18 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ಸೆರೆ.. ಮಹಿಳಾ ಅಧಿಕಾರಿಯ ಸಾಹಸಕ್ಕೆ ಜನ ಸೆಲ್ಯೂಟ್ -Video

author-image
Ganesh
Updated On
18 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ಸೆರೆ.. ಮಹಿಳಾ ಅಧಿಕಾರಿಯ ಸಾಹಸಕ್ಕೆ ಜನ ಸೆಲ್ಯೂಟ್ -Video
Advertisment
  • ಕೇರಳದ ಅರಣ್ಯ ಅಧಿಕಾರಿ ಸಾಹಸಕ್ಕೆ ನಿಬ್ಬೆರಗಾದ ಜನರು
  • ರೋಚಕವಾಗಿ ಹಾವನ್ನು ಸೆರೆ ಹಿಡಿದ ಅರಣ್ಯಾಧಿಕಾರಿ
  • ಅರಣ್ಯಾಧಿಕಾರಿ ಹಾವನ್ನು ಸೆರೆ ಹಿಡಿದ ವಿಡಿಯೋ ವೈರಲ್

18 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು ಮಹಿಳಾ ಅಧಿಕಾರಿಯೊಬ್ಬರು ಯಾವುದೇ ಭಯವಿಲ್ಲದೇ ಸೆರೆ ಹಿಡಿದಿದ್ದಾರೆ. ಹಾವನ್ನು ಸೆರೆ ಹಿಡಿಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಧಿಕಾರಿಯ ಧೈರ್ಯಕ್ಕೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ.

ಕೇರಳದ ತಿರುವನಂತಪುರಂನ ಪೆಪ್ಪರಾದ ಅಂಚುಮರುತುಮೂಟ್‌ನ ವಸತಿ ಪ್ರದೇಶದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಇದರಿಂದ ಗಾಬರಿಯಾದ ಜನರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಒಂದು ಕ್ಷಣ ದೈತ ಹಾವನ್ನು ನೋಡಿ ದಂಗಾಗಿದ್ದಾರೆ.

ಇದನ್ನೂ ಓದಿ: ‘ಇಲ್ಲ, ಅಣ್ಣ ನೀವು ಹೊಡೀತಿರಿ..’ ರೇಣುಕಾಸ್ವಾಮಿ ಮಾದರಿ ಕೇಸ್​​ಗೂ ಮುನ್ನ ಕಾರಿನಲ್ಲಿ ಆಗಿದ್ದೇನು..?

ಕೊನೆಗೆ ಪರುತಿಪ ರೇಂಜ್‌ನ ಅರಣ್ಯ ಅಧಿಕಾರಿ ರೋಶ್ನಿ ಹಾವನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ. ಹೊಳೆಯಲ್ಲಿದ್ದ ಹಾವನ್ನು ಸೆರೆ ಹಿಡಿಯೋದು ಅಷ್ಟು ಸುಲಭವಿರಲಿಲ್ಲ. ಕೊನೆಗೂ ಸಹಾಸಪಟ್ಟು ಅಧಿಕಾರಿ ರೋಶ್ನಿ ಅವರು ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ. ಸದ್ಯ ಮಹಿಳಾ ಅಧಿಕಾರಿಯ ಸಾಹಸಕ್ಕೆ ಎಲ್ಲರೂ ಸೆಲ್ಯೂಟ್ ಹೊಡೆಯುತ್ತಿದ್ದಾರೆ.

ಇದನ್ನೂ ಓದಿ: ಪಂದ್ಯ ಗೆದ್ದ ಬೆನ್ನಲ್ಲೇ ಅಕ್ಕನ ನೆನೆದು ಆಕಾಶ್ ದೀಪ್ ಭಾವುಕ.. ಇವರ ಸಹೋದರಿಗೆ ಮಾರಣಾಂತಿಕ ಕಾಯಿಲೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment