಕೊಂಡು ಬರುತ್ತಾರೆ.

publive-image

64 ಯೋಗಿನಿಯರ ಮಂದಿರದ ಹಿಂದೆ ಒಂದು ಇತಿಹಾಸವೇ ಇದೆ. ಇದನ್ನು 1055 ರಿಂದ 1075ರಲ್ಲಿ ಕಚ್ಚಪಘಾಟದ ರಾಜಾ ದೇವಪಾಲ್ ನಿರ್ಮಿಸಿದ್ದರು. ಮಂದಿರ ನಿರ್ಮಾಣದ ಮುಖ್ಯ ಉದ್ದೇಶ ಜೋತಿಷ್ಯ ಹಾಗೂ ಗಣಿತಶಾಸ್ತ್ರದ ಶಿಕ್ಷಣ ನೀಡುವುದಾಗಿತ್ತು. ಮುಂದೆ ಇದು 1951ರಲ್ಲಿ ಐತಿಹಾಸಿ ಮಂದಿರ ಎಂದು ಘೋಷಣೆಯಾಯ್ತು.

publive-image

ಈ 64 ಯೋಗಿನಿಯರ ಮಂದಿರವನ್ನು ತಾಂತ್ರಿಕ ವಿದ್ಯೆಯ ಯುನಿವರ್ಸಿಟಿ ಎಂತಲೂ ಕೂಡ ಕರೆಯುತ್ತಾರೆ. ಇಲ್ಲಿ ತಾಂತ್ರಿಕ ಪೂಜೆಯ ಅನುಷ್ಠಾನ ಅತಿಹೆಚ್ಚು ನಡೆಯುತ್ತದೆ ಎಂದು ಹೇಳಲಾಗುತ್ತದೆ.

publive-image

ಹೀಗಾಗಿ ಇದರ ರಹಸ್ಯವನ್ನು ತಿಳಿಯಲು ವಿದೇಶಿಗರು ಹೆಚ್ಚು ಬರುತ್ತಾರೆ. ಇಲ್ಲಿಗೆ ಬಂದವರು ಮರೆಯಲಾರದೇ ಹೋಮ್​ ಸ್ಟೇಗಳಲ್ಲಿ ದೊರೆಯುವ ದಾಲ್​ ರೋಟಿ ಸೇವಿಸಿ ಪ್ರಸನ್ನಗೊಂಡು ಹೋಗುತ್ತಾರೆ. ಅದರಲ್ಲೂ ದೇಹಾತಿ ಹೋಮ್​ಸ್ಟೇಯ ದಾಲ್​ ರೋಟಿಗೆ ವಿದೇಶಿಗರು ಮನಸೋತು ಹೋಗಿದ್ದಾರೆ. ಇಂದಿಗೂ ಕೂಡ ಈ ಗ್ರಾಮಕ್ಕೆ ಯೋಗಿನಿಯರ ಮಂದಿರದ ಭೇಟಿಯ ಜೊತೆಗೆ ದಾಲ್ ರೋಟಿ ಸವಿಯುವ ಆಸೆಯಿಂದಲೂ ವಿದೇಶಿಗರು ಇಲ್ಲಿಗೆ ಬರುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment