ನಟ್ಟು, ಬೋಲ್ಟು ಹೇಳಿಕೆ ಬೆನ್ನೇಲೆ ರಾಣಾ ಚಿತ್ರತಂಡಕ್ಕೆ ಶಾಕ್; ನಿರ್ದೇಶಕ ತರುಣ್ ಸುಧೀರ್ ಏನಂದ್ರು?

author-image
Veena Gangani
Updated On
ನಟ್ಟು, ಬೋಲ್ಟು ಹೇಳಿಕೆ ಬೆನ್ನೇಲೆ ರಾಣಾ ಚಿತ್ರತಂಡಕ್ಕೆ ಶಾಕ್; ನಿರ್ದೇಶಕ ತರುಣ್ ಸುಧೀರ್ ಏನಂದ್ರು?
Advertisment
  • ಸ್ಯಾಂಡಲ್​ವುಡ್​ ಸ್ಟಾರ್​ ನಿರ್ದೇಶಕ ತರುಣ್ ಸುಧೀರ್​ ಈ ಬಗ್ಗೆ ಹೇಳಿದ್ದೇನು?
  • ಅನುಮತಿ ಇಲ್ಲದೇ ಚಿತ್ರೀಕರಣ ಮಾಡುತ್ತಿದ್ದ ತಂಡಕ್ಕೆ ಅರಣ್ಯ ಇಲಾಖೆ ಶಾಕ್
  • ಹೊಸ ಸಿನಿಮಾ ತಂಡಕ್ಕೆ ಫಾರೆಸ್ಟ್ ಎಂಟ್ರಿ ಅನ್ನೋ ಮಾಹಿತಿ ಇರಲಿಲ್ವಾ?

ತುಮಕೂರು: ನಿನ್ನೆ ಸ್ಯಾಂಡಲ್​​ವುಡ್​​ ಸ್ಟಾರ್ ನಟಿ ರಕ್ಷಿತಾ ಅವರ ಸಹೋದರ ರಾಣಾ ನಟಿಸುತ್ತಿರುವ ಹಾಗೂ ತರುಣ್ ಸುಧೀರ್ ಪ್ರೊಡಕ್ಷನ್ಸ್​​ನಲ್ಲಿ ಹೊಸ ಸಿನಿಮಾದ ಶೂಟಿಂಗ್ ಅನ್ನು ಅಧಿಕಾರಿಗಳು ನಿಲ್ಲಿಸಿದ್ದರು. ಡಿಸಿಎಂ ಡಿಕೆ ಶಿವಕುಮಾರ್​ ಅವರು ನಟ್ಟು ಬೋಲ್ಟ್ ಟೈಟ್ ಮಾಡುತ್ತೇನೆ ಎಂಬ ಹೇಳಿಕೆ ಸದ್ದು ಮಾಡುವ ಹೊತ್ತಲ್ಲೇ ಅನುಮತಿ ಇಲ್ಲದೇ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡಕ್ಕೆ ಅರಣ್ಯ ಇಲಾಖೆ ಶಾಕ್ ನೀಡಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಸ್​ ಫಸ್ಟ್​ಗೆ ಕನ್ನಡದ ಸ್ಟಾರ್​ ನಿರ್ದೇಶಕ ತರುಣ್ ಸುಧೀರ್​ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಇದನ್ನೂ ಓದಿ:ನಟ್ಟು, ಬೋಲ್ಟ್ ಹೇಳಿಕೆಯ ಎಫೆಕ್ಟ್‌.. ತರುಣ್​ ಸುಧೀರ್, ರಾಣಾ ಸಿನಿಮಾ ಶೂಟಿಂಗ್‌ ಮೇಲೆ ಏಕಾಏಕಿ ದಾಳಿ!

