newsfirstkannada.com

VIDEO: ಕೊನೆಗೂ ಸೆರೆ ಸಿಕ್ಕ ತಣ್ಣೀರ್​! ಮನಸೋ ಇಚ್ಛೆ ಓಡಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಒಂಟಿ ಸಲಗ

Share :

Published January 16, 2024 at 3:08pm

    ಅರಣ್ಯ ಇಲಾಖೆ ಸಿಬ್ಬಂದಿಗೆ ಸೆರೆಸಿಕ್ಕಿ ತಣ್ಣೀರ್

    ಕಾಡಾನೆ ಸೆರೆ ಸಿಕ್ಕ ಬಳಿಕ ನಿಟ್ಟುಸಿರು ಬಿಟ್ಟ ಹಾಸನದ ರೈತರು

    ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಲಿರುವ ಅರಣ್ಯ ಇಲಾಖೆ

ಹಾಸನ: ಎಲಿಫೆಂಟ್ ಹಂಟಿಂಗ್ ಟೀಂ ತಣ್ಣೀರ್ ಎಂಬ ಹೆಸರಿನ ಬೃಹತ್ ಗಾತ್ರದ ಸಲಗವನ್ನು ಸೆರೆ ಹಿಡಿದಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಚಿಕ್ಕೋಟೆ ಗ್ರಾಮದಲ್ಲಿ ಬೃಹತ್ ಸಲಗ ಅರಣ್ಯ ಇಲಾಖೆ ಸಿಬ್ಬಂದಿಗೆ ಸೆರೆಸಿಕ್ಕಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆ ಐದು ಗಂಟೆಗೆ ಬಂದು ಕಾಡಾನೆ ಇರುವ ಜಾಗ ಪತ್ತೆ ಮಾಡಿದ್ದರು. ಬಳಿಕ ಕಾಡಾನೆ ಸೆರೆ ತಂಡ ಹತ್ತು ಗಂಟೆಗೆ ಕಾರ್ಯಾಚರಣೆ ಆರಂಭಿಸಿದರು. ಇದೀಗ ರೈತರಿಗೆ ಉಪಟಳ ನೀಡುತ್ತಿದ್ದ ಒಂಟಿಸಲಗವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.

ಪ್ರಾರಂಭದಲ್ಲಿ ಅರವಳಿಕೆ ಚುಚ್ಚುಮದ್ದು ನೀಡಿದರು ಕಾಡಾನೆ ತಣ್ಣೀರ್ ಪ್ರಜ್ಞೆ ತಪ್ಪಿ ಬೀಳಲಿಲ್ಲ. ಒಂದು ಗಂಟೆ ಕಾಲ ತಣ್ಣೀರ್ ಮನಸ್ಸೋ ಇಚ್ಛೆ ಓಡಾಡಿದೆ. ನಂತರ ಕಾಫಿ ತೋಟದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಎಂಟು ಸಾಕಾನೆಗಳೊಂದಿಗೆ ಹರಸಾಹಸಪಟ್ಟು ರಸ್ತೆಗೆ ಕರೆ ತಂದಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕೊನೆಗೂ ಸೆರೆ ಸಿಕ್ಕ ತಣ್ಣೀರ್​! ಮನಸೋ ಇಚ್ಛೆ ಓಡಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಒಂಟಿ ಸಲಗ

https://newsfirstlive.com/wp-content/uploads/2024/01/Elephant-4.jpg

Load More