newsfirstkannada.com

ಬಾವಿಗೆ ಬಿದ್ದಿದ್ದ ಅಪರೂಪದ ಕರಿ ಚಿರತೆ.. ಅರಣ್ಯ ಇಲಾಖೆ ಅಧಿಕಾರಿಗಳಿಂದ ರಕ್ಷಣೆ, ಎಲ್ಲಿ?

Share :

Published April 1, 2024 at 9:15am

    ಕರಿ ಚಿರತೆಯನ್ನು ಮೊದಲು ನೋಡಿ ಭಯಗೊಂಡಿದ್ದ ಮನೆಯವ್ರು

    ಮಾಹಿತಿ ತಿಳಿದು ಬೋನ್​ ಸಮೇತ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ

    ಬಾವಿಯಿಂದ ಮೇಲೆತ್ತಿ ಕರಿ ಚಿರತೆ ರಕ್ಷಣೆ ಮಾಡಿದ ಅಧಿಕಾರಿಗಳು

ದಕ್ಷಿಣ ಕನ್ನಡ: ಬಾವಿಗೆ ಬಿದ್ದ ಅಪರೂಪದ ಕರಿ ಚಿರತೆಯನ್ನು ಸ್ಥಳೀಯರ ನೆರವಿನಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ರಕ್ಷಣೆ ಮಾಡಿದ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮಂಗಳೂರು ತಾಲೂಕಿನ ಎಡಪದವು ಸಮೀಪದ ಗೊಸ್ಪೆಲ್ ಸನಿಲ ಎಂಬಲ್ಲಿ ಈ ಕರಿ ಚಿರತೆಯನ್ನು ಬೋನ್​ನಲ್ಲಿ ಸೆರೆ ಹಿಡಿಯಲಾಗಿದೆ. ಬಾವಿಗೆ ಬಿದ್ದಿದ್ದ, ಕರಿ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಹಕಾರದಲ್ಲಿ ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಸನಿಲದ ನಿವಾಸಿ ಶಕುಂತಲಾ ಆಚಾರ್ಯ ಎಂಬವರ ಮನೆಯ ಬಾವಿಯಲ್ಲಿ ಬೆಳಗ್ಗೆ ಚಿರತೆ ಪತ್ತೆಯಾಗಿತ್ತು.

ಇದರಿಂದ ಗಾಬರಿಗೊಂಡಿದ್ದ ಮನೆಯವರು ತಕ್ಷಣ ಮಾಹಿತಿಯನ್ನು ಅರಣ್ಯ ಇಲಾಖೆಗೆ ತಿಳಿಸಿದ್ದರು. ಸುದ್ದಿ ಗೊತ್ತಾಗುತ್ತಿದ್ದಂತೆ ಬೋನ್ ಸಮೇತ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಕರಿ ಚಿರತೆಯನ್ನು ರಕ್ಷಿಸಿದ್ದಾರೆ. ಇಂತಹ ಚಿರತೆಗಳು ಎಲ್ಲೋ ಅಪರೂಪಕ್ಕೊಂದು ಕಾಣಿಸುತ್ತವೆ. ಅದರಲ್ಲಿ ಇದು ಒಂದು ಆಗಿದೆ. ಹೀಗಾಗಿ ಕರಿ ಚಿರತೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾವಿಗೆ ಬಿದ್ದಿದ್ದ ಅಪರೂಪದ ಕರಿ ಚಿರತೆ.. ಅರಣ್ಯ ಇಲಾಖೆ ಅಧಿಕಾರಿಗಳಿಂದ ರಕ್ಷಣೆ, ಎಲ್ಲಿ?

https://newsfirstlive.com/wp-content/uploads/2024/04/MNG_CHEETA_1.jpg

Load More