ನ್ಯೂಸ್​ಫಸ್ಟ್​ಗೆ​​ ಮಾಹಿತಿ ನೀಡಿದ ತರುಣ್ ಸುಧೀರ್​ ಅವರು, ನಾವು ಕಾಡಿನಲ್ಲಿ ಶೂಟಿಂಗ್ ಮಾಡಿಲ್ಲ. ಇದು ಮಿಸ್ ಕಮ್ಯುನಿಕೇಷನ್​ನಿಂದ ಆಗಿರೋ ಪ್ರಾಬ್ಲಂ. ನಾವು ಒಂದು ಬಾರ್ ಅಂಡ್ ರೆಸ್ಟೋರೆಂಟ್ ಶೂಟಿಂಗ್ ನಡೆಸೋಕೆ ಹೊರಟಿದ್ವಿ. ಮಾರ್ಗ ಮಧ್ಯೆ ನಮ್ಮ ಒಂದು ಪ್ರೊಡಕ್ಷನ್ ವಾಹನ ನಿಂತಿತ್ತು. ಪಕ್ಕದಲ್ಲೇ ಊಟಕ್ಕೆಂದು ಒಂದು ಲೈಟ್ ಹಾಕಲಾಗಿತ್ತು. ಇದನ್ನು ವ್ಯಕ್ತಿಯೊಬ್ಬರು ಶೂಟಿಂಗ್ ನಡೆಸಲಾಗ್ತಿದೆ ಅಂತಾ ತಪ್ಪಾಗಿ ತಿಳಿದು ಕಂಪ್ಲೆಂಟ್ ಕೊಟ್ಟಿದ್ದಾರೆ. ನಮಗೆ ಅದು ನಾಮದ ಚಿಲುಮೆ ಇರೋ ಜಾಗ. ಫಾರೆಸ್ಟ್ ಎಂಟ್ರಿ ಅನ್ನೋ ಮಾಹಿತಿ ಇರಲಿಲ್ಲ. ಅಲ್ಲದೇ ಅದು ಟ್ರಸ್ಟ್ ಪಾರ್ಕಿಂಗ್ ಆಗಿತ್ತು. ಹೀಗಾಗಿ ಅಲ್ಲಿ ವಾಹನ ನಿಲ್ಲಿಸಿದ್ವಿ. ನಮ್ಮದೇನು ಸೀಜ್ ಮಾಡಿಲ್ಲ. ಸೀಜ್ ಮಾಡೋದಾಗಿದ್ರೆ ಮೊದಲ ಕ್ಯಾಮೆರಾ ಕಿತ್ತುಕೊಳ್ಳಬೇಕಿತ್ತು. ಇಲಾಖೆಯ ನಿಯಮದಂತೆ ಒಂದಷ್ಟು ದಂಡ ವಿಧಿಸಿದ್ರು. ಅದನ್ನು ಕಟ್ಟಿದ್ವಿ ಅಷ್ಟೇ ಎಂದಿದ್ದಾರೆ.

publive-image

ಏನಿದು ಪ್ರಕರಣ?

ತುಮಕೂರಿನ ಪ್ರಸಿದ್ಧ ನಾಮದ ಚಿಲುಮೆ ಗೇಟ್ ಬಳಿ ಕಳೆದ 5 ದಿನದಿಂದ ಶೂಟಿಂಗ್ ನಡೆಯುತ್ತಿತ್ತು. ಈ ಸಿನಿಮಾದಲ್ಲಿ ನಟಿ ರಕ್ಷಿತಾ ಸಹೋದರ ರಾಣಾ ಹಾಗೂ ಮಹಾನಟಿ ವಿನ್ನರ್​ ಪ್ರಿಯಾಂಕಾ ನಟಿಸುತ್ತಿದ್ದರು. ಸುಮಾರು 50-100 ಜನ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅನುಮತಿ ಇಲ್ಲದೇ ಚಿತ್ರೀಕರಣ ಮಾಡುತ್ತಿದ್ದ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಚಿತ್ರೀಕರಣವನ್ನು ಬಂದ್ ಮಾಡಿಸಿದ್ದಲ್ಲದೆ, ಸಿನಿಮಾ ಚಿತ್ರೀಕರಣಕ್ಕೆ ಬಳಸಲಾಗಿರುವ ಕ್ಯಾರವಾನ್, ಕ್ಯಾಮರಾ ಲೈಟ್, ಲೈಟ್, ಅಡುಗೆ ಸಾಮಾಗ್ರಿ, ಚೇರ್​ಗಳು, ಟೆಂಪೊ ಟ್ರಾವೆಲರ್ ಅನ್ನು ವಶಕ್ಕೆ ಪಡೆಯಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment